Last Updated:
ರಕ್ಷಿತ್ ಶೆಟ್ರ ಜನ್ಮ ದಿನಕ್ಕೆ ರಿಷಬ್ ಶೆಟ್ರ ಪತ್ನಿ ಪ್ರಗತಿ ಶೆಟ್ಟಿ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಒಂದು ವಿಶೇಷ ಫೋಟೋ ಕೂಡ ಶೇರ್ ಮಾಡಿದ್ದಾರೆ. ಚೆಂದದ ಒಂದು ಸಾಲು ಕೂಡ ಬರೆದಿದ್ದಾರೆ. ಅದೇನು ಅನ್ನೋದು ಮುಂದೆ ಇದೆ ಓದಿ.
ಪ್ರಗತಿ ಶೆಟ್ರು (Pragathi Shetty) ಒಂದು ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ಕಡೆಗೆ ರಿಷಬ್ ಶೆಟ್ರು (Rishab Shetty) ಇದ್ದಾರೆ. ಮತ್ತೊಂದು ಕಡೆಗೆ ರಕ್ಷಿತ್ ಶೆಟ್ಟಿ (Rakshit Shetty) ಇದ್ದಾರೆ. ಮೂವರು ಕಪ್ಪು ಬಣ್ಣದ ಉಡುಪು ತೊಟ್ಟಿದ್ದಾರೆ. ಮೂವರು ಒಂದೇ ರೀತಿನೇ ಕಾಣಿಸುತ್ತಾರೆ. ಈ ಒಂದು ಹಳೆ ಫೋಟೋವನ್ನ ಪ್ರಗತಿ ಶೆಟ್ಟಿ ಈಗ ಹಂಚಿಕೊಂಡಿದ್ದಾರೆ. ಇದಕ್ಕೆ ಕಾರಣವು ಇದೆ. ಅದು ರಕ್ಷಿತ್ ಶೆಟ್ರ ಜನ್ಮ (Rakshit Shetty Birthday) ದಿನವೇ ಆಗಿದೆ. ಜೂನ್-8 ರಂದು ರಕ್ಷಿತ್ ಶೆಟ್ರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಪ್ರಗತಿ ಶೆಟ್ಟಿ ಇಲ್ಲಿ ವಿಶ್ ಕೂಡ ಮಾಡಿದ್ದಾರೆ. ಏನಂತಾ ಶುಭಕೋರಿದ್ದಾರೆ ಅನ್ನುವ ಡಿಟೈಲ್ಸ್ ಇಲ್ಲಿದೆ ಓದಿ.
43 ನೇ ಜನ್ಮ ದಿನ
(ಚಿತ್ರ ಕೃಪೆ: ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಮ್)
ಅದಕ್ಕೂ ಹೆಚ್ಚಾಗಿ “ಅಣ್ಣ” ಅಂತಲೇ ಹೇಳೋದು. ಅದಕ್ಕೇನೆ “ನಿನ್ನ ಕನಸು ನನಸಾಗಲಿ ಚಿಂಟು ಅಣ್ಣ” ಅಂತಲೇ ವಿಶ್ ಮಾಡಿದ್ದಾರೆ.
ಪ್ರಗತಿ ಶೆಟ್ರು ಅಣ್ಣ ರಕ್ಷಿತ್ ಅವರಿಗೆ ಬರೆದ ಸಾಲುಗಳು ಹೀಗಿವೆ; ಈ ಹೊಸ ವರ್ಷ ನಿಮಗಷ್ಟೇ ಅಲ್ಲ, ನಿಮ್ಮ ಎಲ್ಲಾ ಕನಸುಗಳಿಗೂ ದೊಡ್ಡ ಯಶಸ್ಸು ತರಲಿ. ಹುಟ್ಟುಹಬ್ಬದ ಶುಭಾಶಯಗಳು ಚಿಂಟು ಅಣ್ಣ ಅಂತಲೇ ಬರೆದಿದ್ದಾರೆ.
ಈ ಮೂಲಕ ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಗತಿ ಶೆಟ್ಟಿ ಅವರು ಒಂದು ಫೋಟೋ ಕೂಡ ಶೇರ್ ಮಾಡಿದ್ದಾರೆ.
ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಹೀಗೆ ಮೂವರು ಇರೋ ಫೋಟೋ ಇದಾಗಿದೆ. ಇದರಲ್ಲಿ ಮೂವರು ಕಪ್ಪು ಬಣ್ಣದ ಬಟ್ಟೆಯನ್ನೆ ತೊಟ್ಟಿದ್ದಾರೆ.
ಈ ಒಂದು ಫೋಟೋ ಅಷ್ಟೆ ವಿಶೇಷವಾಗಿಯೇ ಇದೆ. ಕಾರಣ, ಇದು ತುಂಬಾನೆ ಹಳೆಯ ಫೋಟೋ ಆಗಿದೆ. ಈ ರೀತಿ ಒಟ್ಟಿಗೆ ಸಿಗುವ ಸಂದರ್ಭ ಕೂಡ ಈತ ಮತ್ತೆ ಬಂದಿಲ್ಲ ಬಿಡಿ. ಸ್ನೇಹಿತರು ತಮ್ಮ ಕೆಲಸದಲ್ಲಿಯೇ ಬ್ಯುಸಿ ಇದ್ದಾರೆ. ಹಾಗಾಗಿಯೇ ಈ ಫೋಟೋ ಮತ್ತಷ್ಟು ವಿಶೇಷವಾಗಿಯೇ ಇದೆ.
ಅಪರೂಪದ ಫೋಟೋ
(ಚಿತ್ರ ಕೃಪೆ: ಪ್ರಗತಿ ಶೆಟ್ಟಿ ಇನ್‌ಸ್ಟಾಗ್ರಾಮ್)
ರಕ್ಷಿತ್ ಶೆಟ್ರು ಈ ವರ್ಷ 43 ನೇ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇವರ ಜನ್ಮ ದಿನ ಆಗೆಲ್ಲ ಜೋರಾಗಿ ಇರ್ತಿತ್ತು. ರಕ್ಷಿತ್ ಶೆಟ್ಟಿ ಮನೆ ಮುಂದೆ ಫ್ಯಾನ್ಸ್ ಎಲ್ಲ ಕಾಯ್ತಾ ಇರೋರು.
ರಕ್ಷಿತ್ ಶೆಟ್ರು ಇತ್ತೀಚಿಗೆ ತಮ್ಮ ತಂದೆ ತಾಯಿಯ 50 ನೇ ವಿವಾಹ ವಾರ್ಷಿಕೋತ್ಸವ ಮಾಡಿದರು. ಇದನ್ನ ರಕ್ಷಿತ್ ಶೆಟ್ಟಿ ಗ್ರ್ಯಾಂಡ್ ಆಗಿಯೇ ಅದನ್ನ ಮಾಡಿದರು.
ಇದಕ್ಕೂ ಮೊದಲು ದೇವರ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ರು ಕಾಣಿಸಿಕೊಂಡ್ರು. ಆ ರೀತಿಯ ಶೆಟ್ರು ತಮ್ಮ ರಿಚರ್ಡ್ ಆ್ಯಂಟನಿ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಪುಣ್ಯಕೋಟಿ ಚಿತ್ರ ಮಾಡ್ಬೇಕು ಅನ್ನೋ ಪ್ಲಾನ್ ಕೂಡ ಇದೆ. ಮಿಡ್ ವೇ ಟು ಮೋಕ್ಷಾ ಚಿತ್ರವೂ ಇದೆ. ಆದರೆ, ಯಾವುದು ಮೊದಲು ಬರುತ್ತದೆ ಅನ್ನುವ ಕುತೂಹಲ ಇದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













