Last Updated:
Keerthy Suresh: ಚಿತ್ರರಂಗದಲ್ಲಿ ಸದಾ ಸೌಮ್ಯವಾಗಿ, ಮೃದುವಾಗಿ ಕಾಣಿಸಿಕೊಳ್ಳುವ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಮೂಲಕ ಹಲವು ವರ್ಷಗಳಿಂದ ಮನಸ್ಸಿನೊಳಗೆ ಇಟ್ಟುಕೊಂಡಿದ್ದ ನೋವು ಮತ್ತು ಅನುಭವಗಳನ್ನು ಬಹಿರಂಗಪಡಿಸಿದ್ದಾರೆ.
ಚಿತ್ರರಂಗದಲ್ಲಿ ಸದಾ ತಾಳ್ಮೆಯಿಂದ ಹಾಗೂ ತುಂಬಾನೇ ಮೃದು ಸ್ವಭಾವದ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಮೂಲಕ ಹಲವು ವರ್ಷಗಳಿಂದ ಮನಸ್ಸಿನೊಳಗೆ ಇಟ್ಟುಕೊಂಡಿದ್ದ ನೋವು ಮತ್ತು ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಬಾಡಿ ಶೇಮಿಂಗ್ (Body Shaming), ಪ್ಲಾಸ್ಟಿಕ್ ಸರ್ಜರಿ ವದಂತಿಗಳು (Plastic Surgery Rumors), ಫಿಟ್‌ನೆಸ್ ಪ್ರಯಾಣ ಹಾಗೂ ಮಾನಸಿಕ ಹಿನ್ನಡೆಗಳ ಬಗ್ಗೆ ಅವರು ಮಾಡಿದ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡ ನಟಿ ಕೀರ್ತಿ ಸುರೇಶ್, ಅನೇಕ ವಿಚಾರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಾಗ ತಾವು ಇನ್ನೂ ಅನುಭವವಿಲ್ಲದ ನಟಿಯಾಗಿದ್ದೆ ಎಂದು ಕೀರ್ತಿ ಹೇಳಿದ್ದಾರೆ. ಜಿಮ್ ಮತ್ತು ಫಿಟ್‌ನೆಸ್ ಎಂಬುದು ತಮ್ಮ ಜೀವನದಲ್ಲಿ ಬರುವುದೇ ಇಲ್ಲ ಎಂದು ಭಾವಿಸಿದ್ದ ಸಮಯದಲ್ಲೇ, 2018ರಲ್ಲಿ ಬಿಡುಗಡೆಯಾದ ಅವರ ಬೃಹತ್ ಯಶಸ್ಸಿನ ಸಿನಿಮಾ ಮಹಾನಟಿ ನಂತರ ಅವರಿಗೆ ಹೊಸ ಚೈತನ್ಯ ಸಿಕ್ಕಿತು. ಆ ಸಿನಿಮಾದ ಬ್ಯುಸಿಯ ನಂತರ ಸಿಕ್ಕಿದ್ದ ಬಿಡುವಿನಲ್ಲಿ, ಏಕೆ ಜಿಮ್ ಆರಂಭಿಸಬಾರದು ಎಂಬ ಆಲೋಚನೆಯೇ ಅವರ ದೈಹಿಕ ಪರಿವರ್ತನೆಯ ಪ್ರಮುಖ ತಿರುವಾಯಿತು.
ಜಿಮ್‌ಗೆ ಸೇರಿದ ಬಳಿಕ ಕೀರ್ತಿ ಕೇವಲ 9 ತಿಂಗಳಲ್ಲಿ ಸುಮಾರು 10 ಕೆಜಿ ತೂಕ ಇಳಿಸಿದರು. ತಮ್ಮಫಿಟ್‌ನೆಸ್ ಪ್ರಯಾಣದ ಹಳೆಯ ವರ್ಕೌಟ್ ವೀಡಿಯೋವನ್ನು ಹಂಚಿಕೊಂಡ ಅವರು, ಫಿಟ್‌ನೆಸ್ ಎಂಬುದು ಜೀವನದ ಅತಿ ದೊಡ್ಡ ಗುರು ಎಂದಿದ್ದಾರೆ.
ಇಂದಿಗೂ ಕೆಲವರು ತಮ್ಮಲ್ಲಿ ಬಂದು, ನೀನು ದಪ್ಪಗಿದ್ದಾಗ ಚೆನ್ನಾಗಿ ಕಾಣುತ್ತಿದ್ದೆ ಎಂದು ಹೇಳಿದಾಗ ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ ಎಂದು ಕೀರ್ತಿ ತಿಳಿಸಿದ್ದಾರೆ. ನಾವು ದಪ್ಪಗಿದ್ದರೆ ಫಿಟ್ ಆಗಿ ಎಂದು, ತೆಳ್ಳಗಾದರೆ ಮತ್ತೆ ದಪ್ಪವಾಗಿ ಎಂದು ಕೇಳುವ ಈ ಜಗತ್ತಿನ ಮಾನದಂಡ ನನಗೆ ಅರ್ಥವಾಗುವುದಿಲ್ಲವೆಂದು ನಟಿ ವಿವರಿಸಿದ್ದಾರೆ.
Bangalore [Bangalore],Bangalore,Karnataka
May 18, 2026 10:51 PM IST













