Women’s T20I WC: ಭಾರತ vs ಪಾಕ್ ವಿರುದ್ಧ ಹೈವೋಲ್ಟೆಜ್ ಕದನಕ್ಕೆ ಕೇವಲ ನಾಲ್ಕೇ ದಿನ! ಇಲ್ಲಿದೆ ನೋಡಿ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ | ಕ್ರೀಡಾ ಸುದ್ದಿ | ACTPnews

Women's T20I WC: ಭಾರತ vs ಪಾಕ್ ವಿರುದ್ಧ ಹೈವೋಲ್ಟೆಜ್ ಕದನಕ್ಕೆ ಕೇವಲ ನಾಲ್ಕೇ ದಿನ! ಇಲ್ಲಿದೆ ನೋಡಿ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ | ಕ್ರೀಡಾ ಸುದ್ದಿ


ಎ ಗುಂಪಿನಲ್ಲಿ ಭಾರತ

ಪಾಕಿಸ್ತಾನ, ನೆದರ್‌ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾದಂತಹ ತಂಡಗಳ ಜೊತೆಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹಲವಾರು ಪ್ರಮುಖ ಆಟಗಾರ್ತಿಯರಿಗೆ ಫಾರ್ಮ್ ಕೊರತೆ ಇರುವುದರಿಂದ ಮತ್ತು ಕೆಲವು ಆಲ್‌ರೌಂಡರ್‌ಗಳು ಗಾಯಗಳಿಂದ ಬಳಲುತ್ತಿರುವುದರಿಂದ ಭಾರತಕ್ಕೆ ಈ ಟೂರ್ನಿ ದೊಡ್ಡ ಸವಾಲಾಗಿದೆ. ಭಾರತ ತಂಡದಲ್ಲಿ ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಾಧಾ ಯಾದವ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಶ್ರೀ ಚರಣಿ, ಕ್ರಾಂತಿ ಗೌಡ್, ರೇಣುಕಾ ಶರ್ಮಾ ಅಂತಹ ಆಟಗಾರ್ತಿಯರಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಶ್ರೇಯಾಂಕಾ ಪಾಟೀಲ್/ನಂದಿನಿ ಶರ್ಮಾ ಮತ್ತು ರೇಣುಕಾ ಠಾಕೂರ್ ಪ್ಲೇಯಿಂಗ್ ಇಲೆವೆನ್​​ನಲ್ಲಿ ಆಡುವ ಸಾಧ್ಯತೆ ಇದೆ. ಜೆಮಿಮಾ ರೋಡ್ರಿಗಸ್ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯನ್ನು ಹೊರಲಿದ್ದಾರೆ. 130.25 ಸ್ಟ್ರೈಕ್ ರೇಟ್‌ ಹೊಂದಿರುವ ಜೆಮಿಮಾ ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ದಾಖಲೆಯನ್ನು ಹೊಂದಿದ್ದಾರೆ. 21 ವರ್ಷದ ಎಡಗೈ ಸ್ಪಿನ್ನರ್ ಶ್ರೀ ಚರಣಿ ಬೌಲಿಂಗ್ ದಾಳಿಯಲ್ಲಿ ‘ಎಕ್ಸ್-ಫ್ಯಾಕ್ಟರ್’ ಆಗಿ ಹೊರಹೊಮ್ಮಬಹುದು ಎನ್ನಲಾಗುತ್ತಿದೆ. ಆದರೆ ಯಸ್ತಿಕಾ ಭಾಟಿಯಾ ಅವರ ನಿಧಾನಗತಿಯ ಬ್ಯಾಟಿಂಗ್ ಮತ್ತು ರಿಚಾ ಘೋಷ್ ಅವರ ಫಾರ್ಮ್ ತಂಡಕ್ಕೆ ಕಳವಳಕಾರಿಯಾಗಿದೆ.

ವಿಶ್ವದಾಖಲೆ ಸಮೀಪ ಮಂಧಾನ

ಸ್ಮೃತಿ ಮಂಧಾನ ಅವರು ತಮ್ಮ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 4,500 ರನ್‌ಗಳ ಮೈಲಿಗಲ್ಲು ತಲುಪಲು 167 ರನ್‌ಗಳ ದೂರದಲ್ಲಿದ್ದಾರೆ. ಅರುಂಧತಿ ರೆಡ್ಡಿ 50 ಟಿ20 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಇನ್ನೂ ಎರಡು ವಿಕೆಟ್‌ಗಳ ಅಗತ್ಯವಿದೆ. ಜೂನ್ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವು ತಂಡದ ಸೆಮಿಫೈನಲ್ ತಲುಪುವ ಸಾಧ್ಯತೆಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕವೆಂದು ಪರಿಗಣಿಸಲಾಗಿದೆ.

ಭಾರತದ ವೇಳಾಪಟ್ಟಿ ಹೀಗಿದೆ

ಜೂನ್ 14: ಭಾರತ vs ಪಾಕಿಸ್ತಾನ, ಎಡ್ಜ್‌ಬಾಸ್ಟನ್ (ಬರ್ಮಿಂಗ್ಹ್ಯಾಮ್) – ಸಂಜೆ 7:00

ಜೂನ್ 17: ಭಾರತ vs ನೆದರ್‌ಲ್ಯಾಂಡ್ಸ್, ಹೆಡಿಂಗ್ಲಿ (ಲೀಡ್ಸ್) – ಸಂಜೆ 7:00

ಜೂನ್ 21: ಭಾರತ vs ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫರ್ಡ್ (ಮ್ಯಾಂಚೆಸ್ಟರ್) – ಸಂಜೆ 7:00

ಜೂನ್ 25: ಭಾರತ vs ಬಾಂಗ್ಲಾದೇಶ, ಓಲ್ಡ್ ಟ್ರಾಫರ್ಡ್ (ಮ್ಯಾಂಚೆಸ್ಟರ್) – ಸಂಜೆ 7:00

ಜೂನ್ 28: ಭಾರತ vs ಆಸ್ಟ್ರೇಲಿಯಾ, ಲಾರ್ಡ್ಸ್ (ಲಂಡನ್) – ಸಂಜೆ 7:00

ಐಸಿಸಿ ಮಹಿಳಾ ಟಿ20 ವಿಶ್ವಕಪ್ ವಿಜೇತರು ಮತ್ತು ಫೈನಲ್ ಎದುರಾಳಿ

2009- ಇಂಗ್ಲೆಂಡ್ vs ನ್ಯೂಜಿಲೆಂಡ್

2010- ಆಸ್ಟ್ರೇಲಿಯಾ vs ನ್ಯೂಜಿಲೆಂಡ್

2012- ಆಸ್ಟ್ರೇಲಿಯಾ vs ಇಂಗ್ಲೆಂಡ್

2014- ಆಸ್ಟ್ರೇಲಿಯಾ vs ಇಂಗ್ಲೆಂಡ್

2016- ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ

2018- ಆಸ್ಟ್ರೇಲಿಯಾ vs ಇಂಗ್ಲೆಂಡ್

2020- ಆಸ್ಟ್ರೇಲಿಯಾ vs ಭಾರತ

2023- ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ

2024- ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports