Last Updated:
ಅಮೆರಿಕದ ಜನಪ್ರಿಯ ಪಾಪ್ ಗಾಯಕ ಆಲಿವರ್ ಟ್ರೀ, ಬ್ರೆಜಿಲ್‌ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಜನಪ್ರಿಯ ಪಾಪ್ ಗಾಯಕ (American Pop Singer) ಆಲಿವರ್ ಟ್ರೀ (Oliver Tree), ಬ್ರೆಜಿಲ್‌ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇವಲ 32ನೇ ವಯಸ್ಸಿನಲ್ಲೇ ಗಾಯಕನ ಜೀವನ ಅಂತ್ಯಗೊಂಡಿದೆ ಎಂಬ ಸುದ್ದಿ ಇದೀಗ ಅಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ.
ಲೈಫ್ ಗೋಸ್ ಆನ್, ಮಿಸ್ ಯು, ಏಲಿಯನ್ ಬಾಯ್ ಸೇರಿದಂತೆ ಹಲವು ಜನಪ್ರಿಯ ಹಾಡುಗಳ ಮೂಲಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಆಲಿವರ್ ಟ್ರೀ ಅವರ ಹೆಸರು ಇತ್ತೀಚಿನ ವರ್ಷಗಳಲ್ಲಿ ಪಾಪ್ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಗಳಿಸಿತ್ತು. ಇದೀಗ ಅವರ ಸಾವಿನ ಕುರಿತ ವರದಿ ಎಲ್ಲರನ್ನು ತಲ್ಲಣ ಗೊಳಿಸಿದೆ.

ವರದಿಗಳ ಪ್ರಕಾರ, ಬ್ರೆಜಿಲ್‌ನ ಪ್ರಮುಖ ನಗರವಾದ ರಿಯೊ ಡಿ ಜನೈರೊದಲ್ಲಿ ಭಾನುವಾರ ಮುಂಜಾನೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಅಪಘಾತದ ತೀವ್ರತೆಗೆ ಒಂದು ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಎಲೆಕ್ಟ್ರಿಕ್ ಕಾರುಗಳ ಶೋ ರೂಂನ ಪಾರ್ಕಿಂಗ್ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿಗಳ ಪ್ರಕಾರ, ಅಪಘಾತಕ್ಕೀಡಾದ ಹೆಲಿಕಾಪ್ಟರ್‌ಗಳಲ್ಲಿ ಒಂದರಲ್ಲಿ ಆಲಿವರ್ ಟ್ರೀ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಡಿಕ್ಕಿಯ ಪರಿಣಾಮದಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಈ ಘಟನೆಯ ಬಗ್ಗೆ ಸಂಬಂಧಿತ ಅಧಿಕಾರಿಗಳು ಅಥವಾ ಆಲಿವರ್ ಟ್ರೀ ಅವರ ಅಧಿಕೃತ ಪ್ರತಿನಿಧಿಗಳಿಂದ ಸಂಪೂರ್ಣ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ವಿಶೇಷವಾಗಿ ಅವರ ಸಿಗ್ನೇಚರ್ ಬೌಲ್-ಕಟ್ ಹೇರ ಸ್ಟೈಲ್ ಮತ್ತು ಹಾಸ್ಯಮಯ ನಿರೂಪಣಾ ಶೈಲಿ ತುಂಬಾನೇ ಫೇಮಸ್ ಆಗಿತ್ತು.
ಆಲಿವರ್ ಟ್ರೀ ಅವರ ಸಂಗೀತ ಜೀವನದಲ್ಲಿ ಹಲವು ಜನಪ್ರಿಯ ಹಾಡುಗಳು ಮಹತ್ವದ ಪಾತ್ರ ವಹಿಸಿವೆ. ವಿಶೇಷವಾಗಿ ಲೈಫ್ ಗೋಸ್ ಆನ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ಹೊಸ ದಾಖಲೆಗಳನ್ನು ನಿರ್ಮಿಸಿತ್ತು.ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಸೇರಿದಂತೆ ಹಲವು ಡಿಜಿಟಲ್ ವೇದಿಕೆಗಳಲ್ಲಿ ಅವರ ಹಾಡುಗಳು ವೈರಲ್ ಆಗಿದ್ದವು.
2020ರಲ್ಲಿ ಬಿಡುಗಡೆಯಾದ ಅವರ ಮೊದಲ ಸ್ಟುಡಿಯೋ ಆಲ್ಬಂ ‘ಅಗ್ಲಿ ಈಸ್ ಬ್ಯೂಟಿಫುಲ್’ ಉತ್ತಮ ಯಶಸ್ಸು ಕಂಡಿತ್ತು. ಈ ಆಲ್ಬಂ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಖ್ಯಾತಿ ಗಳಿಸಿದರು.
ಆಲಿವರ್ ಟ್ರೀ ಇತ್ತೀಚಿನ ತಿಂಗಳುಗಳಲ್ಲಿ ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಈ ಪ್ರವಾಸದ ಮಧ್ಯೆಯೇ ದುರಂತ ಸಂಭವಿಸಿದೆ ಎಂಬ ಸುದ್ದಿ ಸಂಗೀತ ಕ್ಷೇತ್ರಕ್ಕೆ ದೊಡ್ಡ ಆಘಾತವಾಗಿ ಪರಿಣಮಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ಸಂತಾಪ ವ್ಯಕ್ತಪಡಿಸುತ್ತಿದ್ದು, ಆಲಿವರ್ ಟ್ರೀ ಅವರ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Bangalore [Bangalore],Bangalore,Karnataka













