IND vs PAK: ಪಾಕಿಸ್ತಾನ ಧೂಳೀಪಟ ಮಾಡಿ ವಿಶ್ವದಾಖಲೆ ನಿರ್ಮಿಸಿದ ದೀಪ್ತಿ ಶರ್ಮಾ! ಈ ಸಾಧನೆ ಮಾಡಿದ ವಿಶ್ವದ ಏಕೈಕ ಸ್ಪಿನ್ನರ್ | ಕ್ರೀಡಾ ಸುದ್ದಿ | ACTPnews

ದೀಪ್ತಿ ಶರ್ಮಾ


Last Updated:

ಪಾಕಿಸ್ತಾನ ವಿರುದ್ಧದ ಮೊದಲ ವಿಕೆಟ್ ಮೂಲಕ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು

ದೀಪ್ತಿ ಶರ್ಮಾ
ದೀಪ್ತಿ ಶರ್ಮಾ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (T20I World Cup) ಭಾರತ ತಂಡ (India vs Pakistan) ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಸಾಧಿಸಿ ಏಕಪಕ್ಷೀಯ ಗೆಲುವು ಪಡೆದುಕೊಂಡಿತು. ಈ ಹೈವೋಲ್ಟೇಜ್​ ಪಂದ್ಯದಲ್ಲಿ ಟಾಸ್ ಗೆದ್ದ ನಂತರ, ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್‌ಗೆ 170 ರನ್ ಗಳಿಸಿತು. ಸ್ಮೃತಿ ಮಂಧಾನ (Smriti Mandhana) (68) ಅದ್ಭುತ ಅರ್ಧಶತಕ ಬಾರಿಸಿದರೆ, ರಿಚಾ ಘೋಷ್ ತಡವಾಗಿ ಬಂದು ವೇಗವಾಗಿ 34 ರನ್ ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 106 ರನ್‌ಗಳಿಗೆ ಆಲೌಟ್ ಆಯಿತು. ಭಾರತ ತಂಡವು ಪಂದ್ಯವನ್ನು 64 ರನ್‌ಗಳ ಬೃಹತ್ ಅಂತರದಿಂದ ಗೆಲ್ಲುವ ಮೂಲಕ ಟೂರ್ನಿಯನ್ನು ಆರಂಭಿಸಿತು.

ಪಾಕಿಸ್ತಾನ ಮತ್ತೊಮ್ಮೆ ಭಾರತ ತಂಡಕ್ಕೆ ಯಾವುದೇ ರೀತಿಯಲ್ಲೂ ಸ್ಪರ್ಧಿಯಲ್ಲ ಎಂದು ಸಾಬೀತುಪಡಿಸಿತು. ಈ ಪಂದ್ಯದಲ್ಲಿ ಸ್ಪಿನ್ ಸ್ಟಾರ್​ ದೀಪ್ತಿ ಶರ್ಮಾ ಅವರ ದಾಖಲೆ ಮುರಿದ ಬೌಲಿಂಗ್ ಎದುರು ಇಡೀ ಪಾಕ್ ತಂಡವು ಅಸಹಾಯಕ ಮತ್ತು ಶಕ್ತಿಹೀನವಾಗಿ ಕಾಣಿಸಿಕೊಂಡಿತು. ಈ ಪಂದ್ಯದಲ್ಲಿ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ದೀಪ್ತಿ ವಿಶ್ವ ದಾಖಲೆ

ಪಾಕಿಸ್ತಾನ ವಿರುದ್ಧದ ಮೊದಲ ವಿಕೆಟ್ ಮೂಲಕ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಮಾಜಿ ವೇಗಿ ಜೂಲನ್ ಗೋಸ್ವಾಮಿ 355 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿಯೇ ಮ್ಯಾಜಿಕ್ ಮಾಡಿದ ದೀಪ್ತಿ 4 ಓವರ್‌ಗಳಲ್ಲಿ ಕೇವಲ 10 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್

ಜೂಲನ್ ಗೋಸ್ವಾಮಿ (ಭಾರತ) 355

ದೀಪ್ತಿ ಶರ್ಮಾ (ಭಾರತ) 351

ಕ್ಯಾಥರಿನ್ ಸಿವರ್-ಬ್ರಂಟ್ (ಇಂಗ್ಲೆಂಡ್) 335

ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ) 331

ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ) 3317

ಸ್ಮೃತಿ-ರಿಚಾ ಸ್ಫೋಟಕ ಬ್ಯಾಟಿಂಗ್

ಪಾಕಿಸ್ತಾನ ಆರಂಭದಲ್ಲಿ ವಿಕೆಟ್​ ಪಡೆದು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಭಾರತ ಕೇವಲ 18 ರನ್‌ಗಳಿಗೆ ಎರಡು ವಿಕೆಟ್‌ಗಳು ಬಿದ್ದಿದ್ದವು. ಆದರೆ ಸ್ಮೃತಿ ಮಂಧಾನ ಅರ್ಧಶತಕ ಬಾರಿಸಿದರು. 44 ಎಸೆತಗಳಲ್ಲಿ 68 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 36 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್ 17 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಸ್ಕೋರ್ ಅನ್ನು 170ಕ್ಕೆ ಕೊಂಡೊಯ್ದರು.

ದೀಪ್ತಿ ಶರ್ಮಾ (10ಕ್ಕೆ5) ಹಾಗೂ ಶ್ರೀಚರಣಿ (21ಕ್ಕೆ3) ದಾಳಿಗೆ ಸಿಲುಕಿದ ಪಾಕಿಸ್ತಾನ ತಂಡ 17 ಓವರ್​ಗಳಲ್ಲಿ 106ಕ್ಕೆ ಆಲೌಟ್ ಆಯಿತು. ಮುನೀಬಾ ಅಲಿ 41 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ಆಲಿಯಾ ರಿಯಾಜ್ 18, ಆಯೇಷಾ ಜಾಫರ್ 12, ಗಲ್ ಫೆರೋಜ್ 12 ರನ್​​​ಗಳಿಸಿ ಎರಡಂಕಿ ದಾಟಿದ ಬ್ಯಾಟರ್ಸ್ ಎನಿಸಿಕೊಂಡರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed