Last Updated:
Vijay: ನಟ ವಿಜಯ್ ಅವರು ಧ್ವಜಕ್ಕೆ ನಮಸ್ಕರಿಸಿ ದೇವಸ್ಥಾನದ ಒಳಗೆ ಹೋಗಿ ಅರ್ಚಕರ ಮುಂದೆ ಸಂಕಲ್ಪ ಮಾಡಿ ಕೈ ಮುಗಿದು ಪ್ರಾರ್ಥಿಸಿದರು.
ತಮಿಳುನಾಡಿನ (Tamil Nadu) ಪಾಪ್ಯುಲರ್ ಸಿಎಂ ಈಗ ಉಡುಪಿ (Udupi) ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲೂರು (Kollur) ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ತಮಿಳುನಾಡು ಮುಖ್ಯಮಂತ್ರಿ (Tamil Nadu CM) ವಿಜಯ್ ಅವರು ಆಗಮಿಸಿದ್ದು, ಸಂಕಲ್ಪ ಬಳಿಕ ಮೂಕಾಂಬಿಕಾಗೆ ದೀಪಾರಾಧನೆ ನಡೆದಿದೆ.
ಪ್ರಧಾನ ಅರ್ಚಕ ರಾಮಚಂದ್ರ ಅಡಿಗರಿಂದ ಮೂಕಾಂಬಿಕೆಗೆ ದೀಪಾರಾಧನೆ ನಡೆದಿದ್ದು, ವಿಜಯ್ ಅವರು ಮುಕಾಂಬಿಕೆಯ ದರ್ಶನ ಮಾಡಿದ್ದಾರೆ. ಸಂಕಲ್ಪ ಮಾಡಿ ವಿಜಯ್ ಪೂಜೆ ಸಲ್ಲಿಸಿದ್ದಾರೆ.
ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರಿಂದ ಸಂಕಲ್ಪ ಮಾಡಿದ್ದು ದೇವಳದ ಮುಂಭಾಗದಲ್ಲಿರುವ ಧ್ವಜಕ್ಕೆ ನಮಿಸಿ ದೇಗುಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರ್ಚಕರ ಸಮ್ಮುಖದಲ್ಲಿ ಸಂಕಲ್ಪ ಮಾಡಿ ವಿಜಯ್ ಕೈಮುಗಿದಿದ್ದಾರೆ. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಉಪಸ್ಥಿತಿ ಇದ್ದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮುಖ್ಯಮಂತ್ರಿ ವಿಜಯ್ ಪೂಜೆ ಸಲ್ಲಿಸಿದ್ದು ಮೂಕಾಂಬಿಕೆಗೆ ನಮಿಸಿ ಪೂಜೆ ಸಲ್ಲಿಸಿದ್ದಾರೆ. ಪ್ರಧಾನ ಅರ್ಚಕರು ರಾಮಚಂದ್ರ ಅಡಿಗರಿಂದ ವಿಜಯ್ ಪ್ರಸಾದ ಸ್ವೀಕರಿಸಿದರು.
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೈಗೆ ಅರ್ಚಕರು ರಕ್ಷಾದಾರ ಕಟ್ಟಿದ್ದಾರೆ.
ಒಳಗೆ ಬಂದು ದೇವರ ದರ್ಶನವನ್ನು ಮಾಡಿ ದೇವಸ್ಥಾನ ನೋಡಿ ತೆರಳಲಿದ್ದಾರೆ. ಇಂದು ಶುಕ್ರವಾರ ಬಹಳ ವಿಶೇಷ ದಿನವೇನಲ್ಲ. ಆದರೆ ದೇವಿಗೆ ಸಂಜೆ ಪ್ರದೋಷ ಕಾಲಕ್ಕೂ ಮೊದಲು ಉತ್ಸವ ನಡೆಯಲಿದೆ. ಇದು ಸಿಎಂ ವಿಜಯ್ ಆಗಮನಕ್ಕೋಸ್ಕರ ಮಾಡಿರುವ ಸಿದ್ಧತೆಗಳೇನಲ್ಲ. ಎಂದಿನಂತೆ ನಡೆಯುವ ಉತ್ಸವ ಎಂದು ಅರ್ಚಕರು ತಿಳಿಸಿದ್ದಾರೆ.
ಈ ಉತ್ಸವ ಪ್ರತಿ ಶುಕ್ರವಾರವು ನಡೆಯುವಂತ ಒಂದು ಸಾಮಾನ್ಯ ಪೂಜಾ ಪ್ರಕ್ರಿಯೆ. ಕೊಲ್ಲೂರಿನಲ್ಲಿ ಯಾರೇ ಬಂದರೂ ಕೂಡ ವಿಶೇಷವಾದ ಪೂಜೆ ಎನ್ನುವ ಯಾವುದೇ ಪರಿಪಾಠವಿಲ್ಲ. ಕೆಲವು ದೇವಸ್ಥಾನಗಳಲ್ಲಿ ವಿಶೇಷ ವ್ಯಕ್ತಿಗಳು ಬಂದಾಗ ಪದೇ ಪದೇ ಮಂಗಳಾರತಿ ಮಾಡುವ ಪ್ರಕ್ರಿಯೆ ಇದೆ. ಮಂಗಳಾರತಿ ಸಮಯದಲ್ಲಿ ಬಂದರೆ ಮಂಗಳಾರತಿ ನೋಡೋ ಅವಕಾಶ
ಆದರೆ ನಮ್ಮ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಈ ರೀತಿಯ ಯಾವುದೇ ಪೂಜಾ ಪ್ರಕ್ರಿಯೆಗಳು ಇಲ್ಲ ಎಂದಿದ್ದಾರೆ.
Bangalore,Karnataka













