Pavithra Gowda: ಜೈಲಲ್ಲಿ ಪವಿತ್ರಾ ಗೌಡಗೆ ನಿಜಕ್ಕೂ ಸಿಗ್ತಿತ್ತಾ ರಾಜಾತಿಥ್ಯ? ಜೈಲಾಧಿಕಾರಿಗಳಿಂದ ಮಹತ್ವದ ಹೇಳಿಕೆ | | ACTPnews

ಪವಿತ್ರಾ ಗೌಡ


Last Updated:

ಆರೋಪಗಳು ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಜೈಲಧಿಕಾರಿಗಳು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿ ಪವಿತ್ರಾ ಗೌಡಗೆ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು  ಸ್ಷಷ್ಟನೆ ನೀಡಿದ್ದಾರೆ

ಪವಿತ್ರಾ ಗೌಡ
ಪವಿತ್ರಾ ಗೌಡ

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ‌ (Renukaswamy Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ (Sandhya Pavitra Nagaraj) ಎಂಬುವರು ಖಾಸಗಿ ಮಾಧ್ಯಮದ ಮುಂದೆ ಮಾಡಿದ್ದ ಆರೋಪಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಆದರೆ ಇದೀಗ ಈ ಎಲ್ಲ ಆರೋಪಗಳನ್ನು ಜೈಲಧಿಕಾರಿಗಳು ಅಧಿಕೃತವಾಗಿ ತಳ್ಳಿ ಹಾಕಿದ್ದು, ಪವಿತ್ರಾ ಗೌಡ ಅವರಿಗೆ ಯಾವುದೇ ರೀತಿಯ ವಿಶೇಷ ಸೌಲಭ್ಯ ಅಥವಾ ರಾಜಾತಿಥ್ಯ ನೀಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಸಂಧ್ಯಾ ಪವಿತ್ರ ನಾಗರಾಜ್ ಎಂಬುವರು ಮಾಧ್ಯಮದ ಮುಂದೆ ಹಲವು ಆರೋಪಗಳನ್ನು ಮಾಡಿದ್ದರು. ಜೈಲಿನ ಭದ್ರತಾ ಸಿಬ್ಬಂದಿಯೇ ಪವಿತ್ರಾ ಗೌಡ ಅವರ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಮನೆಯ ಊಟವನ್ನು ಪ್ರತಿದಿನ ಬಾಕ್ಸ್‌ನಲ್ಲಿ ತಂದು ಕೊಡಲಾಗುತ್ತಿದೆ. ಜೈಲಿನಲ್ಲೇ ಮೇಕಪ್ ಮಾಡಿಕೊಳ್ಳಲು ವ್ಯವಸ್ಥೆ ಇದೆ, ಹೀಗೆ ಅನೇಕ ಆರೋಪಗಳನ್ನು ಸಂಧ್ಯಾ ನಾಗರಾಜ್ ಮಾಡಿದ್ದರು.

ಜೈಲಧಿಕಾರಿಗಳಿಂದ ಅಧಿಕೃತ ಸ್ಪಷ್ಟನೆ

ಆರೋಪಗಳು ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಜೈಲಧಿಕಾರಿಗಳು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿ ಪವಿತ್ರಾ ಗೌಡಗೆ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು  ಸ್ಷಷ್ಟನೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ಕನ್ನಡ ವರದಿಮಾಡಿದೆ.

ಇನ್ನು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿರುವ ಪವಿತ್ರಾ ಗೌಡ, ಜೈಲಿನಲ್ಲಿದ್ದೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ತಮ್ಮ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಪವಿತ್ರಾ ಗೌಡ (Pavitra Gowda) ಜೈಲಿನಲ್ಲಿರುವ ಅವಧಿಯನ್ನು ಬರವಣಿಗೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪೊಲೀಸ್ ಮೂಲಗಳ ಪ್ರಕಾರ, ಅವರು ತಮ್ಮ ಜೀವನದ ಅನುಭವಗಳು ಒಳಗೊಂಡ ಆತ್ಮಚರಿತ್ರೆ ಬರೆಯಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಇನ್ನು ತಮ್ಮ ಹೇಳಿಕೆಯಲ್ಲಿ ಸಂಧ್ಯಾ ನಾಗರಾಜ್ (Sandhya Nagaraj) ಮತ್ತೊಂದು ಮಹತ್ವದ ವಿಷಯವನ್ನೂ ಉಲ್ಲೇಖಿಸಿದ್ದರು. ನಟ ದರ್ಶನ್ (Actor Darshan) ಅವರಿಗೆ ಯಾವುದೇ ವಿಶೇಷ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ ಪವಿತ್ರಾ ಗೌಡ ಅವರಿಗೆ ಜೈಲಿನ ಸಿಬ್ಬಂದಿಯೇ ವಿಶೇಷ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed