Hanuman Temple: ಹನುಮಾನ್ ದೇಗುಲದ ಮೇಲ್ಛಾವಣಿ ಕುಸಿತ, 5 ಮಂದಿ ಸಾವಿನ ಶಂಕೆ! ಅವಶೇಷಗಳಡಿ ಸಿಲುಕಿ ಭಕ್ತರ ಪರದಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

Hanuman Temple: ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಮೇಲ್ಛಾವಣಿಯ ಒಂದು ಭಾಗ ಕುಸಿದುಹೋದಿದೆ. ಪರಿಣಾಮ ಹಲವಾರು ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊಂಡಿದ್ದರು. ಈ ಪೈಕಿ ತೀವ್ರ ಗಾಯಗೊಂಡು 5 ಮಂದಿ ಸಾವನ್ನಪ್ಪಿದ್ದಾರೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರ: ಪರ್ಭಾನಿ (Parbhani) ಜಿಲ್ಲೆಯ ಯಶ್ವಾಡಿ (Yashwadi) ಗ್ರಾಮದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ (Hanuman temple) ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಮೇಲ್ಛಾವಣಿಯ ಒಂದು ಭಾಗ ಕುಸಿದುಹೋದಿದೆ. ಪರಿಣಾಮ ಹಲವಾರು ಭಕ್ತರು (Devotees) ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊಂಡಿದ್ದರು. ಈ ಪೈಕಿ ತೀವ್ರ ಗಾಯಗೊಂಡು 5 ಮಂದಿ ಸಾವನ್ನಪ್ಪಿದ್ದಾರೆ ಅಂತ ಇಂಡಿಯಾ ಟುಡೇ ವರದಿ ಮಾಡಿದೆ. ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

ಹನುಮಾನ್ ದೇವಾಲಯದಲ್ಲಿ ಕುಸಿದ ಮೇಲ್ಛಾವಣಿ

ಪ್ರಾಥಮಿಕ ಮಾಹಿತಿಯ ಪ್ರಕಾರ, ಶನಿವಾರದಂದು ಸಾಮಾನ್ಯವಾಗಿ ಹನುಮಾನ್ ದೇವಾಲಯಗಳಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ, ದರ್ಶನಕ್ಕಾಗಿ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದರು. ಜನದಟ್ಟಣೆಯ ಸಮಯದಲ್ಲಿ, ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಛಾವಣಿಯ ಒಂದು ಭಾಗ ಮತ್ತು ಆಧಾರಸ್ತಂಭವು ಇದ್ದಕ್ಕಿದ್ದಂತೆ ಕುಸಿದು ಕೆಳಗೆ ನಿಂತಿದ್ದ ಭಕ್ತರ ಮೇಲೆ ಬಿದ್ದಿದೆ ಎನ್ನಲಾಗಿದೆ.

ಐವರು ಭಕ್ತರು ಸಾವು, 10 ಮಂದಿಗೆ ಗಂಭೀರ ಗಾಯ

ಘಟನೆಯಲ್ಲಿ ಐವರು ಭಕ್ತರು ಸಾನನ್ನಪ್ಪಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಇನ್ನು ಅವಶೇಷಗಳ ಅಡಿ ಸಿಲುಕಿ ಕನಿಷ್ಠ ಎಂಟರಿಂದ ಹತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed