Kaajal Kundar: ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! | | ACTPnews

ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್!


Last Updated:

ಬಾಲಿವುಡ್ ನಟಿ ಕಾಜಲ್ ಕುಂದರ್ ತುಂಬಾನೆ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಮ್ಯಾಂಗೋ ಪಚ್ಚ ಚಿತ್ರದ ತಮ್ಮ ಸೂಜಿ ಪಾತ್ರಕ್ಕೆ ತಾವೇ ಡಬ್ ಕೂಡ ಮಾಡಿದ್ದಾರೆ. ತಮ್ಮ ಕನ್ನಡ ಪ್ರೀತಿಯ ಒಂದಷ್ಟು ವಿಷಯವನ್ನ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್!
ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್!

ಮ್ಯಾಂಗೋ ಪಚ್ಚ ಚಿತ್ರದ (Kaajal Kundar) ನಾಯಕಿ ಕಾಜಲ್ ಕುಂದರ್ ಉತ್ತರ ಭಾರತದವರೇ ಆಗಿದ್ದಾರೆ. ಆದರೆ, ಸಿನಿಮಾ ನಾಯಕಿ ಆಗಿ ಕಾಜಲ್ ಕುಂದರ್ (Kaajal Kundar) ಕನ್ನಡದಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕನ್ನಡ ಸಿನಿಮಾಗಳನ್ನ ಮಾಡ್ತಾನೇ ಕನ್ನಡ ಭಾಷೆಯನ್ನ ಕಲಿತುಕೊಂಡಿದ್ದಾರೆ. ತಮ್ಮ ಚಿತ್ರದಲ್ಲಿ ತಾವೇ ಡಬ್ (Dub) ಮಾಡೋವಷ್ಟು ಕನ್ನಡ (Kannada) ಕಲಿತುಕೊಂಡಿದ್ದಾರೆ. ಅದನ್ನ ಸ್ವತಃ ಕಾಜಲ್ ಕುಂದರ್ ಹೇಳಿಕೊಂಡಿದ್ದಾರೆ. ಎಲ್ಲಿ ಹೇಳಿದ್ದಾರೆ.? ಇನ್ನು ಏನೆಲ್ಲ ಹೇಳಿಕೊಂಡಿದ್ದಾರೆ ಅನ್ನೊದು ಇಲ್ಲಿದೆ ಓದಿ.

ಕನ್ನಡ ಮಾತನಾಡೋ ಕಾಜಲ್

ಕಾಜಲ್ ಕುಂದರ್ ಕನ್ನಡ ಮಾತನಾಡುತ್ತಾರೆ. ಕನ್ನಡ ಇವರಿಗೆ ಚೆನ್ನಾಗಿ ಬರ್ತಿದೆ. ಮ್ಯಾಂಗೋ ಪಚ್ಚ ಚಿತ್ರದ ಪ್ರೆಸ್ ಮೀಟ್ ಅಲ್ಲಿ ತುಂಬಾನೆ ಚೆನ್ನಾಗಿಯೇ ಕನ್ನಡ ಭಾಷೆಯಲ್ಲಿಯೇ ಮಾತನಾಡಿದ್ದಾರೆ.
Mango Pachha Movie Heroine Kajal Kunder Dubbed in kannada For Suji Role

ಕನ್ನಡ ಮಾತನಾಡೋ ಕಾಜಲ್

(ಚಿತ್ರ ಕೃಪೆ: ಕಾಜಲ್ ಕುಂದರ್ ಇನ್‌ಸ್ಟಾಗ್ರಾಮ್)

ಕನ್ನಡದ ಹುಡುಗಿಯ ರೀತಿನೇ ಕನ್ನಡ ಪದಗಳನ್ನ ಬಳಕೆ ಮಾಡಿಯೇ ಮಾತನಾಡಿದ್ದಾರೆ. ಮ್ಯಾಂಗೋ ಪಚ್ಚ ಚಿತ್ರದಲ್ಲಿ ಸಂಚಿತ್ ಸಂಜೀವ್‌ಗೆ ಪಾತ್ರಕ್ಕೆ ಜೋಡಿ ಆಗಿದ್ದಾರೆ. ಸಂಚಿತ್ ಪಾತ್ರದ ಹೆಸರು ಇಲ್ಲಿ ಮ್ಯಾಂಗೋ ಪಚ್ಚ ಅಂತಲೇ ಇದೆ. ಕಾಜಲ್ ಕುಂದರ್ ಇಲ್ಲಿ ಸೂಜಿ ಅನ್ನುವ ರೋಲ್ ಮಾಡಿದ್ದಾರೆ.

ಕಾಜಲ್ ಪಾತ್ರಕ್ಕೆ ಮೆಚ್ಚುಗೆ

ಕಾಜಲ್ ಕುಂದರ್ ಅಭಿನಯಕ್ಕೆ ಒಳ್ಳೆ ಅಭಿಪ್ರಾಯ ಬರ್ತಿವೆ. ಕಾಜಲ್ ಕುಂದರ್ ಅಷ್ಟು ಚೆನ್ನಾಗಿಯೇ ಇಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಒಂದು ವಿಶೇಷವೆಂದ್ರೆ ತಮ್ಮ ಪಾತ್ರಕ್ಕೆ ತಾವೇ ಕನ್ನಡ ಡಬ್ ಕೂಡ ಮಾಡಿದ್ದಾರೆ.

ಹೌದು, ಕಾಜಲ್ ಕುಂದರ್ ಈ ಚಿತ್ರದಲ್ಲಿ ತಾವೇ ಕನ್ನಡ ಡಬ್ ಮಾಡಿದ್ದಾರೆ. ಇದಕ್ಕೆ ಇಡೀ ತಂಡದ ಸಪೋರ್ಟ್ ಕೂಡ ಸಿಕ್ಕಿದೆ. ಅದನ್ನು ಕಾಜಲ್ ಕುಂದರ್ ಹೇಳಿಕೊಂಡಿದ್ದಾರೆ.

ಚೆನ್ನಾಗಿಲ್ಲ ಅಂದ್ರೆ ತೆಗೆದು ಬಿಡಿ…

ಕಾಜಲ್ ಕುಂದರ್ ಈ ಒಂದು ಮಾತು ಹೇಳಿದ್ದಾರೆ. ನನ್ನ ಪಾತ್ರಕ್ಕೆ ನಾನೇ ಡಬ್ ಮಾಡುತ್ತೇನೆ. ಕನ್ನಡ ಕಲಿತುಕೊಂಡಿದ್ದೇನೆ. ಒಂದು ವೇಳೆ ಚೆನ್ನಾಗಿಲ್ಲ ಅಂದ್ರೆ ತೆಗೆದು ಬಿಡಿ ಅಂತ ಡೈರೆಕ್ಟರ್‌ ವಿವೇಕ್ ಅವರಿಗೆ ಹೇಳಿದ್ದಾರೆ.

Mango Pachha Movie Heroine Kajal Kunder Dubbed in kannada For Suji Role

ಚೆನ್ನಾಗಿಲ್ಲ ಅಂದ್ರೆ ತೆಗೆದು ಬಿಡಿ…

(ಚಿತ್ರ ಕೃಪೆ: ಕಾಜಲ್ ಕುಂದರ್ ಇನ್‌ಸ್ಟಾಗ್ರಾಮ್)

ವಿವೇಕ್ ಇವರ ಬೇಡಿಕೆಗೆ ಓಕೆ ಅಂತ ಹೇಳಿದ್ದಾರೆ. ಈ ರೀತಿ ಸಪೋರ್ಟ್ ಸಿಕ್ಕ ಮೇಲೆ ಕಾಜಲ್ ಕುಂದರ್ ಅವರಿಗೆ ಚಿತ್ರದ ರೈಟರ್ ನಾಗಭೂಷಣ್ ತುಂಬಾನೆ ಹೆಲ್ಪ್ ಮಾಡಿದ್ದಾರೆ. ಪ್ರತಿ ಪದವನ್ನು ಅಷ್ಟೆ ನೀಟ್ ಆಗಿಯೇ ಹೇಳಿಕೊಟ್ಟಿದ್ದಾರೆ. ಇದರಿಂದ ಕನ್ನಡ ಡಬ್ಬಿಂಗ್ ಮಾಡಲು ಅನುಕೂಲ ಆಯಿತು ಅಂತ ಕಾಜಲ್ ಕುಂದರ್ ಹೇಳಿಕೊಂಡಿದ್ದಾರೆ.

ಕಾಜಲ್ ಕುಂದರ್ ಸಿನಿಮಾಗಳು

ಕಾಜಲ್ ಕುಂದರ್ ಈಗಾಗಲೆ ಕನ್ನಡದ ಹಲವು ಚಿತ್ರಗಳಿಗಳಲ್ಲಿ ಕೆಲಸ ಮಾಡಿದ್ದಾರೆ. ಬಾಂಡ್ ರವಿ ಚಿತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರದ ಮೂಲಕವೇ ಪೂರ್ಣ ಪ್ರಮಾಣದ ನಾಯಕಿ ಆಗಿ ಕಾಜಲ್ ಅಭಿನಯಸಿದರು.

ಮ್ಯಾಂಗೋ ಪಚ್ಚ ರಿಲೀಸ್

ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ರಿಲೀಸ್ ಆಗಿದೆ. ಬೆಂಗಳೂರಿನ ಸಂತೋಷ್ ಥಿಯೇಟರ್ ಅಲ್ಲಿ ಕಿಚ್ಚ ಸುದೀಪ್ ಈ ಚಿತ್ರವನ್ನ ಅಭಿಮಾನಿಗಳ ಜೊತೆಗೇನೆ ನೋಡಿದ್ದಾರೆ.

ಸಂಚಿತ್ ಸಂಜೀವ್ ತಾಯಿ ಸುಜಾತಾ, ಮನೆಯ ಇತರ ಸದಸ್ಯರು, ಪ್ರಿಯಾ ಸುದೀಪ್, ಸಾನ್ವಿ ಸುದೀಪ್ ಹೀಗೆ ಎಲ್ಲರೂ ಒಟ್ಟಿಗೆ ಕುಳಿತು ಈ ಚಿತ್ರ ನೋಡಿದ್ದಾರೆ. 1.25 ನಿಮಿಷದ ಈ ಚಿತ್ರವನ್ನ ಬಹುತೇಕರು ಮೆಚ್ಚಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports