AI Power: ಕರ್ನಾಟಕ ಕರೆಂಟ್ ಇಲಾಖೆಗೆ ಬರ್ತಿದೆ ‘ರೋಬೋಟ್’ ಶಕ್ತಿ, ಇನ್ಮುಂದೆ ನೀವು ದೂರು ನೀಡೋ ಮೊದಲೇ ಇವ್ರಿಗೆ ಗೊತ್ತಾಗುತ್ತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಿದ್ಯುತ್ ವಿತರಣಾ ಯಾಂತ್ರೀಕರಣ


Last Updated:

ಕರ್ನಾಟಕ ಇಂಧನ ಇಲಾಖೆ 2047ರೊಳಗೆ ವಿದ್ಯುತ್ ಗ್ರಿಡ್ ಅನ್ನು AI ಆಧಾರಿತ ಮುನ್ಸೂಚನೆ, ಡಿಜಿಟಲ್ ಟ್ವಿನ್ ತಂತ್ರಜ್ಞಾನದಿಂದ ನಿರ್ವಹಿಸಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ, ದೋಷ ಪತ್ತೆ ನಿಮಿಷಗಳಲ್ಲಿ ಸಾಧ್ಯ

ವಿದ್ಯುತ್ ವಿತರಣಾ ಯಾಂತ್ರೀಕರಣ
ವಿದ್ಯುತ್ ವಿತರಣಾ ಯಾಂತ್ರೀಕರಣ

ಬೆಂಗಳೂರು: ದೇಶಾದ್ಯಂತ ಆಡಳಿತ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಹೆಜ್ಜೆಯೂರಲಾರಂಭಿಸಿದೆ. ಇದೀಗ ಕರ್ನಾಟಕದ (Karnataka) ಇಂಧನ ಇಲಾಖೆಯೂ (Department of Energy) ಸಹ ತಂತ್ರಜ್ಞಾನದ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಹೌದು, ಭವಿಷ್ಯದಲ್ಲಿ ಕರ್ನಾಟಕದ ವಿದ್ಯುತ್ ಗ್ರಿಡ್ ಕಾರ್ಯಾಚರಣೆಗಳು ಸಂಪೂರ್ಣವಾಗಿ AI ಆಧಾರಿತ ಮುನ್ಸೂಚನೆಗಳ ಮೇಲೆ ನಡೆಯಲಿವೆ. 2047ರ ವೇಳೆಗೆ ಈ ಬೃಹತ್ ಗುರಿಯನ್ನು ತಲುಪಲು ಸರ್ಕಾರ (Govt) ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.

ವಾರಗಳ ಕೆಲಸ ಇನ್ಮುಂದೆ ಕೆಲವೇ ನಿಮಿಷಗಳಲ್ಲಿ

ಬೆಂಗಳೂರಿನಲ್ಲಿ ನಡೆದ ‘ಪ್ಯಾನ್ ಐಐಟಿ ಬೆಂಗಳೂರು ಶೃಂಗಸಭೆ’ಯಲ್ಲಿ ಮಾತನಾಡಿದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಈ ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಪ್ರತಿ ಟ್ರಾನ್ಸ್‍ಫಾರ್ಮರ್ ಹಾಗೂ ವಿದ್ಯುತ್ ವಿತರಣಾ ಲೈನ್‍ಗಳಲ್ಲಿ ಯಾವುದೇ ಸಮಸ್ಯೆ ಎದುರಾದರೂ, ವಾರಗಟ್ಟಲೆ ಕಾಯುವ ಅಗತ್ಯ ಇರುವುದಿಲ್ಲ. ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಎಲ್ಲಿ ದೋಷವಿದೆ ಎಂಬುದು ನಿಖರವಾಗಿ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವೆಬ್ ಸೈಟ್ ವರದಿ ಮಾಡಿದೆ.
ವಿದ್ಯುತ್ ಬೇಡಿಕೆ ಹೆಚ್ಚು

ರಾಜ್ಯದಲ್ಲಿ ಪ್ರತಿ ವರ್ಷ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೇವಲ ಅಂದಾಜಿನ ಮೇಲೆ ಕೆಲಸ ಮಾಡುವ ಬದಲು, ‘ಮುನ್ಸೂಚನೆ ಆಧಾರಿತ ವಿದ್ಯುತ್ ಆಡಳಿತ’ (Forecast-based governance) ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಸ್ಟಾರ್ಟ್‍ಅಪ್‍ಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಜೊತೆಯಾಗಿ ಕೆಲಸ ಮಾಡಲಿವೆ.

ಬರಲಿದೆ ಡಿಜಿಟಲ್ ಟ್ವಿನ್ ಮಾದರಿ

ಇಷ್ಟೇ ಅಲ್ಲದೆ, ಬೆಂಗಳೂರು ಸಂಚಾರ ಪೊಲೀಸರು ಬಳಸುವ ಮಾದರಿಯಲ್ಲೇ ಇಂಧನ ಇಲಾಖೆಗೂ ಸಹ ‘ಡಿಜಿಟಲ್ ಟ್ವಿನ್’ ತಂತ್ರಜ್ಞಾನವನ್ನು ತರಲು ಯೋಚಿಸಲಾಗುತ್ತಿದೆ. ಇದು ದತ್ತಾಂಶ ಆಧಾರಿತ ಮುನ್ಸೂಚನೆ ಹಾಗೂ ವಿದ್ಯುತ್ ನಿರ್ವಹಣೆಯನ್ನು ಬ್ಯಾಂಕಿಂಗ್ ಸಿಸ್ಟಮ್‍ನಷ್ಟೇ ಅತ್ಯಾಧುನಿಕ ಮತ್ತು ಸುಲಭವಾಗಿಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed