India vs Afghanistan Test: ಅಫ್ಘಾನ್ ವಿರುದ್ಧ ಕೆಎಲ್ ರಾಹುಲ್ – ಗಿಲ್ ಶತಕ! ಮೊದಲ ದಿನದಾಟದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ | ಕ್ರೀಡಾ ಸುದ್ದಿ | ACTPnews

ಶುಭ್​​​ಗಿಲ್​​-ಕೆಎಲ್ ರಾಹುಲ್ ಶತಕ


Last Updated:

ಭಾರತ ತಂಡ ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ 368 ರನ್​ಗಳಿಸಿದೆ. ನಾಯಕ ಶುಭ್‌ಮನ್ ಗಿಲ್ ಜೊತೆಗೆ ರಿಷಭ್ ಪಂತ್ ಅಜೇಯ 50 ರನ್​(70 ಎಸೆತ 2 ಬೌಂಡರಿಗಳು,3 ಸಿಕ್ಸರ್‌ಗಳು )ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಪಂತ್​​​​​​​ ಹಾಗೂ ಗಿಲ್ 4ನೇ ವಿಕೆಟ್ ಜೊತೆಯಾಟದಲ್ಲಿ ಈಗಾಗಲೇ 121 ರನ್​ಗಳಿಸಿದ್ದಾರೆ.

ಶುಭ್​​​ಗಿಲ್​​-ಕೆಎಲ್ ರಾಹುಲ್ ಶತಕ
ಶುಭ್​​​ಗಿಲ್​​-ಕೆಎಲ್ ರಾಹುಲ್ ಶತಕ

ಶನಿವಾರ ಮುಲ್ಲನ್‌ಪುರದಲ್ಲಿ ಪ್ರಾರಂಭವಾಗಿರುವ ಅಫ್ಘಾನಿಸ್ತಾನ ( ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತ ಮೊದಲ ದಿನವೇ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ (165 ಎಸೆತಗಳಲ್ಲಿ11 ಬೌಂಡರಿಗಳು ಸೇರಿದಂತೆ 100 ರನ್) ಮತ್ತು ನಾಯಕ ಶುಭ್‌ಮನ್ ಗಿಲ್ (143 ಎಸೆತಗಳಲ್ಲಿ 11 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 103 ರನ್​) ಶತಕ ಸಿಡಿಸಿ ಮಿಂಚಿದರು. 6 ತಿಂಗಳ ಬಳಿಕ ಟೆಸ್ಟ್​​ ಕ್ರಿಕೆಟ್​​ಗೆ ಮರಳಿರುವ ಭಾರತ ತಂಡ ಮೊದಲ ದಿನದ ಆಟದ ಅಂತ್ಯದ ವೇಳೆಗೆ, ಭಾರತ 85 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 368 ರನ್​ಗಳಿಸಿದೆ.

ಪ್ರಸ್ತುತ ನಾಯಕ ಶುಭ್‌ಮನ್ ಗಿಲ್ ಜೊತೆಗೆ ರಿಷಭ್ ಪಂತ್ ಅಜೇಯ 50 ರನ್​(70 ಎಸೆತ 2 ಬೌಂಡರಿಗಳು,3 ಸಿಕ್ಸರ್‌ಗಳು )ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಪಂತ್​​​​​​​ ಹಾಗೂ ಗಿಲ್ 4ನೇ ವಿಕೆಟ್ ಜೊತೆಯಾಟದಲ್ಲಿ ಈಗಾಗಲೇ 121 ರನ್​ಗಳಿಸಿದ್ದಾರೆ.

ಕಳಪೆ ಆರಂಭ

ಟಾಸ್​ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಭಾರತ ದೊಡ್ಡ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 32 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 24 ರನ್​​​​ಗಳಿಸಿ ಮೊಹಮ್ಮದ್ ಸಲೀಮ್ ಶಫಿಗೆ ವಿಕೆಟ್ ಒಪ್ಪಿಸಿದರು.

ಗಿಲ್-ಸಾಯಿ ಶತಕದ ಜೊತೆಯಾಟ

ನಂತರ ಒಂದಾದ ರಾಹುಲ್ ಹಾಗೂ ಸಾಯಿ ಸುದರ್ಶನ್ 2ನೇ ವಿಕೆಟ್ ಜೊತೆಯಾಟದಲ್ಲಿ 139 ರನ್​ಗಳಿಸಿದರು. ಈ ಜೋಡಿ ಎರಡನೇ ಸೆಷನ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಅಫ್ಘಾನಿಸ್ತಾನ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಅವಕಾಶಗಳನ್ನು ಹೊಂದಿದ್ದರೂ, ಅವರು ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು, ರಾಹುಲ್ 86 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಸಾಯಿ ಸುದರ್ಶನ್ 67 ಎಸೆತಗಳಲ್ಲಿ ಅರ್ಧಶತಕ ತಲುಪಿದರು. 104 ಎಸೆತಗಳಲ್ಲಿ 13 ಬೌಂಡರಿ ಸಹಿತ 81 ರನ್​ಗಳಿಸಿ ಶತಕದತ್ತ ಸಾಗುತ್ತಿರುವಾಗ, ಸಲೀಮ್ ಪೆವಿಲಿಯನ್​​ಗಟ್ಟಿದರು.

ಶತಕ ಸಿಡಿಸಿದ ರಾಹುಲ್​-ಗಿಲ್

ನಂತರ ಶುಭಮನ್ ಗಿಲ್ ಕ್ರೀಸ್‌ಗೆ ಬಂದರು. ಮೂರನೇ ಸೆಷನ್‌ನಲ್ಲಿ ಗಿಲ್ ಮತ್ತು ರಾಹುಲ್ ಅಧಿಕಾರಯುತವಾಗಿ ಬ್ಯಾಟಿಂಗ್ ಮಾಡಿದರು. ರಾಹುಲ್ 164 ಎಸೆತಗಳಲ್ಲಿ ಶತಕ ಪೂರೈಸಿದರು. ಜಿಯಾವುರ್ ರೆಹಮಾನ್ ರಾಹುಲ್ ಅವರನ್ನು ಔಟ್ ಮಾಡಿ ಮೂರನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟವನ್ನ ಕೊನೆಗೊಳಿಸಿದರು. ನಂತರ ಗಿಲ್ ರಿಷಭ್ ಪಂತ್ ಜೊತೆಯಾಗಿ ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದರು. ಶುಭ್​ಮನ್ ಗಿಲ್ 138 ಎಸೆತಗಳಲ್ಲಿ ಶತಕ ಗಳಿಸಿದರೆ, ರಿಷಭ್ ಪಂತ್ 70 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅಫ್ಘಾನ್ ಬೌಲರ್‌ಗಳಲ್ಲಿ, ಮೊಹಮ್ಮದ್ ಸಲೀಮ್ (2/67) ಎರಡು ವಿಕೆಟ್‌ಗಳನ್ನು ಕಬಳಿಸಿದರೆ, ಜಿಯಾ-ಉರ್-ರೆಹಮಾನ್ ಒಂದು ವಿಕೆಟ್ ಪಡೆದರು. ಬ್ಯಾಟಿಂಗ್‌ಗೆ ಅನುಕೂಲಕರವಾದ ಪಿಚ್‌ನಿಂದಾಗಿ, ಭಾರತೀಯ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್ ಗಳಿಸಿದರು. 2ನೇ ದಿನದಂದು ಭಾರತ ಬ್ಯಾಟಿಂಗ್ ಮುಂದುವರಿಸುವ ಸಾಧ್ಯತೆಯಿದೆ.

ಅಫ್ಘಾನಿಸ್ತಾನ ಮಹಾ ಎಡವಟ್ಟು

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ, ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಎಚ್ಚರಿಕೆಯ ವಿಧಾನದಿಂದ ಭಾರತೀಯ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ಹೊಸ ಚೆಂಡು ಬೌಲರ್‌ಗಳಿಗೆ ಸಹಾಯ ಮಾಡುತ್ತಿದ್ದಂತೆ ಅವರು ತಾಳ್ಮೆಯಿಂದ ಆಡಿದರು. ಆದರೆ, ಅಫ್ಘಾನಿಸ್ತಾನ ಮಾಡಿದ ದುಬಾರಿ ಎಡವಟ್ಟು ಕೆಎಲ್ ರಾಹುಲ್ ಶತಕಕ್ಕೆ ಕಾರಣವಾಯಿತು. ರಾಹುಲ್ ವೈಯಕ್ತಿಕ ಸ್ಕೋರ್ 16 ರಲ್ಲಿದ್ದಾಗ, ಬ್ಯಾಟ್​​ಗೆ ಎಡ್ಜ್ ಆದ ಚೆಂಡು ವಿಕೆಟ್ ಕೀಪರ್ ಕೈಸೇರಿತು. ಆದರೆ ಅಫ್ಘಾನ್ ಫೀಲ್ಡರ್ಸ್ ಅಪೀಲ್ ಮಾಡಿದರೂ ಅಂಪೈರ್‌ ಔಟ್ ನೀಡಲಿಲ್ಲ. ರಿಪ್ಲೇಗಳು ಚೆಂಡು ಬ್ಯಾಟ್‌ನೊಂದಿಗೆ ಸಂಪರ್ಕಕ್ಕೆ ಬರುವುದನ್ನು ಸ್ಪಷ್ಟವಾಗಿ ತೋರಿಸಿದರೂ, ಅಫ್ಘಾನಿಸ್ತಾನ ರಿವ್ಯೂವ್​​ ತೆಗೆದುಕೊಳ್ಳಲು ಮುಂದಾಗಲಿಲ್ಲ. ರಾಹುಲ್ ಈ ಲೈಫ್‌ಲೈನ್ ಅನ್ನು ಬಳಸಿಕೊಂಡು ಶತಕ ಸಿಡಿಸಿದರು. ಇದು ರಾಹುಲ್​​​​​ಗೆ 12ನೇ ಟೆಸ್ಟ್ ಶತಕವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed