Conman Groom: 25ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ BMW ಕಾರ್ ಖರೀದಿಸಿದ ‘ಕಿಲಾಡಿ ವರ’ ಪೊಲೀಸ್ ಬಲೆಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಪೊಲೀಸ್ ತನಿಖೆಯ ವೇಳೆ ಆತ ಭಾವನಾತ್ಮಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅವರ ನಂಬಿಕೆ ಗಳಿಸಿ, ಮದುವೆಯ ಭರವಸೆ ನೀಡಿ ವಿಶ್ವಾಸವನ್ನು ಗಳಿಸಿದ ನಂತರ, ಕ್ರಮೇಣ ಅವರಿಂದ ಹಣವನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ.

News18
News18

ಭಯಾಂದರ್: ಮದುವೆಯಾಗುತ್ತೀನಿ ಎಂದು ನಂಬಿಸಿ 25ಕ್ಕೂ ಮಹಿಳೆಯರ (Conman Groom) ನಂಬಿಕೆ ಗಳಿಸಿ ಅವರಿಂದ ದೋಚಿದ ಹಣದಲ್ಲಿ ಬಿಎಂಡಬ್ಲ್ಯೂ ಕಾರ್ ಖರೀದಿಸಿದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಲೋಕದಲ್ಲಿ ವಂಚಕರ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲೂ ಕೂಡ (Matrimonial sites) ಮುಗ್ದ ಯುವತಿಯರು, ಮಹಿಳೆಯರನ್ನು ನಂಬಿಸಿ ಮೋಸಗೊಳಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪೊಲೀಸರು ಈ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಸಹ ಮತ್ತೊಂದು ಇಂತಹುದೇ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ತನಿಖೆಯ ವೇಳೆ ಆತ ಭಾವನಾತ್ಮಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅವರ ನಂಬಿಕೆ ಗಳಿಸಿ, ಮದುವೆಯ ಭರವಸೆ ನೀಡಿ ಅವರ ವಿಶ್ವಾಸವನ್ನು ಗಳಿಸಿದ ನಂತರ, ಕ್ರಮೇಣ ಅವರಿಂದ ಹಣವನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: IAF Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ, ಐದು ಸೈನಿಕರು ಹುತಾತ್ಮ

ಆರೋಪಿಯಿಂದ BMW X1 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕಾರ್‌ ಅನ್ನು ಆರೋಪಿಯು ಮಹಿಳೆಯರಿಂದ ಮೋಸದಿಂದ ಪಡೆದ ಹಣದಿಂದಲೇ ಖರೀದಿಸಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಪೊಲೀಸರು, ಆರೋಪಿಯ ಜೊತೆ ಆತನ ಮಗನನ್ನೂ ಸಹ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಮುಖ ಆರೋಪಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಉತ್ತರ ಪ್ರದೇಶದ ಗ್ರೇಟರ್‌ ನೊಯ್ಡಾದಲ್ಲಿ ತಲೆಮರಿಸಿಕೊಂಡಿದ್ದ ಕಿಲಾಡಿ ವರನನ್ನು ಮಹಾರಾಷ್ಟ್ರದ ಮೀರಾ ಭಯಂದರ್‌ ಕ್ರೈಮ್‌ ಬ್ರಾಂಚ್‌ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಟ್ರ್ಯಾಕ್‌ ಮಾಡಿ ಯಶಸ್ವಿಯಾಗಿ ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports