Darshan: ‘ನಾನ್​ ಬರ್ತಿದ್ದೀನಿ ಚಿನ್ನ’! ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಶೀಘ್ರದಲ್ಲೇ ದಾಸನ ನೋಡೋ ಚಾನ್ಸ್ | | ACTPnews

ದರ್ಶನ್


Last Updated:

ದರ್ಶನ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. ಡೆವಿಲ್ ಚಿತ್ರದ OTT ಬಿಡುಗಡೆಗೆ ಸಂಬಂಧಿಸಿದ ಮಹತ್ವದ ಸುಳಿವು ಇದೀಗ ಹೊರಬಿದ್ದಿದ್ದು, ಶೀಘ್ರದಲ್ಲೇ ಝೀ5 ವೇದಿಕೆಯಲ್ಲಿ ಡೆವಿಲ್ ಸಿನಿಮಾ ಬಿಡುಗಡೆಯಾಗಲಿದೆ.

ದರ್ಶನ್
ದರ್ಶನ್

ಸ್ಯಾಂಡಲ್‌ವುಡ್ ನಟ ದರ್ಶನ್ ಅಭಿನಯದ ‘ಡೆವಿಲ್'(Darshan) ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಆರು ತಿಂಗಳು ಕಳೆದಿದ್ದರೂ, ಚಿತ್ರ ಇನ್ನೂ OTT ವೇದಿಕೆಗೆ ಬಂದಿರಲಿಲ್ಲ. ಇದರಿಂದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಡೆವಿಲ್ (Devil) OTTಗೆ ಯಾವಾಗ ಬರುತ್ತದೆ?, ಮತ್ತೊಮ್ಮೆ ದಾಸನನ್ನು ತೆರೆ ಮೇಲೆ ಯಾವಾಗ ನೋಡಬಹುದು? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದವು. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ಬಂದೇ ಬಿಟ್ಟಿದೆ.

ದರ್ಶನ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. ಡೆವಿಲ್ ಚಿತ್ರದ OTT ಬಿಡುಗಡೆಗೆ ಸಂಬಂಧಿಸಿದ ಮಹತ್ವದ ಸುಳಿವು ಇದೀಗ ಹೊರಬಿದ್ದಿದ್ದು, ಶೀಘ್ರದಲ್ಲೇ ಝೀ5 ವೇದಿಕೆಯಲ್ಲಿ ಡೆವಿಲ್ ಸಿನಿಮಾ ಬಿಡುಗಡೆಯಾಗಲಿದೆ.

ಕಳೆದ ಡಿಸೆಂಬರ್ 11ರಂದು ಬಿಡುಗಡೆಯಾದ ಡೆವಿಲ್ ಸಿನಿಮಾ ಆರಂಭದಲ್ಲೇ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಿಡುಗಡೆಯಾದ ಮೊದಲ ದಿನವೇ ಸುಮಾರು 13.5 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು.

ಮೊದಲ ದಿನದ ದಾಖಲೆಮಟ್ಟದ ಕಲೆಕ್ಷನ್ ನಂತರ ಡೆವಿಲ್ ಚಿತ್ರದ ಬಾಕ್ಸ್ ಆಫೀಸ್ ಪಯಣ ನಿಧಾನಗತಿಯತ್ತ ಸಾಗಿತ್ತು. ಆರಂಭಿಕ ಉತ್ಸಾಹದ ಬಳಿಕ ಚಿತ್ರದ ಗಳಿಕೆ ನಿರೀಕ್ಷಿತ ಮಟ್ಟದಲ್ಲಿ ಮುಂದುವರಿಯಲಿಲ್ಲ. ಆದರೂ ಒಟ್ಟಾರೆಯಾಗಿ ಸಿನಿಮಾ ಸುಮಾರು 40 ಕೋಟಿ ರೂಪಾಯಿಗಳವರೆಗೆ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

ಈಗ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಸಿಕ್ಕೇಬಿಟ್ಟಿದೆ ಡೆವಿಲ್ ಚಿತ್ರದ OTT ಹಕ್ಕುಗಳನ್ನು ಪಡೆದಿರುವ ಝೀ5 ಸಂಸ್ಥೆ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ‘ನಾನ್​ ಬರ್ತಿದ್ದೀನಿ ಚಿನ್ನ’ ಎಂಬ ಸಾಲನ್ನು ಬರೆದುಕೊಂಡಿರುವ ಸ್ಪೆಷಲ್ ಫೋಟೋ ಒಂದನ್ನು ರಿಲೀಸ್ ಮಾಡಲಾಗಿದೆ.

ಝೀ5, ಚಿತ್ರದ OTT ಬಿಡುಗಡೆ ಬಗ್ಗೆ ಸುಳಿವು ನೀಡಿದ್ದರೂ, ಸ್ಟ್ರೀಮಿಂಗ್ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಇದರಿಂದ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಯಾವ ದಿನ ಚಿತ್ರ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಅಧಿಕೃತ ಘೋಷಣೆಯ ನಿರೀಕ್ಷೆಯಲ್ಲಿರುವ ಅಭಿಮಾನಿಗಳು, ಝೀ5ನ ಮುಂದಿನ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed