Last Updated:
ವಿಷ್ಣು ಶಿಬುವನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನನ್ನು ಅವನ ಊರಿಗೆ ಕಳುಹಿಸಲಾಗಿದೆ’ ಎಂದು ಹೆಚ್ಚುವರಿ ಎಸ್ಪಿ ಹೇಳಿದರು, ವೀಡಿಯೊ ಮತ್ತು ಸಿಸಿಟಿವಿ ದೃಶ್ಯಗಳಲ್ಲಿ ಗುರುತಿಸಲಾದ ನಂತರ ಮೂವರನ್ನು ಬಂಧಿಸಲಾಗಿದೆ. ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದಾಗಿ ಕೆಲಸಗಾರನಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ.
ಸಂಬಲ್ಪುರ: ಒಡಿಶಾದ ಸಂಬಲ್ಪುರದಲ್ಲಿ ಮಕ್ಕಳ ಕಳ್ಳನೆಂದು ಶಂಕಿಸಿ ಕೇರಳದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಒಂದು ದಿನದ ನಂತರ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಈ ಸಂಬಂಧ ಖೇತ್ರಾಜ್ಪುರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಸೂರ್ಯ ನಾರಾಯಣ್ ದಾಸ್ ಪ್ರಕರಣ ದಾಖಲಿಸಿದ್ದಾರೆ. ‘ಈ ಸಂಬಂಧ ಇದುವರೆಗೆ ಮೂವರನ್ನು ಬಂಧಿಸಲಾಗಿದೆ’ ಎಂದು ಸಂಬಲ್ಪುರ ಹೆಚ್ಚುವರಿ ಎಸ್ಪಿ ಅಜಯ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಸಂತ್ರಸ್ತ ಕೇರಳದ ವಿಷ್ಣು ಶಿಬು ಬರ್ಗಢ ಜಿಲ್ಲೆಯ ಗುತ್ತಿಗೆದಾರರ ಬಳಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಅವರು ಹೇಳಿದರು.
‘ವಿಷ್ಣು ಶಿಬು ಕೆಲಸ ಕಳೆದುಕೊಂಡ ನಂತರ ಬರ್ಗಢವನ್ನು ತೊರೆದು ಕೆಲಸ ಹುಡುಕಿಕೊಂಡು ಸಂಬಲ್ಪುರಕ್ಕೆ ಹೋಗಿದ್ದರು. ಕೆಲವು ಸ್ಥಳೀಯರು ಆತ ಅಪರಾಧ ಮಾಡಲು ನಗರದಲ್ಲಿದ್ದಾನೆ ಎಂದು ಶಂಕಿಸಿ ಧೋಬಾಪಾಡ ಚೌಕದಲ್ಲಿ ಆತನನ್ನು ಥಳಿಸಿದರು. ಭಾಷೆಯ ಅಡಚಣೆಯಿಂದಾಗಿ ವಿಷ್ಣುವಿಗೆ ಸ್ಥಳೀಯರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಆಗ ಆತನನ್ನು ಮನಸೋಇಚ್ಛೆ ಥಳಿಸಲಾಯಿತು’ ಎಂದು ಅಜಯ್ ಕುಮಾರ್ ಮಿಶ್ರಾ ಹೇಳಿದರು.
ವಿಷ್ಣು ಶಿಬುವನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನನ್ನು ಅವನ ಊರಿಗೆ ಕಳುಹಿಸಲಾಗಿದೆ’ ಎಂದು ಹೆಚ್ಚುವರಿ ಎಸ್ಪಿ ಹೇಳಿದರು, ವೀಡಿಯೊ ಮತ್ತು ಸಿಸಿಟಿವಿ ದೃಶ್ಯಗಳಲ್ಲಿ ಗುರುತಿಸಲಾದ ನಂತರ ಮೂವರನ್ನು ಬಂಧಿಸಲಾಗಿದೆ. ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದಾಗಿ ಕೆಲಸಗಾರನಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ.
ರಾಯಗಡದ ಕಲ್ಯಾಣ್ಸಿಂಗ್ಪುರದಲ್ಲಿ ಮಕ್ಕಳ ಕಳ್ಳರು ಎಂಬ ಶಂಕೆಯ ಮೇಲೆ ದೆಹಲಿಯ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
Sambalpur,Odisha (Orissa)