Hardik Pandya: ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಪರದಾಟ! ಗರ್ಲ್​ಫ್ರೆಂಡ್​ ಜೊತೆಗಿದ್ದ ವೇಳೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews

ಬೆಂಗಳೂರಿನಲ್ಲಿ ಹಾರ್ದಿಕ್​ ಪಾಂಡ್ಯ


Last Updated:

ಮೊನ್ನೆ ಮೊನ್ನೆಯಷ್ಟೇ ಐಪಿಎಲ್ ಟೂರ್ನ್​ಮೆಂಟ್​ ಮುಗಿಸಿರೋ ಹಾರ್ದಿಕ್ ಪಾಂಡ್ಯ ಸದ್ಯ ರಿಲಾಕ್ಸ್ ಮೂಡ್​ನಲ್ಲಿದ್ದು, ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹಾರ್ದಿಕ್​ ಪಾಂಡ್ಯ
ಬೆಂಗಳೂರಿನಲ್ಲಿ ಹಾರ್ದಿಕ್​ ಪಾಂಡ್ಯ

ಬೆಂಗಳೂರು: ಹಾರ್ದಿಕ್​ ಪಾಂಡ್ಯ. ಟೀಂ ಇಂಡಿಯಾ ಸ್ಟಾರ್​ ಆಲ್​ ರೌಂಡರ್​​, ಸ್ಟೇಡಿಯಂನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್​​​ ಮತ್ತು ಬೌಲಿಂಗ್ ದಾಳಿಯಿಂದ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸೋ ಹಾರ್ದಿಕ್​ ಪಾಂಡ್ಯ (Hardik Pandya), ಮೈದಾನದ ಹೊರಕ್ಕೆ ತಮ್ಮ ಐಷಾರಾಮಿ ಲೈಫ್​ಸ್ಟೈಲ್​ನಿಂದ (Life Style) ಸುದ್ದಿಯಲ್ಲಿರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಐಪಿಎಲ್ (IPL)​ ಟೂರ್ನಮೆಂಟ್​​ ಮುಗಿಸಿರೋ ಹಾರ್ದಿಕ್​​ ಪಾಂಡ್ಯ ಸದ್ಯ ರಿಲಾಕ್ಸ್​​ ಮೂಡ್​ನಲ್ಲಿದ್ದು. ತಮ್ಮ ಗರ್ಲ್​ಫ್ರೆಂಡ್​ ಮಹಿಕಾ ಶರ್ಮಾ (Mahieka Sharma) ಜೊತೆ ಬೆಂಗಳೂರಿನಲ್ಲಿ (Bengaluru) ಕಾಣಿಸಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ನೋಡಲು ಮುಗಿಬಿದ್ದ ಫ್ಯಾನ್ಸ್

ಹಾರ್ದಿಕ್​ ಪಾಂಡ್ಯ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿರುವ ಪ್ರೈಮಾ ಡಯಾಗ್ನೋಸ್ಟಿಕ್ಸ್​ಗೆ ಹಾರ್ದಿಕ್ ಪಾಂಡ್ಯ ಮತ್ತು ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ ಆಗಮಿಸಿದ್ದರು. ಐಷಾರಾಮಿ ಫೆರಾರಿ ಕಾರ್​ನಲ್ಲಿ ಬಂದಿದ್ದ ಹಾರ್ದಿಕ್ ಪಾಂಡ್ಯರನ್ನು ನೋಡಲು  ಅಭಿಮಾನಿಗಳು ಮುಗಿಬಿದ್ದಿದ್ದರು.

ಹಾರ್ದಿಕ್ ಪಾಂಡ್ಯ ಪರದಾಟ

ಪ್ರೈಮಾ ಡಯಾಗ್ನೋಸ್ಟಿಕ್ಸ್​ಗೆ ಹಾರ್ದಿಕ್​​ ಪಾಂಡ್ಯ ಬಂದಿರೋ ವಿಚಾರ ತಿಳಿದ ಅಭಿಮಾನಿಗಳು ಹಾರ್ದಿಕ್​​ ಪಾಂಡ್ಯರನ್ನು ನೋಡಲು ಮುಗಿಬಿದ್ದಿದ್ದಾರೆ. ಡಯಾಗ್ನೋಸ್ಟಿಕ್ಸ್ ಕಟ್ಟಡ ಮತ್ತು ಫೆರಾರಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಫ್ಯಾನ್ಸ್​​ಗಳ ತಳ್ಳಾಟ ಮತ್ತು ನೂಕಾಟದಿಂದ ಹಾರ್ದಿಕ್​ ಪಾಂಡ್ಯ, ಹೊರಗಡೆ ಬರಲಾಗದೇ ಪರದಾಟ ಅನುಭವಿಸಿದರು. ಕೊನೆಗೆ ಪೊಲೀಸರ ಭದ್ರತೆ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಗೆಳತಿ ಮಹಿಕಾ ಶರ್ಮಾ ಹೊರ ನಡೆದಿದ್ದಾರೆ.

₹12 ಕೋಟಿ ಮೌಲ್ಯದ ಫೆರಾರಿ ಕಾರು

ಐಷಾರಾಮಿ ಕಾರುಗಳ ಕ್ರೇಜ್​ ಹೊಂದಿರುವ ಹಾರ್ದಿಕ್​ ಪಾಂಡ್ಯ, ಇತ್ತೀಚಿಗಷ್ಟೇ ಫೆರಾರಿ 12 ಸಿಲಿಂಡ್ರಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಸುಮಾರು 12 ಕೋಟಿ ಎಂದು ಅಂದಾಜಿಸಲಾಗಿದೆ. ಇದೇ ಕಾರಿನಲ್ಲಿ ಹಾರ್ದಿಕ್​ ಪಾಂಡ್ಯ ಬೆಂಗಳೂರು ರೌಂಡ್ಸ್​ ಹಾಕಿದ್ದಾರೆ.

ಫಿಟ್ನೆಸ್​ ಟೆಸ್ಟ್​  ಪಾಸ್​ ಆದ ಹಾರ್ದಿಕ್​

ಇದೇ ತಿಂಗಳು 13ರಿಂದ ಆರಂಭವಾಗಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆ ಪ್ರಕಾರ, ಹಾರ್ದಿಕ್​ ಪಾಂಡ್ಯ ಫಿಟ್‌ನೆಸ್ ಪರೀಕ್ಷೆಗಳಲ್ಲಿ ಪಾಸ್​ ಆಗಿದ್ದು, ಶೀಘ್ರದಲ್ಲೇ ತಂಡವನ್ನು ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಐಪಿಎಲ್ ವೇಳೆ ಹಾರ್ದಿಕ್ ಪಾಂಡ್ಯ ಅವರು ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ರೀಗ ಪಾಂಡ್ಯ ಅವರು ಇಂಜುರಿಯಿಂದ ಚೇತರಿಸಿಕೊಂಡಿದ್ದು, ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಭಾರತ ಏಕದಿನ ತಂಡ: ಶುಭಮನ್ ಗಿಲ್ (ನಾಯಕ) , ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಕೃಷ್ಣ ಗುರ್ನೂರ್ ಬ್ರಾರ್, ಹರ್ಷ ದುಬೆ.

ಅಫ್ಘಾನಿಸ್ತಾನ ಏಕದಿನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಸೇಡಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ರಹಮತ್ ಶಾ, ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಎಫ್ ಝ್ಝಾರ್ ಖಾಜಾರಿಫ್, ನಂಗೆಯಲಿಯಾ ಖಾಝಾರೋಟೆ ಮಲಿಕ್, ಬಿಲಾಲ್ ಸಾಮಿ.



Source link

Leave a Reply

Your email address will not be published. Required fields are marked *