Driverless Metro: ಬೆಂಗಳೂರಿಗೆ ಬಂತು ಹೈಟೆಕ್ ‘ಚಾಲಕರಹಿತ’ ಮೆಟ್ರೋ, ಬ್ಲೂ ಲೈನ್ ಸಂಚಾರಕ್ಕೆ ಕ್ಷಣಗಣನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ)


Last Updated:

ಬೆಂಗಳೂರು ಬ್ಲೂ ಲೈನ್ ಮೆಟ್ರೋಗೆ ಬಿಇಎಂಎಲ್ ನಿರ್ಮಿಸಿದ ಚಾಲಕರಹಿತ ರೈಲು ಬೈಯಪ್ಪನಹಳ್ಳಿಗೆ ಆಗಮಿಸಿದೆ, 2026ರೊಳಗೆ ಬ್ಲೂ ಲೈನ್, ಆಗಸ್ಟ್ 15ರೊಳಗೆ ಪಿಂಕ್ ಲೈನ್ ಭಾಗ ಕಾರ್ಯಾರಂಭ ಗುರಿ

ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ)
ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ)

ಬೆಂಗಳೂರು: ಐಟಿ (IT) ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ (Good News). ಬೆಂಗಳೂರಿನ (Bengaluru) ಜೀವನಾಡಿಯಾದ ಬ್ಲೂ ಲೈನ್ ಮೆಟ್ರೋಗಾಗಿ (Metro) ಬಹುನಿರೀಕ್ಷಿತ ‘ಚಾಲಕರಹಿತ’ (Driverless) ರೈಲು ಮೊದಲ ಬಾರಿಗೆ ನಗರಕ್ಕೆ ಆಗಮಿಸಿದೆ. ಬಿಇಎಂಎಲ್ (BEML) ನಿರ್ಮಿಸಿದ ಈ ಸುಸಜ್ಜಿತ ಆರು ಬೋಗಿಗಳ ರೈಲು, ಗುರುವಾರ ಬೈಯಪ್ಪನಹಳ್ಳಿ ಡಿಪೋ ತಲುಪಿದ್ದು, ಮೆಟ್ರೋ ವಿಸ್ತರಣೆಯ ಕನಸು ನನಸಾಗುವ ಹಂತಕ್ಕೆ ಬಂದಿದೆ.

ಹೈಟೆಕ್ ಫೀಚರ್ಸ್ ಇನ್ಮುಂದೆ ನಿಮ್ಮ ಮೆಟ್ರೋದಲ್ಲಿ

ಈ ರೈಲು ಕೇವಲ ಪ್ರಯಾಣದ ಸಾಧನವಲ್ಲ, ಇದೊಂದು ತಾಂತ್ರಿಕ ವಿಸ್ಮಯ. ಇಲ್ಲಿನ ಪ್ರಮುಖ ವಿಶೇಷತೆಗಳೆಂದರೆ,

ಚಾಲಕರಹಿತ ಕಾರ್ಯಾಚರಣೆ: ಸಿಬಿಟಿಸಿ (CBTC) ಸಿಗ್ನಲಿಂಗ್ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ‘ಗೋಎ-4’ (GoA-4) ಮಾದರಿಯಲ್ಲಿ ರೈಲು ಸಂಚರಿಸಲಿದೆ.

ಸ್ಮಾರ್ಟ್ ಮ್ಯಾಪ್: ಎಲ್‍ಸಿಡಿ ಆಧಾರಿತ ಅನಿಮೇಟೆಡ್ ಮಾರ್ಗ ನಕ್ಷೆಗಳು ನಿಮಗೆ ಎಲ್ಲಿಗೆ ತಲುಪಬೇಕು ಎಂಬ ಸ್ಪಷ್ಟ ಮಾಹಿತಿ ನೀಡಲಿವೆ.

ಸುರಕ್ಷತೆಗೆ ಹೆಚ್ಚಿನ ಒತ್ತು: ಪ್ರಯಾಣಿಕರ ಸುರಕ್ಷತೆಗಾಗಿ ಅತ್ಯಾಧುನಿಕ ಸಿಸ್ಟಮ್‍ಗಳನ್ನು ಅಳವಡಿಸಲಾಗಿದೆ ಎಂದು ಮೆಟ್ರೋರೈಲ್ ಸುದ್ದಿ ವೆಬ್‍ಸೈಟ್ ವರದಿ ಮಾಡಿದೆ.

ಬ್ಲೂ ಮತ್ತು ಪಿಂಕ್ ಲೈನ್ ಅಪ್‍ಡೇಟ್

ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆಆರ್ ಪುರದವರೆಗೆ ಚಲಿಸುವ ಈ ಬ್ಲೂ ಲೈನ್, ಡಿಸೆಂಬರ್ 2026ರ ವೇಳೆಗೆ ಪೂರ್ಣಗೊಳ್ಳಲಿದೆ. ಇದು ಸಾವಿರಾರು ಐಟಿ ಉದ್ಯೋಗಿಗಳ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಇತ್ತ, ಆಗಸ್ಟ್ 15ರ ಒಳಗಾಗಿ ಪಿಂಕ್ ಲೈನ್ (ಕಲೇನ ಅಗ್ರಹಾರ-ತಾವರೆಕೆರೆ) ವಿಭಾಗದಲ್ಲಿ ಮೆಟ್ರೋ ಓಡಿಸಲು BMRCL ಭರ್ಜರಿ ಸಿದ್ಧತೆ ನಡೆಸಿದೆ.
ನಿಮಗೆ ಗೊತ್ತೇ?

ಚಾಲಕರಹಿತ ಸೇವೆ ಶುರುವಾದರೂ, ಆರಂಭಿಕ ದಿನಗಳಲ್ಲಿ ಪ್ರಯಾಣಿಕರ ಭದ್ರತೆ ಮತ್ತು ಆತ್ಮವಿಶ್ವಾಸಕ್ಕಾಗಿ ರೈಲು ನಿರ್ವಾಹಕರು ರೈಲಿನಲ್ಲಿ ಉಪಸ್ಥಿತರಿರುತ್ತಾರೆ. ಐದು ತಿಂಗಳ ಕಾಲ ಕಠಿಣ ಪರೀಕ್ಷೆಗಳನ್ನು ನಡೆಸಿದ ನಂತರವಷ್ಟೇ ಈ ರೈಲುಗಳು ಪ್ರಯಾಣಿಕರನ್ನು ಹೊತ್ತು ಓಡಾಡಲಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed