Last Updated:
Vijay: ನಟ ವಿಜಯ್ ಅವರು ದಿನವೂ ಬ್ಲ್ಯಾಕ್ & ವೈಟ್ ಧರಿಸಿದ್ದರೆ ಗೆಳತಿಗಾಗಿ ಫಂಕಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇದರ ಬೆಲೆ ಎಷ್ಟು ಗೊತ್ತಾ?
ದಳಪತಿ ವಿಜಯ್ (Vijay) ಅವರು ಇತ್ತೀಚೆಗೆ 52ನೇ ವರ್ಷದ ಬರ್ತ್ಡೇ ಆಚರಿಸಿದ್ದಾರೆ. ತ್ರಿಶಾ (Trisha) ಅವರು ವಿಜಯ್ ಅವರ ಬರ್ತ್ಡೇ ದಿನ ಯಾವುದೇ ವಿಶ್ ಮಾಡಿರಲಿಲ್ಲ. ಫೋಟೋ ಹಾಕಿರಲಿಲ್ಲ. ಆದರೆ ಒಂದು ದಿನ ಬಿಟ್ಟು ದಿಢೀರ್ ಆಗಿ ತಮಿಳುನಾಡು ಸಿಎಂ ವಿಜಯ್ (CM Vijay) ಜೊತೆಗಿನ ಫೋಟೋ ಅಪ್ಲೋಡ್ ಮಾಡಿದ್ದಾರೆ.
ವಿಜಯ್ ಅವರು ತ್ರಿಶಾ ಜೊತೆಗೆ ಬರ್ತ್ಡೇ ಆಚರಿಸುತ್ತಿರುವ ಫೋಟೋ ವೈರಲ್ ಆಗಿದೆ. ಆ ಫೋಟೋದಲ್ಲಿ ಬೇಬಿ ಪಿಂಕ್ ಹಾಗೂ ವೈಟ್ ಕಾಂಬಿನೇಷನ್ ಕೇಕ್, ತಿನಿಸುಗಳ ಮುಂದೆ ಕುಳಿತ ತ್ರಿಶಾ ವಿಜಯ್ ಫೋಟೋಗೆ ಪೋಸ್ ಕೊಟ್ಟಿದ್ದರು.
ಈ ಫೋಟೋ ತ್ರಿಶಾ ಅಪ್ಲೋಡ್ ಮಾಡ್ತಾ ಇದ್ದ ಹಾಗೆ ಇದಕ್ಕೆ 1 ಮಿಲಿಯನ್ ಲೈಕ್ಸ್ ಬಂದಿದ್ದು ಸದ್ಯ 4 ಮಿಲಿಯನ್ಗೂ ಹೆಚ್ಚು ಲೈಕ್ಸ್ ದಾಖಲಾಗಿದೆ.
ತ್ರಿಶಾ ಅವರು ಶೇರ್ ಮಾಡಿರುವ ಫೋಟೋದಲ್ಲಿ ವೈರಲ್ ಆಗಿದ್ದು ನಟ ಧರಿಸಿದ ಶರ್ಟ್. ದಿನವೂ ಬ್ಲಾಕ್ & ವೈಟ್ ಸೂಟ್ನಲ್ಲಿಯೇ ಕಾಣಿಸಿಕೊಳ್ಳುವ ಸಿಎಂ ವಿಜಯ್ ಅವರು ಗೆಳತಿ ಜೊತೆ ಫಂಕಿ ಶರ್ಟ್ ಧರಿಸಿಕೊಂಡು ಕಾಣಿಸಿಕೊಂಡಿದ್ದಾರೆ.
ದಳಪತಿ ವಿಜಯ್ ಅವರು ಧರಿಸಿದ ಶರ್ಟ್ ಮ್ಯಾಂಗ್ ಬ್ರ್ಯಾಂಡ್ನದ್ದಾಗಿದೆ. ಇದರ ಬೆಲೆ 5675 ರೂಪಾಯಿ. ಇದನ್ನು ಬ್ರ್ಯಾಂಡ್ ವೆಬ್ಸೈಟ್ ಮಾಹಿತಿಯಂತೆ ಬ್ರೌನ್ ಕಲರ್ ಪ್ಯಾಂಟ್ ಜೊತೆ ಧರಿಸಲಾಗುತ್ತದೆ.
ಸದ್ಯ ವಿಜಯ್ ಅವರು ಈ ಶರ್ಟ್ ಧರಿಸಿ ಕಾಣಿಸಿಕೊಂಡ ಬೆನ್ನಲ್ಲೇ ಈ ಶರ್ಟ್ ಹುಡುಕಾಟ ಜೋರಾಗಿದೆ. ಅವರ ಅಭಿಮಾನಿಗಳೆಲ್ಲ ಈ ಶರ್ಟ್ ಬಗ್ಗೆ ಕ್ರೇಜಿಯಾಗಿದ್ದಾರೆ.
ತಡವಾಗಿ ಬಂದ್ರೂ ತ್ರಿಶಾ ಪ್ರೀತಿ ತುಂಬಿದ ಈ ಪೋಸ್ಟ್ ಈಗ ಇಂಟರ್‌ನೆಟ್‌ನಲ್ಲಿ ಹವಾ ಎಬ್ಬಿಸಿದೆ. ‘ಇಬ್ಬರ ಬಾಂಡ್ ಇನ್ನೂ ಸ್ಟ್ರಾಂಗ್ ಆಗಿದೆ’ ಅಂತ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಜೋಡಿ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದಾಗಿದೆ. ಇವರಿಬ್ಬರು ಗಿಲ್ಲಿ, ಕುರುವಿ, ತಿರುಪಾಚಿ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಹಲವು ವರ್ಷಗಳ ಗ್ಯಾಪ್ ನಂತರ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಚಿತ್ರದ ಮೂಲಕ ಈ ಹಿಟ್ ಜೋಡಿ ಮತ್ತೆ ತೆರೆ ಹಂಚಿಕೊಂಡಿತ್ತು.
Bangalore,Karnataka
Jun 24, 2026 12:36 PM IST













