Last Updated:
ಈ ವೈಯಕ್ತಿಕ ದುರಂತ ಅವರಿಗೆ ತೀವ್ರ ಮಾನಸಿಕ ಒತ್ತಡವನ್ನು ತಂದೊಡ್ಡಿತು. ಈ ದುಃಖದಲ್ಲೇ ದಿನದೂಡುತ್ತಿದ್ದ ಇವರ ನಿಶ್ಶಕ್ತ ದೇಹಕ್ಕೆ ಉಸಿರಾಟದ ಸಮಸ್ಯೆ ಎದುರಾದಾಗ ಚೇತರಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ.
ತಮಿಳು ಚಿತ್ರರಂಗದ (Tamil Movies) ದೈತ್ಯ ಪ್ರತಿಭೆ, ಭಾರತೀಯ ಸಿನಿಮಾದ ಖ್ಯಾತ (Indian Cinema) ನಿರ್ದೇಶಕ ಮತ್ತು ನಟ ಭಾರತಿರಾಜ ಅವರು ಜೂನ್ 10 ರಂದು ನಿಧನರಾಗಿದ್ದು, ಅವರಿಗೆ 84 ವರ್ಷ ವಯಸ್ಸಾಗಿತ್ತು. ಚಿತ್ರರಂಗದ ನಾಲ್ಕು ಗೋಡೆಗಳ ಮಧ್ಯೆ ಇದ್ದ ಶೂಟಿಂಗ್ ಸಂಸ್ಕೃತಿಯನ್ನು (Cinema Shooting) ಹಳ್ಳಿಗಳ ಮಣ್ಣಿನ ಸೊಗಡಿಗೆ ಕೊಂಡೊಯ್ದ ಹೆಗ್ಗಳಿಕೆ ಇವರದಾಗಿತ್ತು. ಇವರ ನಿಧನದಿಂದಾಗಿ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ (Bharathiraja) ಶೋಕ ಮಡುಗಟ್ಟಿದೆ.
ಭಾರತಿರಾಜ ಅವರ ದೈಹಿಕ ಆರೋಗ್ಯ ಹದಗೆಡಲು ಕೇವಲ ವಯಸ್ಸು ಮಾತ್ರ ಕಾರಣವಲ್ಲ, ಅದಕ್ಕಿಂತ ದೊಡ್ಡದೊಂದು ಮಾನಸಿಕ ಆಘಾತ ಅವರನ್ನು ಕಾಡಿತ್ತು. 2025ರಲ್ಲಿ ಅವರ ಮಗ, ನಟ ಮತ್ತು ನಿರ್ದೇಶಕ ಮನೋಜ್ ಭಾರತಿರಾಜ ಅವರು ಕೇವಲ 48ನೇ ವಯಸ್ಸಿನಲ್ಲಿ ಹಾರ್ಟ್ ಅಟ್ಯಾಕ್ (Cardiac Arrest) ನಿಂದ ಸಾವನ್ನಪ್ಪಿದ್ದರು.
ವೃದ್ಧಾಪ್ಯದಲ್ಲಿ ಮಗನನ್ನು ಕಳೆದುಕೊಂಡ ನೋವನ್ನು ಭಾರತಿರಾಜ ಅವರಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈ ವೈಯಕ್ತಿಕ ದುರಂತ ಅವರಿಗೆ ತೀವ್ರ ಮಾನಸಿಕ ಒತ್ತಡವನ್ನು ತಂದೊಡ್ಡಿತು. ಮಗನ ಸಾವಿನ ದುಃಖದಲ್ಲೇ ದಿನದೂಡುತ್ತಿದ್ದ ಇವರ ನಿಶ್ಶಕ್ತ ದೇಹಕ್ಕೆ ಉಸಿರಾಟದ ಸಮಸ್ಯೆ ಎದುರಾದಾಗ ಚೇತರಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ.
ಭಾರತಿರಾಜ ಅವರನ್ನು ತಮಿಳು ಚಿತ್ರರಂಗದಲ್ಲಿ ‘ಇಯಕ್ಕುನರ್ ಇಮಯಂ’ ಅಂದರೆ ‘ನಿರ್ದೇಶಕರ ಶಿಖರ’ ಎಂದೇ ಕರೆಯಲಾಗುತ್ತಿತ್ತು. 1941ರಲ್ಲಿ ಜನಿಸಿದ ಇವರು, 1977ರಲ್ಲಿ ’16 ವಯದಿನಿಲೆ’ (16 Vayathinile) ಎಂಬ ಸಿನಿಮಾದ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟರು. ರಜನಿಕಾಂತ್, ಕಮಲ್ ಹಾಸನ್ ಮತ್ತು ಶ್ರೀದೇವಿ ನಟಿಸಿದ್ದ ಈ ಸಿನಿಮಾ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಒಂದು ಮೈಲಿಗಲ್ಲು.
ಅಲ್ಲಿಯವರೆಗೆ ಸ್ಟುಡಿಯೋಗಳ ಒಳಗೆ ಸೆಟ್ ಹಾಕಿ ಶೂಟಿಂಗ್ ಮಾಡುತ್ತಿದ್ದ ಟ್ರೆಂಡ್ ಅನ್ನು ಮುರಿದು, ಕ್ಯಾಮೆರಾವನ್ನು ನೇರವಾಗಿ ಹಳ್ಳಿಗಳಿಗೆ ಕೊಂಡೊಯ್ದು ರಿಯಲಿಸ್ಟಿಕ್ ಸಿನಿಮಾಗಳನ್ನು ಮಾಡುವ ಹೊಸ ಅಲೆಯನ್ನೇ ಸೃಷ್ಟಿಸಿದರು.
ಭಾರತಿರಾಜ ಕೇವಲ ಸಿನಿಮಾಗಳನ್ನು ಮಾಡಲಿಲ್ಲ, ಚಿತ್ರರಂಗಕ್ಕೆ ದೊಡ್ಡ ದೊಡ್ಡ ಸ್ಟಾರ್ಗಳನ್ನು ಪರಿಚಯಿಸಿದರು. ನಟಿ ರಾಧಿಕಾ, ರೇವತಿ, ರಾಧಾ, ವಿಜಯಶಾಂತಿ ಹಾಗೂ ನಟ ಕಾರ್ತಿಕ್ ಮುಂತಾದ ಘಟಾನುಘಟಿ ಕಲಾವಿದರನ್ನು ಚಿತ್ರರಂಗಕ್ಕೆ ತಂದ ಕ್ರೆಡಿಟ್ ಇವರಿಗೆ ಸಲ್ಲುತ್ತದೆ. ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಭಾರತಿರಾಜ ಅವರಿಗೆ ಕರ್ನಾಟಕದೊಂದಿಗೂ ಉತ್ತಮ ಒಡನಾಟವಿತ್ತು.
‘ಸಿಗಪ್ಪು ರೋಜಾಕ್ಕಳ್’, ‘ಮುದಲ್ ಮರಿಯಾದೈ’, ‘ವೇದಂ ಪುದಿದು’ ನಂತಹ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ ಇವರಿಗೆ ಭಾರತ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಆರು ರಾಷ್ಟ್ರ ಪ್ರಶಸ್ತಿಗಳು (National Awards) ಇವರ ಮುಡಿಗೇರಿವೆ. ಇತ್ತೀಚಿನ ದಿನಗಳಲ್ಲಿ ಧನುಷ್ ನಟನೆಯ ‘ತಿರುಚಿತ್ರಾಂಬಲಂ’ ಹಾಗೂ ವಿಜಯಸೇತುಪತಿಯ ‘ಮಹಾರಾಜ’ ಸಿನಿಮಾಗಳಲ್ಲಿ ನಟನಾಗಿಯೂ ಅಭಿಮಾನಿಗಳ ಮನಗೆದ್ದಿದ್ದರು. ಸಿನಿಮಾ ರಂಗದ ಒಂದು ಸುವರ್ಣ ಅಧ್ಯಾಯ ಈಗ ಕೊನೆಯಾಗಿದೆ.
Chennai [Madras],Chennai,Tamil Nadu














