Last Updated:
IMDಯಿಂದ ಗಂಭೀರ ಎಚ್ಚರಿಕೆ, ಉತ್ತರ ಕನ್ನಡದಲ್ಲಿ ಮುಂದಿನ 1 ಗಂಟೆ ಭೀಕರ ಗುಡುಗು ಮಿಂಚು ಸಹಿತ ಮಳೆ, 40 ಕಿಮೀ ಬಿರುಗಾಳಿ ಬೀಸೋದು ಪಕ್ಕಾ, ಮುಂದಿನ 10 ದಿನದವರೆಗೆ ಈ ಸ್ಥಳಗಳಲ್ಲಿ ಮಳೆ ಬಿಡುವು ನೀಡುವ ಲಕ್ಷಣವಿಲ್ಲ
ಬೆಂಗಳೂರು/ ಉತ್ತರಕನ್ನಡ: ನೀವು ಬೆಂಗಳೂರು (Bengaluru) ಹಾಗೂ ಉತ್ತರ ಕನ್ನಡ ಜಿಲ್ಲೆಯವರಾ? ಹಾಗಾದ್ರೆ ಮನೆಯಿಂದ ಹೊರಬೀಳುವ ಮುನ್ನ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ! ಭಾರತೀಯ ಹವಾಮಾನ ಇಲಾಖೆ (IMD) ಇದೀಗ ತಾನೇ ‘ಬಿಗ್ ಅಲರ್ಟ್’ ಕೊಟ್ಟಿದೆ. ಕೇವಲ ಮುಂದಿನ 1 ಗಂಟೆಯಲ್ಲಿ ಪ್ರಕೃತಿ (Nature) ತನ್ನ ರೌದ್ರಾವತಾರ ತೋರಲಿದ್ದು, ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎಂಬ ಆತಂಕ ಶುರುವಾಗಿದೆ!
ಹೌದು, ಮುಂದಿನ ಕೇವಲ 1 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭೀಕರ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಬರೋಬ್ಬರಿ 30 ರಿಂದ 40 ಕಿ.ಮೀ ವೇಗದಲ್ಲಿ ಭಯಾನಕ ಬಿರುಗಾಳಿ ಬೀಸಲಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುವ ಭೀತಿ ಎದುರಾಗಿದೆ. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುವುದು ಗ್ಯಾರಂಟಿ. ಹೀಗಾಗಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಎಚ್ಚರಿಕೆ ನೀಡಲಾಗಿದೆ!
ಕರಾವಳಿಗೆ ಸಿಕ್ತು ‘ಬಿಗ್ ರಿಲೀಫ್’!
ಒಂದೆಡೆ ಉತ್ತರ ಕನ್ನಡ ತತ್ತರಿಸುತ್ತಿದ್ದರೆ, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕರಾವಳಿ ಬಳಿ ಗಾಳಿಯ ಒತ್ತಡ ಹಾಗೂ ಚಲನೆ ಕಡಿಮೆಯಾದ ಕಾರಣ, ಜೂನ್ 14 ಅಥವಾ 15ರಿಂದ ಮಳೆಯ ಅಬ್ಬರ ಇಳಿಮುಖವಾಗಲಿದೆ. ಮುಂದಿನ 2 ಅಥವಾ 3 ದಿನಗಳಲ್ಲಿ ವಾತಾವರಣ ಸಹಜ ಸ್ಥಿತಿಗೆ ತಲುಪಲಿದ್ದು, ದಿನಕ್ಕೆ ಕೇವಲ 2-3 ಬಾರಿಯ ಸಾಧಾರಣ ಮಳೆಗೆ ಮಾತ್ರ ಸೀಮಿತವಾಗುವ ಸಾಧ್ಯತೆಗಳಿವೆ.
ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈಗಿನ ವರದಿ ಪ್ರಕಾರ, ಜೂನ್ 17ರ ತನಕ ಇದೇ ವಾತಾವರಣ ಮುಂದುವರಿಯಲಿದ್ದು, ಆ ನಂತರವಷ್ಟೇ ಮಳೆ ಕಡಿಮೆಯಾಗುವ ನಿರೀಕ್ಷೆ ಇದೆ. ಹಾವೇರಿ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಮುಂದಿನ 2 ದಿನಗಳ ಕಾಲ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕೇವಲ ಮೋಡ ಕವಿದ ವಾತಾವರಣ ಇರಲಿದ್ದು, 2 ದಿನಗಳ ಬಳಿಕ ಮಳೆಯ ಪ್ರಮಾಣ ಸಂಪೂರ್ಣ ತಗ್ಗಲಿದೆ.
ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ 10 ದಿನ ಕಾದಿದೆ ಸಂಕಷ್ಟ!
ಒಂದೆಡೆ ಉತ್ತರದಲ್ಲಿ ಮಳೆ ಕಡಿಮೆಯಾಗುತ್ತಿದ್ದರೆ, ದಕ್ಷಿಣ ಒಳನಾಡಿಗೆ ಮುಂದಿನ ಬರೋಬ್ಬರಿ 10 ದಿನಗಳವರೆಗೂ ಮಳೆಯಿಂದ ಮುಕ್ತಿ ಸಿಗುವ ಲಕ್ಷಣಗಳೇ ಇಲ್ಲ! ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ ಭಾಗಗಳಲ್ಲಿ ಸಾಧಾರಣ ಮಳೆಯಾಗುವುದು ಪಕ್ಕಾ ಎನ್ನಲಾಗಿದೆ.
Uttara Kannada,Karnataka













