Kishen Bilagali: ಪಿಕಾಕ್ ಡ್ಯಾನ್ಸ್ ವಿಡಿಯೋ ಡಿಲೀಟ್! ‘ನಾನು ತಪ್ಪು ಮಾಡಿದ್ದೇನೆ’ ಕಿಶನ್ ಹೇಳಿದ್ದೇನು? | | ACTPnews

Kishen Bilagali Peacock dance video deleted and apologized for peacock feather used in reels video


ಪಿಕಾಕ್ ಡ್ಯಾನ್ಸ್ ಚರ್ಚೆ

ನಾನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದೇನೆ. ಫ್ಯಾನ್ಸಿ ಡ್ಯಾನ್ಸ್, ಕೃಷ್ಣ ಜನ್ಮಾಷ್ಟಮಿ ದಿನವೂ ನೋಡಿದ್ದೇನೆ. ದರ್ಗಾದಲ್ಲೂ ನವಿಲು ಗರಿಯಿಂದ ಆಶೀರ್ವಾದ ಮಾಡೋದನ್ನ ನೊಡಿದ್ದೇನೆ.

ಇನ್ಮುಂದೆ ಈ ರೀತಿ ಆಗೋದಿಲ್ಲ (ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)

ಇದನ್ನೆಲ್ಲ ನೋಡಿಯೇ ನಾನು ಈ ಕಾನ್ಸೆಪ್ಟ್ ಮಾಡಿದ್ದೇನೆ. ಆದರೆ, ಈ ಒಂದು ವಿಡಿಯೋ ಹಿಂದೆ ಸಾಕಷ್ಟು ಟೀಮ್ ಇರುತ್ತವೆ. ಹಾಗಾಗಿಯೇ ನವಿಲು ಗರಿಯನ್ನ ಬಾಡಿಗೆಗೆ ತಂದಿದ್ದೇವೆ. ಆದರೆ, ನವಿಲು ಗರಿಯನ್ನ ಬಾಡಿಗೆಗೂ ತರುವುದು ತಪ್ಪಾಗುತ್ತದೆ. 1972 ರ ವೈಲ್ಡ್ ಲೈಫ್ ಆ್ಯಕ್ಟ್ ಪ್ರಕಾರ ತಪ್ಪಾಗುತ್ತದೆ.

ನಾನು ತಪ್ಪು ಮಾಡಿದ್ದೇನೆ..

ನಾನು ಮಾಡಿರೋದು ಸರಿ ಅಂತ ನಾನು ಹೇಳೋದಿಲ್ಲ. ನನ್ನಿಂದ ತಪ್ಪಾಗಿದೆ. ನವಿಲು ಗರಿಯಗಳನ್ನ ಬಾಡಿಗೆಗೆ ತಂದು ಬಳಕೆ ಮಾಡೋದು ಕೂಡ ತಪ್ಪು ಅಂತ ಆರ್ಥ ಆಗಿದೆ.

ಈ ರೀತಿ ನಾನು ಮತ್ತೊಮ್ಮೆ ಮಾಡೋದಿಲ್ಲ. ನನ್ನಿಂದ ತಪ್ಪಾಗಿದೆ ಅಂತ ನಿಮಗೂ ಅನಿಸಿದ್ರೆ, ಅದಕ್ಕೆ ಕ್ಷಮೆ ಕೇಳುತ್ತೇನೆ. ಹಾಗೆ ನಮ್ಮ ವಿಡಿಯೋವನ್ನ ನಾವು ತೆಗೆದು ಹಾಕಿದ್ದೇವೆ ಅಂತಲೇ ಕಿಶನ್ ಬಿಳಗಲಿ ಹೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಅಲ್ಲಿ ವಿಡಿಯೋ

ಕಿಶನ್ ಬಿಳಗಲಿ ಈ ಒಂದು ವಿಡಿಯೋವನ್ನ ಕಿಶನ್ ಬಿಳಗಲಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಆ ನವಿಲು ಡ್ಯಾನ್ಸ್ ವಿಡಿಯೋವನ್ನ ತೆಗೆದಿರೋದಾಗಿಯೂ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಮೂಲಕ ಕಿಶನ್ ನಾಡಿನ ಜನತೆಗೆ ಕ್ಷಮೆ ಕೇಳಿದ್ದಾರೆ. ಮೊನ್ನೆ ಕಿಶನ್ ಒಂದು ವಿಡಿಯೋ ಶೇರ್ ಮಾಡಿದ್ದರು. ಇದರಲ್ಲಿ ಕಿಶನ್ ನವಿಲ ಗರಿಗಳನ್ನ ಬಳಕೆ ಮಾಡಿದ್ದರು. ಗಂಡು ನವಿಲಿನ ತರವೇ ಡ್ಯಾನ್ಸ್ ಮಾಡಿದ್ದರು.

Kishen Bilagali Peacock dance video deleted and apologized for peacock feather used in reels video

ಬಾಡಿಗೆಯ ಗರಿಗಳು…

(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)

ನಿವೇದಿತಾ ಗೌಡ ಸಾಥ್

ಬಿಗ್ ಬಾಸ್ ಫೇಮ್ ನಿವೇದಿತಾ ಗೌಡ ಕೂಡ ಈ ಒಂದು ಡ್ಯಾನ್ಸ್ ಅಲ್ಲಿ ಸಾಥ್ ಕೊಟ್ಟಿದ್ದರು. ತೇಟ್ ನವಿಲಿನ ರೀತಿನೇ ಇವರು ಇಲ್ಲಿ ಡ್ಯಾನ್ಸ್ ಮಾಡಿದ್ದರು.

ಅರಣ್ಯ ಇಲಾಖೆಗೆ ದೂರು

ಆದರೆ, ಸಾಮಾಜಿಕ ಕಾರ್ತಕರ್ತ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ದರು. ನವೀಲು ಗರಿ ಧರಿಸಿ ರೀಲ್ಸ್ ಮಾಡಿದ್ದಾರೆ. ಇವು ನಿಜವಾದ ನವಿಲು ಗರಿ ಅಂತ ಅನುಮಾನದ ಇದೆ. ಹಾಗಾಗಿಯೇ ಸಮಗ್ರ ತನಿಖೆ ನಡೆಸಬೇಕು ಅಂತ ದೂರು ಕೊಟ್ಟಿದ್ದರು.

ಇದು ನಿಜವಾದ ಗರಿನಾ? ಅಥವಾ ಕೃತಕ ಗರಿನಾ ಅನ್ನೋದನ್ನ ವೈಜ್ಞಾನಿಕವಾಗಿ ದೃಢೀಕರಿಸಬೇಕು. ಒಂದು ವೇಳೆ ನೈಜವಾಗಿದ್ದರೆ, ಅದರ ಮೂಲ ಮತ್ತು ಸಾಗಣೆ ಬಗ್ಗೆ ತನಿಖೆ ಆಗ್ಬೇಕು ಅಂತ ದೂರು ಕೊಟ್ಟಿದ್ದರು.

ಈ ಎಲ್ಲ ಬೆಳವಣಿಗೆಯ ಬಳಿಕ ಕಿಶನ್ ಬಿಳಗಲಿ ತಮ್ಮ ರೀಲ್ಸ್ ವಿಡಿಯೋವನ್ನ ತೆಗೆದಿದ್ದಾರೆ. ನನ್ನಿಂದ ತಪ್ಪಾಗಿದೆ. ಈ ತಪ್ಪು ಯಾರೂ ಮಾಡ್ಬೇಡಿ. ಇನ್ಮುಂದೆ ಈ ರೀತಿ ತಪ್ಪಾಗುವುದಿಲ್ಲ ಅಂತಲೂ ಕಿಶನ್ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed