Srividya Raj: ಖಂಡಿತ ನಾಶ ಮಾಡದೆ ಬಿಡುವುದಿಲ್ಲ, ಹುಷಾರಾಗಿರಿ! ಪೋಸ್ಟ್ ಹಂಚಿಕೊಂಡ ದಿಲೀಪ್ ರಾಜ್ ಪತ್ನಿ‌‌! | | ACTPnews

ನೀನು ಇಲ್ಲದೆ ನಾನು ಹೊಸ ಜೀವನ ಕಟ್ಟಿಕೊಳ್ಳುವೆ; ಆದರೆ ಮನಸ್ಸಿಗೆ ಶಾಂತಿನೇ ಇಲ್ವಲ್ಲ!


Last Updated:

Srividya Raj: ನಟ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಪ್ರತೀ ಕ್ಷಣವೂ ಪತಿಯ ಯೋಚನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಹಾಗೆಯೇ ಪತಿಯ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನೀನು ಇಲ್ಲದೆ ನಾನು ಹೊಸ ಜೀವನ ಕಟ್ಟಿಕೊಳ್ಳುವೆ; ಆದರೆ ಮನಸ್ಸಿಗೆ ಶಾಂತಿನೇ ಇಲ್ವಲ್ಲ!
ನೀನು ಇಲ್ಲದೆ ನಾನು ಹೊಸ ಜೀವನ ಕಟ್ಟಿಕೊಳ್ಳುವೆ; ಆದರೆ ಮನಸ್ಸಿಗೆ ಶಾಂತಿನೇ ಇಲ್ವಲ್ಲ!

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ನಿಧನ ಹೊಂದಿ ಕೆಲ ದಿನಗಳಷ್ಟೆ ಕಳೆದಿದೆ. ಆದ್ರೆ ದಿಲೀಪ್ ರಾಜ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ನೆನೆದು ಅಭಿಮಾನಿಗಳು, ಸ್ನೇಹಿತರು, ಕುಟುಂಬ ಸದಸ್ಯರು ತೀವ್ರ ದುಖಃ ವ್ಯಕ್ತಪಡಿಸಿದ್ದರು. ಅದರಲ್ಲೂ ಮುಖ್ಯವಾಗಿ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ (Srividya) ಅವರ ನೋವು ಯಾರಿಗೂ ಬೇಡ. ಬರೋಬ್ಬರಿ ಇಪ್ಪತೈದು ವರ್ಷಗಳ ದಾಂಪತ್ಯ.. ಆದ್ರೆ ಇದೀಗ ದಿಲೀಪ್ ರಾಜ್ , ಶ್ರೀವಿದ್ಯಾರನ್ನು ಬಿಟ್ಟು ಹೊರಟು ದೂರ ಹೋಗಿದ್ದಾರೆ. ಇದೀಗ ಪತ್ನಿ ಶ್ರೀವಿದ್ಯಾ ಪ್ರತೀ ಕ್ಷಣವೂ ಪತಿಯ ಯೋಚನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಹಾಗೆಯೇ ಪತಿಯ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಶ್ರೀ ವಿದ್ಯಾ ಪೋಸ್ಟ್ ನಲ್ಲಿ ಏನಿದೆ?

ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ – ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆ ಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೂಷಿಸುತ್ತಾ ಇರಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು. ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು.

ಯಾಕೆಂದರೆ ದೇವರಿದ್ದಾನೆ, ಹುಷಾರಾಗಿರಿ. ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರ್ತಾರೋ  ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ. ಅವನು ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಖಂಡಿತ ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ, ಹುಷಾರಾಗಿರಿ ಎಂದು ಶ್ರೀವಿದ್ಯಾ ಬರೆದುಕೊಂಡಿದ್ದಾರೆ .

ಇದನ್ನೂ ಓದಿ: Peddi Shivanna: ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್! ಎದುರಾಳಿಗೆ ಶಾಕ್ ಮೇಲೆ ಶಾಕ್!

ಇನ್ನು ಇಂದು ಮುಂಜಾನೆಯಷ್ಟೇ ಹಿಟ್ಲರ್ ಕಲ್ಯಾಣ್ ಸೀರಿಯಲ್‌ನ ಒಂದು ದೃಶ್ಯವನ್ನ ಶ್ರೀವಿದ್ಯಾ ಹಂಚಿಕೊಂಡಿದ್ದಾರೆ. ಈ ಒಂದು ದೃಶ್ಯವನ್ನ ಹಂಚಿಕೊಂಡ ಶ್ರೀವಿದ್ಯಾ, ನನ್ನ ಪತಿ ಹಂಕ್ ಅಂತಲೇ ಬರೆದುಕೊಂಡಿದ್ದಾರೆ. “Hunk” ಅಂತ ಒಂದೇ ಒಂದು ಪದ ಬರೆದುಕೊಂಡಿದ್ದಾರೆ. ಈ ಪದಕ್ಕೂ ಹಂಚಿಕೊಂಡ ವಿಡಿಯೋಗೂ ಸಖತ್ ಸಿಂಕ್ ಆಗುತ್ತದೆ. ಈ ದೃಶ್ಯದಲ್ಲಿ ದಿಲೀಪ್ ರಾಜ್ ಮೆಟ್ಟಿಲು ಇಳಿದು ಕೆಳಗೆ ಬರ್ತಾರೆ. ಬಂದು ಒಂದು ವಾಕ್ ಮಾಡ್ತಾರೆ. ಕೊನೆಗೆ ಒಂದು ಲುಕ್ ಕೊಡ್ತಾರೆ. ತುಂಬಾನೆ ಚಂದನೆಯ ಒಂದು ಸ್ಮೈಲ್ ಕೊಡ್ತಾರೆ. ಈ ಎಲ್ಲವನ್ನು ಶ್ರೀವಿದ್ಯಾ ‘ಹಂಕ್’ ಅನ್ನುವ ಒಂದೇ ಪದದಲ್ಲಿ ಕಟ್ಟಿಕೊಟ್ಟಿದ್ದಾರೆ.

ದಿಲೀಪ್ ಹೋಗಿ 6 ದಿನಗಳು.

ದಿಲೀಪ್ ರಾಜ್ ಅವರು ಹೋಗಿ 6 ದಿನಗಳು ಕಳೆದಿವೆ. ಮೇ-13 ರಂದು ಹೃದಯಾಘಾತದಿಂದ ಇವರು ಕೊನೆಯುಸಿರೆಳೆದರು. ಇದರಿಂದ ಇಡೀ ಫ್ಯಾಮಿಲಿ ಆ ಶಾಕ್ ಅಲ್ಲಿಯೇ ಇದೆ. ಮಕ್ಕಳಾದ ಅದಿತಿ ಮತ್ತು ಧೃತಿ ಅಪ್ಪನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪತ್ನಿ ಶ್ರೀವಿದ್ಯಾ ಕೂಡ ದಿಲೀಪ್ ರಾಜ್ ನೆನಪಿನಲ್ಲಿಯೇ ಇದ್ದಾರೆ. ಪತಿ ಜೊತೆಗಿನ ವಿಡಿಯೋಗಳನ್ನೆ ಒಂದೊಂದಾಗಿಯೇ ಹಂಚಿಕೊಳ್ಳುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed