ಜೂನ್ 7ರಂದು ಕಿಡ್ನ್ಯಾಪ್ ಆಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಶವ ಜೂನ್ 09 ರಂದು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಪತ್ತೆಯಾಯ್ತು. ಇದು ಯಾವುದೋ ಹಣದ ವಿಚಾರಕ್ಕೆ ನಡೆದ ಕೊಲೆ ಎಂಬಂತೆ ಕಂಡಿದ್ದು, ಆದ್ರೆ ಪೊಲೀಸರ ತನಿಖೆಯಲ್ಲಿ ಘಟಾನುಘಟಿಗಳ ಹೆಸರೇ ಹೊರಬಂತು ದರ್ಶನ್ ಅವರೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿದ್ರು ಎನ್ನುವ ಆರೋಪ ಕೇಳಿ ಬಂತು.
ದರ್ಶನ್ ಬಾಳಲ್ಲಿ ಗೆಳತಿ ಪವಿತ್ರಾ ಗೌಡ ಎಬ್ಬಿಸಿದ ಬಿರುಗಾಳಿಯೇ ಇಂದು ನಟನನ್ನ ಜೈಲು ಕಂಬಿ ಹಿಂದೆ ನಿಲ್ಲಿಸಿದೆ ಅಂದ್ರು ತಪ್ಪಾಗಲ್ಲ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕೆ ದರ್ಶನ್ ಗ್ಯಾಂಗ್, ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದರು. ದರ್ಶನ್ ಹಾಗೂ ಪವಿತ್ರಾ ಆತನ ಮೇಲೆ ಹಲ್ಲೆ ನಡೆಸಿದ್ರು ಎನ್ನುವ ವಿಚಾರ ಚಾರ್ಜ್ ಶೀಟ್ನಲ್ಲಿ ದಾಖಲಾಗಿದೆ. ನಿರಂತರವಾಗಿ ಹಲ್ಲೆ ನಡೆಸಿದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಎಂದು ವರದಿ ಆಗಿದೆ.
ಜೂನ್ 10 : ದರ್ಶನ್ ಮೂವರನ್ನು ಶರಣಾಗುವಂತೆ ಮನವೊಲಿಕೆ ಮಾಡಿದ್ರಂತೆ. ಬಳಿಕ ಮೂವರು ದರ್ಶನ್ ಸಹಚರರು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಠಾಣೆಗೆ ಶರಣಾಗಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿತ್ತು. ಈ ವೇಳೆ ಆರೋಪಿಗಳು ದರ್ಶನ್ ಹಾಗೂ ಪವಿತ್ರಾ ಗೌಡ ಹೆಸರನ್ನು ಬಾಯ್ಬಿಟ್ಟಿದ್ರು.
ಜೂನ್ 10 : ರಾತ್ರಿಯೇ ಮೈಸೂರಿಗೆ ತೆರಳಿದ ಬೆಂಗಳೂರು ಪೊಲೀಸರು, ದರ್ಶನ್ ಇರುವ ಸ್ಥಳದ ಮಾಹಿತಿ ಕಲೆ ಹಾಕಿ ಬಳಿಕ ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನೂ ಬಂಧಿಸಿದ್ರು. ದರ್ಶನ್ ಬಂಧನದ ಸುದ್ದಿ ಕೇಳಿ ಇಡೀ ಸ್ಯಾಂಡಲ್ವುಡ್ ಬೆಚ್ಚಿಬಿದ್ದಿತ್ತು.
ಬಳಿಕ ಆರೋಪಿಗಳನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು. ರಾಜಾತಿಥ್ಯ ಪ್ರಕರಣದ ಬಳಿಕ ದರ್ಶನ್
ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರು. ಕೆಲವು ತಿಂಗಳ ನಂತರ ಮೆಡಿಕಲ್ ನೆಪ ಹೇಳಿ ಜಾಮೀನು ಪಡೆದು ದರ್ಶನ್ ಹೊರ ಬಂದಿದ್ರು. ಬಳಿಕ ದರ್ಶನ್ ಜಾಮೀನು ರದ್ದು ಮಾಡಬೇಕೆಂದು ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ರು. ದರ್ಶನ್ ಆ್ಯಂಡ್ ಗ್ಯಾಂಗ್ಗೆ ಶಾಕ್ ಕೊಟ್ಟ ಸುಪ್ರೀಂ ಆರೋಪಿಗಳ ಜಾಮೀನು ರದ್ದು ಮಾಡಿತ್ತು.
ಕಳೆದ ಆಗಸ್ಟ್ ನಿಂದ ಮತ್ತೆ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪ್ರಕರಣ ಏಳು ಜನ ಆರೋಪಿಗಳು ಈಗಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮತ್ತೊಮ್ಮೆ ಜಾಮೀನು ಕೋರಿ ದರ್ಶನ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಜಾಮೀನು ನಿರಾಕರಣೆ ಮಾಡಿ ಒಂದು ವರ್ಷದವರೆಗೆ ಅರ್ಜಿ ಹಾಕದಂತೆ ಸೂಚನೆ ನೀಡಲಾಗಿದ್ದು, ಸದ್ಯ 2027ರ ಮೇ ತಿಂಗಳ ವರೆಗೂ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲಿನಲ್ಲೇ ಇರಬೇಕಿದೆ.
ರೇಣುಕಾಸ್ವಾಮಿ ಕೇಸ್ನ ಆರೋಪಿಗಳು
* ದರ್ಶನ್ ತೂಗುದೀಪ (ನಟ)
* ಪವಿತ್ರಾ ಗೌಡ
* ಅನುಕುಮಾರ್
* ಲಕ್ಷ್ಮಣ್
* ವಿನಯ್ ವಿ.
* ಜಗದೀಶ್
* ಪ್ರದೂಷ್.
* ನಾಗರಾಜು ಆರ್.
* ಪವನ್
* ರಾಘವೇಂದ್ರ
* ನಂದೀಶ್
* ಧನರಾಜ್
* ದೀಪಕ್
* ರವಿ
* ಕಾರ್ತಿಕ್
* ನಿಖಿಲ್
* ಕೇಶವಮೂರ್ತಿ
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)












