Last Updated:
Tirumala Srivari Laddu Sales: ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿ ಒಟ್ಟು 1.21 ಕೋಟಿ ಶ್ರೀವಾರಿ ಲಡ್ಡು ಪ್ರಸಾದ ವಿತರಣೆ ಮಾಡಿದೋದಾಗಿ ಟಿಟಿಡಿ ಮಾಹಿತಿ ನೀಡಿದೆ. 2024ರ ಮೇ ತಿಂಗಳಿನಲ್ಲಿ 1.01 ಕೋಟಿ, 2025ರ ಮೇ ತಿಂಗಳಿನಲ್ಲಿ 1.10 ಕೋಟಿ ಲಡ್ಡುಗಳ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಲಡ್ಡು ಪ್ರಸಾದ ವಿತರಣೆ ಸಂಖ್ಯೆ ಹೆಚ್ಚಾಗಿದ್ದು, ಟಿಟಿಡಿ ದಿನಕ್ಕೆ ಸರಾಸರಿ 4.08 ಲಕ್ಷ ಲಡ್ಡುಗಳನ್ನು ತಯಾರಿಸುತ್ತಿದೆ.
ತಿರುಮಲದಲ್ಲಿ ಬೇಸಿಗೆ ರಜೆಯ (Summer Holidays) ಒತ್ತಡ ಮುಂದುವರೆದಿದೆ. ಶ್ರೀವಾರಿ ದರ್ಶನಕ್ಕೆ (Tirumala Srinivasa) ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡಿ ಭಕ್ತಿಯಿಂದ ಲಡ್ಡು ಪ್ರಸಾದವನ್ನು (TTD Laddu) ಸ್ವೀಕರಿಸುತ್ತಾರೆ. ಭಕ್ತರ ಸಂಖ್ಯೆ ಹೆಚ್ಚಳವಾಗುವುದರೊಂದಿಗೆ ಪ್ರಸಾದ ವಿತರಣೆಯ ಸಂಖ್ಯೆಯೂ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಟಿಟಿಡಿ ಲಡ್ಡು ತಯಾರಿಕೆಯನ್ನು ಹೆಚ್ಚಿಸಿತ್ತು. ಭಕ್ತರಿಗೆ (Devotees) ಯಾವುದೇ ಕೊರತೆ ಇಲ್ಲದಂತೆ ಪ್ರಸಾದವನ್ನು ಟಿಟಿಡಿ ವಿತರಣೆ ಮಾಡುತ್ತಿದೆ. ಮೇ ತಿಂಗಳಿನಲ್ಲಿ ಒಟ್ಟು 1,21,35,528 ಕೋಟಿ ಶ್ರೀವಾರಿ ಲಡ್ಡು ಪ್ರಸಾದ ವಿತರಣೆ ಮಾಡಿದೋದಾಗಿ ಟಿಟಿಡಿ ಮಾಹಿತಿ ನೀಡಿದೆ (Tirumala Tirupati Devasthanams). 2024ರ ಮೇ ತಿಂಗಳಿನಲ್ಲಿ 1.01 ಕೋಟಿ, 2025ರ ಮೇ ತಿಂಗಳಿನಲ್ಲಿ 1.10 ಕೋಟಿ ಲಡ್ಡುಗಳ್ನು ವಿತರಣೆ ಮಾಡಲಾಗಿ
ತಿರುಮಲದಲ್ಲಿ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 4 ಲಕ್ಷ ದಿಂದ 4.5 ಲಕ್ಷದ ವರೆಗೂ ಲಡ್ಡುಗಳು ತಯಾರಿ ಮಾಡಲಾಗುತ್ತದೆ. ವಿಶೇಷ ಸಂದರ್ಭದಲ್ಲಿ ಲಡ್ಡು ಉತ್ಪಾದನೆ ಮತ್ತಷ್ಟು ಹೆಚ್ಚಳ ಮಾಡಲಾಗುತ್ತದೆ. ಶ್ರೀವಾರಿ ಲಡ್ಡು ತಯಾರಿಕೆಗೆ ಸುಮಾರು 69 ಟನ್ಗೂ ಹೆಚ್ಚು ಪದಾರ್ಥಗಳನ್ನು ಬಳಕೆ ಮಾಡ್ತಾರೆ. ಇದರಲ್ಲಿ ದಿನಕ್ಕ 32 ಟನ್ ಸಕ್ಕರೆ, 16 ಟನ್ ತುಪ್ಪ, 16 ಟನ್ ಕಡಲೆಹಿಟ್ಟು, 3.5 ಟನ್ ಗೋಡಂಬಿ, 2 ಟನ್ ಒಣದ್ರಾಕ್ಷಿ, 400 ಕೆಜಿ ಏಲಕ್ಕಿ, 800 ಕೆಜಿ ದಪ್ಪ ಸಕ್ಕರೆಯನ್ನು ಬಳಕೆ ಮಾಡ್ತಾರೆ. ಒಂದು ಸಣ್ಣ ಲಡ್ಡು ತಯಾರಿಕೆಗೆ ಸರಾಸರಿಯಾಗಿ 167 ರಿಂದ 170 ಗ್ರಾಂ ಪದಾರ್ಥಗಳನ್ನು ಬಳಕೆ ಮಾಡ್ತಾರೆ. ಇದರಲ್ಲಿ ಸುಮಾರು 78 ಗ್ರಾಂ ಸಕ್ಕರೆ, 39 ಗ್ರಾಂ ಕಡಲೆಹಿಟ್ಟು, 36 ಗ್ರಾಂ ತುಪ್ಪ, 7 ಗ್ರಾಂ ಗೋಡಂಬಿ, 6 ಗ್ರಾಂ ಒಣದ್ರಾಕ್ಷಿ ಇರುತ್ತದೆ.
ವಿಶ್ವವಿಖ್ಯಾತ ಪಡೆದಿರುವ ತಿರುಮಲ ಶ್ರೀವಾರಿ ಲಡ್ಡು ಭಾರತ ಪ್ರಭುತ್ವ ಜಿಯೋಗ್ರಾಫಿಕಲ್ ಇಂಡಿಕೇಷನ್ ಗುರುತಾಗಿ ಪಡೆದುಕೊಂಡಿದೆ. ಶ್ರೀವಾರಿ ಲಡ್ಡು ತಯಾರಿ, ವಿತರಣೆ ಸಂಬಂಧಿಸಿದಂತೆ ಎಫ್ಎಸ್ಎಸ್ಐಎ ಲೈಸೆನ್ಸ್ ಕೂಡ ಟಿಟಿಡಿಗೆ ಲಭ್ಯವಾಗಿದ್ದು, ಶ್ರೀವಾರಿ ಲಡ್ಡು ಗುಣಮಟ್ಟ ಹಾಗೂ ಪರಿಶುದ್ಧತೆ ಮತ್ತಷ್ಟು ಉತ್ತಮಗೊಂಡಿದೆ. ಪ್ರಸಾದ ತಯಾರಿಕೆಗೆ ಬಳಕೆ ಮಾಡುವ ವಸ್ತುಗಳಲ್ಲಿ ಯಾವುದೇ ರೀತಿಯ ಕಲಬೆರಕೆ ಇಲ್ಲದಂತೆ ಖಚಿತಪಡಿಸಿಕೊಳ್ಳಲು ಎರಡು ಅತ್ಯಾಧುನಿಕ ಎಐ ಆಧಾರಿತ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ.
ತಿರುಮಲ ಶ್ರೀವಾರಿ ಪ್ರಸಾದ ತಯಾರಿಕೆಯಲ್ಲಿ 1950 ಮತ್ತು 1951ರಲ್ಲಿ ಟಿಟಿಡಿ ಅನಮೋದಿಸಿರುವ ಸಾಂಪ್ರದಾಯಿಕ ‘ದಿತ್ತಂ’ ಮಾನದಂಡಗಳನ್ನು ಅನುಸರಿಲಾಗುತ್ತಿದೆ. ನಿತ್ಯ, ವಾರ, ಪಕ್ಷ, ಮಾಸ, ನಕ್ಷತ್ರ ಹಾಗೂ ಸಾಲಕತ್ ಹಬ್ಬಗಳಿಗೆ ಅನುಗುಣವಾಗಿ ಸುಮಾರು 20 ಬಗೆ
ಶ್ರೀವಾರಿ ಸೇವೆಯಲ್ಲಿ ಎರಡು ಶಿಫ್ಟ್ ಗಳಲ್ಲಿ 700 ಮಂದಿ ಶ್ರೀವೈಷ್ಣವ ಬ್ರಹ್ಮಾಣರು ಭಕ್ತಿ ಶ್ರದ್ಧೆಯಿಂದ 24 ಗಂಟೆ ಲಡ್ಡು ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದವರಿಗೆ ಟಿಟಿಡಿ ಸಿಬ್ಬಂದಿ, ಮೇಲ್ವಿಚಾರಣೆ ಮಾಡುವವರ ಸಹಕಾರ ನೀಡುತ್ತಾರೆ. ಲಡ್ಡು ತಯಾರಿಯಲ್ಲಿ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ.
ದಿನಕ್ಕೆ 15 ಟನ್ ಕಡಲೆನ್ನು ಹಿಟ್ಟು ಮಾಡುವ ಫ್ಲೋರ್ ಮಿಲ್ ಇದ್ದು, 2,10,00 ಕೆಜಿ ಸಾಮರ್ಥ್ಯದ ತುಪ್ಪ ಶೇಖರಣೆ ಮಾಡುವ ಟ್ಯಾಂಕ್ ಗಳು ಕೂಡ ಇದೆ. 30 ಟನ್ ಸಾಮರ್ಥ್ಯದ ಗ್ಯಾಸ್ ಪ್ಲ್ಯಾಂಟ್, 2 ರಿಮದ 7 ದಿನಗಳಿಗೆ ಆಗುವಂತಹ ಪದಾರ್ಥಗಳು ಯಾವಾಗಲೂ ಉಗ್ರಣದಲ್ಲಿ ಶೇಖರಣೆ ಮಾಡಲಾಗುತ್ತದೆ. ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ಮೂಲಕ ಬೂಂದಿಯನ್ನು ರವಾನೆ ಮಾಡುವ ವ್ಯವಸ್ಥೆ ಲಭ್ಯವಿದೆ. ತಿರುಮಲದ ಲಡ್ಡು ಕಾಂಪ್ಲೇಕ್ಸ್ ನಲ್ಲಿ 56 ಕೌಂಟರ್ ಮೂಲಕ ಮೂರು ಶಿಫ್ಟ್ ಗಳಲ್ಲಿ 24 ಗಂಟೆಗಳ ಕಾಲ ಲಡ್ಡು ವಿತರಣೆ ಮಾಡಲಾಗುತ್ತದೆ. ಹೆಚ್ಚುವರಿ ಲಡ್ಡು ಖರೀದಿ ಮಾಡಬೇಕು ಎಂದರೇ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತದೆ. ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ 8 ಲಕ್ಷ ದಿಂದ 10 ಲಕ್ಷ ಲಡ್ಡು ವರೆಗೂ ಬಫರ್ ಸ್ಟಾಕ್ ಅನ್ನು ಸಿದ್ಧವಾಗಿ ಈಡಲಾಗುತ್ತದೆ.
Tirumala,Chittoor,Andhra Pradesh













