Last Updated:
ಐಪಿಎಲ್ನ ಉದ್ಘಾಟನಾ ಋತುವಿನಲ್ಲಿ ಅನ್ಕ್ಯಾಪ್ಡ್ ಆಟಗಾರನಾಗಿ ಆರ್ಸಿಬಿಗೆ ಸೇರಿದ ವಿರಾಟ್ ಕೊಹ್ಲಿ, ಕಳೆದ 19 ಋತುಗಳಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ವಿರಾಟ್ ಕೊಹ್ಲಿ ಆಡಿದಷ್ಟು ಬೇರೆ ಯಾವುದೇ ಆಟಗಾರ ಒಂದೇ ಫ್ರಾಂಚೈಸಿಗಾಗಿ ಆಡಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಿಇಒ ರಾಜೇಶ್ ಮೆನನ್ (Rajesh Menon) ತಂಡದ ಅಭಿಮಾನಿಗಳೊಂದಿಗೆ ಒಳ್ಳೆಯ ಸುದ್ದಿ ಹಂಚಿಕೊಂಡಿದ್ದಾರೆ. ಆರ್ಸಿಬಿ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) 2030ರ ಐಪಿಎಲ್ (IPL) ಋತುವಿನವರೆಗೆ ಆರ್ಸಿಬಿಯೊಂದಿಗೆ ಮುಂದುವರಿಯುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ನಮ್ಮ ಫ್ರಾಂಚೈಸಿಯ ಹೃದಯ ಬಡಿತ ಎಂದು ಬಣ್ಣಿಸಿದ ಅವರು, ಅವರಿಲ್ಲದೆ ಆರ್ಸಿಬಿಯನ್ನು ಊಹಿಸಿಕೊಳ್ಳುವುದು ಅಸಾಧ್ಯವೆಂದು ಹೇಳಿದ್ದಾರೆ. ವಿರಾಟ್ ಕನಿಷ್ಠ 3-4 ವರ್ಷಗಳ ಕಾಲ ತಂಡದೊಂದಿಗೆ ಇರಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಆರ್ಸಿಬಿ ಮತ್ತು ವಿರಾಟ್ ಕೊಹ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೊಹ್ಲಿ ಆರಂಭದಿಂದಲೂ ಆರ್ಸಿಬಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದರೂ, ಅವರಿಲ್ಲದೆ ಆರ್ಸಿಬಿಯನ್ನು ಊಹಿಸಲು ಸಾಧ್ಯವಿಲ್ಲ. ಅವರು ಇನ್ನೂ 3-4 ವರ್ಷಗಳ ಕಾಲ ಆರ್ಸಿಬಿ ಪರ ಆಡುವುದನ್ನು ಮುಂದುವರಿಸುತ್ತಾರೆ ಎಂದು ನಾನು ನಂಬುತ್ತೇನೆ.
ನನ್ನ ಪ್ರಕಾರ ಕನಿಷ್ಠ ನಾಲ್ಕು ವರ್ಷಗಳ ಕಾಲವಾದರೂ ಐಪಿಎಲ್ ಆಡುತ್ತಾರೆ. ಕೊಹ್ಲಿ ಸಖತ್ ಫಿಟ್ ಆಗಿದ್ದಾರೆ ಮತ್ತು ಅವರ ರನ್ಗಳ ಹಸಿವು ಎಂದಿಗೂ ಕಡಿಮೆಯಾಗುವುದಿಲ್ಲ. ಐಪಿಎಲ್ 2026 ಋತುವಿನಲ್ಲಿ ಕೊಹ್ಲಿ ಪ್ರದರ್ಶಿಸಿದ ಸಾಮರ್ಥ್ಯ, ರನ್ ಗಳಿಸುವಿಕೆ ಮತ್ತು ಮೈದಾನದಲ್ಲಿ ಅವರ ಆಟಿಟ್ಯೂಡ್ ಗಮನಾರ್ಹವಾಗಿತ್ತು. ಮುಂದಿನ 3-4 ವರ್ಷಗಳ ಕಾಲ ಅವರು ಐಪಿಎಲ್ನಲ್ಲಿ ಆಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದು ರಾಜೇಶ್ ಮೆನನ್ ಹೇಳಿದರು.
ಐಪಿಎಲ್ನ ಉದ್ಘಾಟನಾ ಋತುವಿನಲ್ಲಿ ಅನ್ಕ್ಯಾಪ್ಡ್ ಆಟಗಾರನಾಗಿ ಆರ್ಸಿಬಿಗೆ ಸೇರಿದ ವಿರಾಟ್ ಕೊಹ್ಲಿ, ಕಳೆದ 19 ಋತುಗಳಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ವಿರಾಟ್ ಕೊಹ್ಲಿ ಆಡಿದಷ್ಟು ಬೇರೆ ಯಾವುದೇ ಆಟಗಾರ ಒಂದೇ ಫ್ರಾಂಚೈಸಿಗಾಗಿ ಆಡಿಲ್ಲ. ಅವರು ದೀರ್ಘಕಾಲದವರೆಗೆ ಆರ್ಸಿಬಿಯ ನಾಯಕತ್ವ ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ, ಆರ್ಸಿಬಿ ಐಪಿಎಲ್ 2016 ರ ಫೈನಲ್ ತಲುಪಿತು, ಆದರೆ ಪ್ರಶಸ್ತಿಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತು.
2026ರ ಐಪಿಎಲ್ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ವಿರಾಟ್ ಕೊಹ್ಲಿ ಅದ್ಭುತ ಅರ್ಧಶತಕ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿದ್ದರು. ಆ ಫೈನಲ್ನಲ್ಲಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದ ನಂತರ, ಅವರು ತಮ್ಮ ಮನಸ್ಥಿತಿಯ ಬಗ್ಗೆ ಗಮನಾರ್ಹವಾದ ಕಾಮೆಂಟ್ಗಳನ್ನು ಮಾಡಿದ್ದರು. ಅವರು ಮೈದಾನದಲ್ಲಿನ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವುದಾಗಿ ಮತ್ತು ಒತ್ತಡವು ವಾಸ್ತವವಾಗಿ ತಮ್ಮನ್ನ ಇನ್ನೂ ಉತ್ತಮ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.
“ನಾನು ಫೀಲ್ಡಿಂಗ್ ಮಾಡುತ್ತಿರಲಿ ಅಥವಾ ಬ್ಯಾಟಿಂಗ್ ಮಾಡುತ್ತಿರಲಿ, ನಾನು ನನ್ನ ಹೃದಯ ಮತ್ತು ಆತ್ಮದಿಂದ ಆಡುತ್ತೇನೆ. ಏಕೆಂದರೆ ಒಂದು ದಿನ, ಇದೆಲ್ಲವೂ ಕೊನೆಗೊಳ್ಳುತ್ತದೆ. ನಾನು ಮೈದಾನದಲ್ಲಿ ಕಳೆಯುವ ಪ್ರತಿ ದಿನವನ್ನು ಎಂಜಾಯ್ ಮಾಡಲು ಬಯಸುತ್ತೇನೆ. ನಾನು ಹೆಚ್ಚಿನ ಒತ್ತಡದ ಸಂದರ್ಭಗಳು ಮತ್ತು ಸವಾಲಿನ ಕ್ಷಣಗಳನ್ನು ಎದುರು ನೋಡುತ್ತಿದ್ದೇನೆ. ಆ ಸಮಯದಲ್ಲಿ, ನಾನು ನನ್ನನ್ನು ಪರೀಕ್ಷಿಸಿಕೊಳ್ಳಲು ಬಯಸುತ್ತೇನೆ. ನಾವು ಆ ಗೆರೆಯನ್ನು ದಾಟಿ ಗೆಲುವು ಸಾಧಿಸಿದಾಗ, ಅದು ನಮ್ಮನ್ನು ಅಸಾಧಾರಣ ಆಟಗಾರನನ್ನಾಗಿ ಪರಿವರ್ತಿಸುತ್ತದೆ” ಎಂದು ಕೊಹ್ಲಿ ಹೇಳಿದರು.
Jun 20, 2026 10:56 PM IST













