Last Updated:
ಟಾಸ್ ಗೆದ್ದ ಅಫ್ಘಾನಿಸ್ತಾನ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49.5 ಓವರ್ಗಳಲ್ಲಿ 402 ರನ್ಗಳಿಸಿ ಆಲೌಟ್ ಆಗಿದೆ. ನಾಯಕ ಶುಭ್ಮನ್ ಗಿಲ್ (154) ಹಾಗೂ ಇಶಾನ್ ಕಿಶನ್ (125) ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಲಖನೌನ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್ಮನ್ಗಳು ರನ್ಗಳ ಮಳೆ ಸುರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49.5 ಓವರ್ಗಳಲ್ಲಿ 402 ರನ್ಗಳಿಸಿ ಆಲೌಟ್ ಆಗಿದೆ. ನಾಯಕ ಶುಬ್ಮನ್ ಗಿಲ್ (154) ಹಾಗೂ ಇಶಾನ್ ಕಿಶನ್ (125) ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಭಾರತ ತಂಡ 2ನೇ ಓವರ್ನಲ್ಲೇ ಯಶಸ್ವಿ ಜೈಶ್ವಾಲ್ (4) ವಿಕೆಟ್ ಕಳೆದಕೊಂಡಿತು. ವಿರಾಟ್ ಬದಲಿಗೆ ತಂಡ ಸೇರಿದ್ದ ಜೈಸ್ವಾಲ್ ನಿರೀಕ್ಷಿತ ಪ್ರದರ್ಶನ್ ತೋರಲು ಸಾಧ್ಯವಾಗದೇ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ ನಂತರ ಒಂದಾದ ನಾಯಕ ಗಿಲ್ ಹಾಗೂ ರೋಹಿತ್ ಶರ್ಮಾ 2ನೇ ವಿಕೆಟ್ ಜೊತೆಯಾಟದಲ್ಲಿ 87 ರನ್ಗಳ ಜೊತೆಯಾಟ ನೀಡಿ ಇನ್ನಿಂಗ್ಸ್ಗೆ ಚೇತರಿಕೆ ನೀಡಿದರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 48 ರನ್ಗಳಿಸಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು.
4ನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ ನಾಯಕ ಗಿಲ್ ಜೊತೆಗೂಡಿ ಅಫ್ಘಾನ್ ಬೌಲರ್ಗಳನ್ನ ಬೆಂಡೆತ್ತಿದರು. ಈ ಜೋಡಿ 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 141 ಎಸೆತಗಳಲ್ಲಿ ಬರೋಬ್ಬರಿ 224 ರನ್ಗಳ ಜೊತೆಯಾಟ ನೀಡಿದರು. ಇಶಾನ್ ಕಿಶನ್ 71 ಎಸೆತಗಳಲ್ಲಿ ಶತಕ ಸಿಡಿಸಿದರು. ಇವರಿಬ್ಬರು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಭಾರತ 460-470 ರನ್ ಗಳಿಸುವ ಸಾಧ್ಯತೆ ತೋರುತ್ತಿತ್ತು. ಆದರೆ ಇಶಾನ್ ಕಿಶನ್ 37ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಒಟ್ಟಾರೆ ಇಶಾನ್ ಕಿಶನ್ 77 ಎಸೆತಗಳಲ್ಲಿ 11 ಬೌಂಡರಿ, 7 ಸಿಕ್ಸರ್ ಸೇರಿದಂತೆ 125 ರನ್ಗಳಿಸಿ ಔಟ್ ಆದರು.
154 ರನ್ ಸಿಡಿಸಿದ ಗಿಲ್
2ನೇ ಓವರ್ನಲ್ಲೇ ಕ್ರೀಸ್ಗೆ ಬಂದ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಮೊದಲಿಗೆ ರೋಹಿತ್ ಜೊತೆಗೆ 87 ರನ್ಗಳ ಜೊತೆಯಾಟ ನೀಡಿದ ಅವರು, ನಂತರ ಇಶಾನ್ ಜೊತೆಗೂಡಿ 200ಕ್ಕಿಂತಲೂ ಹೆಚ್ಚಿನ ಜೊತೆಯಾಟ ನೀಡಿದರು. ನಂತರ ಶ್ರೇಯಸ್ ಅಯ್ಯರ್ ಜೊತೆಗೂಡಿದ ಗಿಲ್ 40 ರನ್ ಸೇರಿಸಿ ಔಟ್ ಆದರು. ಗಿಲ್ 110 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 154 ರನ್ ಸಿಡಿಸಿ ಖರೋಟೆಗೆ ವಿಕೆಟ್ ಒಪ್ಪಿಸಿದರು. ಗಿಲ್ ವಿಕೆಟ್ ಬೀಳುತ್ತಿದ್ದಂತೆ ಭಾರತ ತಂಡದ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ನಡೆಯಿತು.
ಕೆಎಲ್ ರಾಹುಲ್ ಕೂಡ ಅದೇ ಓವರ್ನ ನಂತರದ ಎಸೆತದಲ್ಲೇ ಡಕ್ ಔಟ್ ಆದರೆ, 11 ರನ್ಗಳ ಅಂತರದಲ್ಲಿ ಶ್ರೇಯಸ್ ಅಯ್ಯರ್ (26) ಕೂಡ ಖರೋಟೆಗೆ 4ನೇ ಬಲಿಯಾದರು. ವಾಷಿಂಗ್ಟನ್ ಸುಂದರ್ 19, ಗುರ್ನೂರ್ ಬ್ರಾರ್ 3, ಅರ್ಷದೀಪ್ ಸಿಂಗ್ 3, ಪ್ರಿನ್ಸ್ ಯಾದವ್ 5 ರನ್ಗಳಿಸಿ ಔಟ್ ಆದರು. ಕುಲ್ದೀಪ್ ಯಾದವ್ ಅಜೇಯ 3 ರನ್ಗಳಿಸಿದರು.
ಅಫ್ಘಾನಿಸ್ತಾನ ತಂಡದ ಪರ ಖರೋಟೆ 76ಕ್ಕೆ4 ಹಾಗೂ ರಶೀದ್ ಖಾನ್ 48ಕ್ಕೆ3, ಮೊಹಮ್ಮದ್ ಸಲೀಮ್ ಸಫಿ 75ಕ್ಕೆ1, ಅಲ್ಲಾ ಘಜನ್ಫರ್ 69ಕ್ಕೆ1 ವಿಕೆಟ್ ಪಡೆದರು.













