AI Revolution: ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಲಿದೆ ಈ ಯೋಜನೆ; 10 ಕೋಟಿ ಅನುದಾನದಲ್ಲಿ ಸರ್ಕಾರ ಮಾಡುತ್ತಿರೋದೇನು? | | ACTPnews

ಎಐ ಪ್ರಯೋಗಾಲಯ


Last Updated:

ಕರ್ನಾಟಕ ರಾಜ್ಯ ಸರ್ಕಾರ 50 ಸರ್ಕಾರಿ ಕಾಲೇಜುಗಳಲ್ಲಿ AI ಮತ್ತು ಡೇಟಾ ಸೈನ್ಸ್ ಲ್ಯಾಬ್ ಸ್ಥಾಪನೆಗೆ ಅನುಮೋದನೆ ನೀಡಿದೆ, IndiaAI Mission ಜೊತೆಗೂಡಿ 69 ಲಕ್ಷ ಅನುದಾನ, ಮೊದಲ ಹಂತದಲ್ಲಿ 23 ಕಾಲೇಜು ಆಯ್ಕೆಯಾಗಿದ್ದಾವೆ

ಎಐ ಪ್ರಯೋಗಾಲಯ
ಎಐ ಪ್ರಯೋಗಾಲಯ

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಮಾತ್ರ ಸೀಮಿತವಾಗಿದ್ದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (AI) ಇನ್ನು ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಕಾಲೇಜುಗಳಿಗೂ ಲಗ್ಗೆ ಇಡಲಿದೆ! ಗ್ರಾಮೀಣ (Village) ಹಾಗೂ ಟಿಯರ್-2, ಟಿಯರ್-3 ನಗರಗಳ ಯುವಕರಿಗೆ ಭವಿಷ್ಯದ ತಂತ್ರಜ್ಞಾನದ ಬಾಗಿಲು ತೆರೆಯಲು ರಾಜ್ಯ ಸರ್ಕಾರ (State Government) ಮುಂದಾಗಿದೆ. ರಾಜ್ಯದ 50 ಸರ್ಕಾರಿ ಕಾಲೇಜುಗಳಲ್ಲಿ ಅತ್ಯಾಧುನಿಕ AI ಪ್ರಯೋಗಾಲಯಗಳನ್ನು (Laboratery) ಸ್ಥಾಪಿಸಲು ಸರ್ಕಾರ ಇದೀಗ ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಏನಿದು ‘AI ಲ್ಯಾಬ್’ ಯೋಜನೆ?

ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಕೇವಲ ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ರಾಜ್ಯದ ಮೂಲೆಮೂಲೆಯ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳೂ ಜಾಗತಿಕ ತಂತ್ರಜ್ಞಾನಕ್ಕೆ ಸರಿಸಮಾನವಾಗಿ ಬೆಳೆಯಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶ.

ರಾಜ್ಯಾದ್ಯಂತ 50 ಸರ್ಕಾರಿ ಕಾಲೇಜುಗಳಲ್ಲಿ ಸುಸಜ್ಜಿತ AI ಮತ್ತು ಡೇಟಾ ಸೈನ್ಸ್ ಲ್ಯಾಬ್‌ಗಳ ಸ್ಥಾಪನೆ ಮಾಡಲಾಗುತ್ತದೆ. ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ (ML) ಮತ್ತು ಡೇಟಾ ಸೈನ್ಸ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಸಿಗಲಿದೆ. ಇದು ಯುವಕರ ಉದ್ಯೋಗಾರ್ಹತೆಯನ್ನು ದ್ವಿಗುಣಗೊಳಿಸಲಿದೆ.

ಹಣಕಾಸಿನ ಹರಿವು; ಕೇಂದ್ರ-ರಾಜ್ಯದ ಜಂಟಿ ಕಾರ್ಯಾಚರಣೆ

ಈ ಯೋಜನೆಗೆ ಕೇಂದ್ರ ಸರ್ಕಾರದ ‘IndiaAI Mission’ ಹಾಗೂ ರಾಜ್ಯ ಸರ್ಕಾರ ಕೈಜೋಡಿಸಿವೆ. ಪ್ರತಿ ಪ್ರಯೋಗಾಲಯಕ್ಕೆ ಮುಂದಿನ 3 ವರ್ಷಗಳ ಅವಧಿಗೆ ಸುಮಾರು ₹69 ಲಕ್ಷಗಳ ಭಾರಿ ಅನುದಾನವನ್ನು ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಿದೆ. ರಾಜ್ಯ ಸರ್ಕಾರ ಈ ಯೋಜನೆಗಾಗಿ ಬರೋಬ್ಬರಿ ₹10 ಕೋಟಿ ಅನುದಾನ ಮೀಸಲಿಟ್ಟಿದ್ದು, ಮೊದಲ ಹಂತದಲ್ಲೇ ₹6.29 ಕೋಟಿ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.
ಮೊದಲ ಹಂತದಲ್ಲಿ 23 ಕಾಲೇಜುಗಳಿಗೆ ಲಾಟರಿ!

AI ಕ್ರಾಂತಿಯ ಮೊದಲ ಹಂತದ ಫಲಾನುಭವಿಗಳ ಪಟ್ಟಿಯೂ ಸಿದ್ಧವಾಗಿದೆ. ರಾಜ್ಯದ ಒಟ್ಟು 50 ಕಾಲೇಜುಗಳ ಪೈಕಿ, ಮೊದಲ ಹಂತದಲ್ಲಿ  23 ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿ ಶೀಘ್ರವೇ ಅತ್ಯಾಧುನಿಕ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳೊಂದಿಗೆ ಪ್ರಯೋಗಾಲಯಗಳು ತಲೆ ಎತ್ತಲಿವೆ. ಉಳಿದ ಕಾಲೇಜುಗಳನ್ನು ಮುಂದಿನ ಹಂತದಲ್ಲಿ ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು.
ಸಚಿವರ ಮಾತು; “ತಂತ್ರಜ್ಞಾನ ಬರೀ ಬೆಂಗಳೂರಿಗೆ ಸೀಮಿತವಲ್ಲ!”

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಭವಿಷ್ಯದ ಉದ್ಯೋಗಗಳು ಸಂಪೂರ್ಣವಾಗಿ ತಂತ್ರಜ್ಞಾನವನ್ನೇ ಅವಲಂಬಿಸಿವೆ. ಈ ಕೌಶಲ್ಯಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಬಾರದು. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಪ್ರತಿಭಾವಂತ ಯುವಕರು ಡಿಜಿಟಲ್ ಆರ್ಥಿಕತೆಗೆ ಸಜ್ಜಾಗಬೇಕು ಎಂಬುದು ನಮ್ಮ ಗುರಿ” ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಎಐ ಹಬ್‌ ಆಗುತ್ತಾ ಕರ್ನಾಟಕ?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed