Drishyam 3: ದೃಶ್ಯಂ 3 ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆ! ಪಕ್ಕಾ ಬ್ಲಾಕ್​ಬಸ್ಟರ್ ಎಂದ ಆಡಿಯನ್ಸ್ | Drishyam 3 released getting blockbuster reviews from audience | | ACTPnews

ದೃಶ್ಯಂ3


Last Updated:

ಅಂತೂ ಇಂತೂ ದೃಶ್ಯಂ 3 ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳು ಕಳೆದಿವೆ, ಜನರ ಪ್ರತಿಕ್ರಿಯೆ ಹೇಗಿದೆ ಗೊತ್ತಾ? ಪಕ್ಕಾ ಬ್ಲಾಕ್​ಬಸ್ಟರ್ ಅಂತಿದ್ದಾರೆ ಆಡಿಯನ್ಸ್.

ದೃಶ್ಯಂ3
ದೃಶ್ಯಂ3
ಅಂತೂ ಇಂತೂ ಹಲವಾರು ಬಾರಿ ಮುಂದೂಡಿಕೆಯ ನಂತರ ದೃಶ್ಯಂ 3 ಸಿನಿಮಾ (Drishyam 3) ರಿಲೀಸ್ ಆಗಿದೆ. ಮಲ್ಟಿಸ್ಟಾರ್ ಮೋಹನ್​ಲಾಲ್ (Mohanlal) ಅಭಿನಯದ ಸಿನಿಮಾ ಮೊದಲ ದಿನವೇ ಪ್ರೇಕ್ಷಕನ ಮೆಚ್ಚುಗೆ ಗಳಿಸಿ ಮೌತ್​ಟಾಕ್​ನಿಂದಲೇ ಮತ್ತಷ್ಟು ಪ್ರೇಕ್ಷಕರ ಸೆಳೆಯುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ. ಹಾಗಾದರೆ ಸಿನಿಮಾಗೆ ಈಗ ಸದ್ಯದ ಆರಂಭಿಕ ಪ್ರತಿಕ್ರಿಯೆಗಳು ಹೇಗಿದೆ ಅಂತ ಇಲ್ಲಿ ನೋಡೋಣ.

ದೃಶ್ಯಂ 3  ಸಿನಿಂಆದ ಮೊದಲ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಅದರ ಸಿನಿಮಾದ ಆಕರ್ಷಕ ನಿರೂಪಣೆಯನ್ನು ಹೊಗಳುತ್ತಿದ್ದಾರೆ. ಇದು 3ನೇ ಪಾರ್ಟ್ ಆಗಿದ್ರೂ ಕೂಡಾ ಅಷ್ಟು ನಾಜೂಕಾಗಿ ಜಾರ್ಜ್ ಕುಟ್ಟಿಯ ಕಥೆಯನ್ನು ಹೆಣೆಯಲಾಗಿದೆ.

ಜಾರ್ಜ್‌ಕುಟ್ಟಿ ಅವರ ಕಮ್​ಬ್ಯಾಕ್​ ಅನ್ನು ಪ್ರೇಕ್ಷಕರು ಅಕ್ಷರಶಃ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಸೂಪರ್‌ಸ್ಟಾರ್ ಅವರ ಹುಟ್ಟುಹಬ್ಬದಂದು ಮೇ 21 ರಂದು ಬಿಡುಗಡೆಯಾದ ಬಹುನಿರೀಕ್ಷಿತ ಬ್ಲಾಕ್‌ಬಸ್ಟರ್ ಥ್ರಿಲ್ಲರ್ ಫ್ರಾಂಚೈಸಿಯ ಮೂರನೇ ಭಾಗದಲ್ಲಿ ಮೋಹನ್ ಲಾಲ್ ಐಕಾನಿಕ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಮೊದಲ ಪ್ರದರ್ಶನಗಳು ಪ್ರಾರಂಭವಾದ ಕೂಡಲೇ, ಪ್ರೇಕ್ಷಕರು ಆನ್‌ಲೈನ್‌ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ವಿಶೇಷವಾಗಿ ಚಿತ್ರದ ಮೊದಲಾರ್ಧ, ಭಾವನಾತ್ಮಕ ಕ್ಷಣಗಳು ಮತ್ತು ಮೋಹನ್ ಲಾಲ್ ಅವರ ಸ್ಕ್ರೀನ್ ಪ್ರಸೆನ್ಸ್​ ಬಗ್ಗೆ ಛಾನ್ಸೇ ಇಲ್ಲ ಗುರು ಎನ್ನುವಂತಹ ರೆಸ್ಪಾನ್ಸ್ ವ್ಯಕ್ತವಾಗಿದೆ.

ಎಕ್ಸ್‌ನಲ್ಲಿ ಸಿನಿಮಾದ ಅಭಿಮಾನಿಗಳು ಇಂಟರ್​ವೆಲ್​ ತನಕ ಸಿನಿಮಾ ನೋಡಿಯೇ “ಸಂಪೂರ್ಣ ಸಿನಿಮಾ” ಎಂದು ಬಣ್ಣಿಸಿದ್ದಾರೆ. ಅದರಲ್ಲೂ ಮೋಹನ್​ಲಾಲ್ ಎಂಟ್ರಿ ದೃಶ್ಯ ಪಕ್ಕಾ “ವಿಸಿಲ್” ಮೊಮೆಂಟ್ ಎಂದು ಬಣ್ಣಿಸಿದ್ದಾರೆ. ಒಬ್ಬ ಪ್ರೇಕ್ಷಕ ಸಿನಿಮಾ ಬಗ್ಗೆ ಬರೆದು, ದೃಶ್ಯಂ3 ಮೊದಲಾರ್ಧ ತುಂಬಾ ಚೆನ್ನಾಗಿದೆ. ಮಧ್ಯಂತರ ಬ್ಲಾಕ್ ತುಂಬಾ ಅದ್ಭುತವಾಗಿದೆ. ಮೋಹನ್ ಲಾಲ್ ಎಂದಿನಂತೆ ಅಲ್ಟಿಮೇಟ್. ಇಂಟರ್​​ವೆಲ್ ದ್ವಿತೀಯಾರ್ಧಕ್ಕೆ ಹೆಚ್ಚಿನ ಕುತೂಹಲವನ್ನು ಸೃಷ್ಟಿಸುತ್ತದೆ. ದೃಶ್ಯಂ ಮತ್ತು ದೃಶ್ಯಂ2 ಗೆ ಸೆಕೆಂಡ್ ಹಾಫ್ ಅದ್ಭುತವಾಗಿದೆ. ಇದು ಹಾಗೆಯೇ ಎಂದಿದ್ದಾರೆ.

ಮತ್ತೊಬ್ಬ ವೀಕ್ಷಕರು ಸಿನಿಮಾ ಆರಂಭದಲ್ಲಿ ಭಾವನೆ ಮತ್ತು ಸಸ್ಪೆನ್ಸ್ ಅನ್ನು ತುಂಬಾನೆ ಚೆನ್ನಾಗಿ ಬ್ಯಾಲೆನ್ಸ್ ಮಾಡಿರುವುದನ್ನು ಮೆಚ್ಚಿದರು. ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ಅವರ ಅಭಿನಯವನ್ನು ಶ್ಲಾಘಿಸಿದರು. ಹಿಂದಿನ ಭಾಗಗಳಲ್ಲಿ ಪ್ರೇಕ್ಷಕರ ಮಧ್ಯೆ ಮೆಚ್ಚುಗೆ ಗಳಿಸಿದ್ದ ಸ್ಟೋರಿ ಟೆಲ್ಲಿಂಗ್ ಸ್ಟೈಲ್ ಇಲ್ಲಿ ಕೂಡಾ ಸಕ್ಸಸ್ ಆಗಿದೆ ಎಂದಿದ್ದಾರೆ.

ಅದೇ ಸಮಯದಲ್ಲಿ, ಕೆಲವು ಮಿಶ್ರ ಪ್ರತಿಕ್ರಿಯೆಗಳು ಆನ್‌ಲೈನ್‌ನಲ್ಲಿಯೂ ಸಹ ಕಾಣಿಸಿಕೊಂಡವು. ಕೆಲವು ವೀಕ್ಷಕರು ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಈ ಮೂವಿ ಸ್ವಲ್ಪ ಸ್ಲೋ ಆಗಿದೆ ಎಂದಿದ್ದಾರೆ. ಒಬ್ಬ ಎಕ್ಸ್ ಬಳಕೆದಾರ ಕಮೆಂಟ್ ಮಾಡಿ “ಇದು ಅದ್ಭುತವಾಗಿದೆ, ಆದರೆ ದೃಶ್ಯಂ 3 ಸ್ವಲ್ಪ ನಿಧಾನವಾಗಿದೆ” ಎಂದು ಬರೆದರು.

ಇದನ್ನೂ ಓದಿ: Jayam Ravi: ಡಿವೋರ್ಸ್ ಬೆನ್ನಲ್ಲೇ ನಟ ಜಯಂ ರವಿ ಮಹತ್ವದ ನಿರ್ಧಾರ! ತಮಿಳು ನಟ ಹೊರಟಿದ್ದು ಎಲ್ಲಿಗೆ?

ಜೀತು ಜೋಸೆಫ್ ನಿರ್ದೇಶಿಸಿದ ದೃಶ್ಯಂ 3, ದೃಶ್ಯಂ 2 ರ ಘಟನೆಗಳ ನಂತರ ಜಾರ್ಜ್‌ಕುಟ್ಟಿ ಮತ್ತು ಅವರ ಕುಟುಂಬದ ಕಥೆಯನ್ನು ಮುಂದುವರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 2013 ರಲ್ಲಿ ಮೊದಲ ಚಿತ್ರದ ಬಿಡುಗಡೆಯೊಂದಿಗೆ ಪ್ರಾರಂಭವಾಗಿ 2021 ರಲ್ಲಿ ಸೀಕ್ವೆಲ್ ಬಂದಿತ್ತು.

ಮಲಯಾಳಂ ಮೂಲದ ಈ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು. ನಂತರ ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ರೀಮೇಕ್‌ಗಳಿಗೆ ಸ್ಫೂರ್ತಿ ನೀಡಿತು. ಮೋಹನ್ ಲಾಲ್ ನಿರ್ವಹಿಸಿದ ಜಾರ್ಜ್ ಕುಟ್ಟಿ, ಅಂದಿನಿಂದ ಭಾರತೀಯ ಥ್ರಿಲ್ಲರ್ ಸಿನಿಮಾದ ಅತ್ಯಂತ ಅಪರೂಪದ ಪಾತ್ರಗಳಲ್ಲಿ ಒಂದಾಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed