Kichcha Sudeep: ಕಿಚ್ಚನ ವಿರುದ್ಧ 9 ಕೋಟಿ ವಂಚನೆ ಆರೋಪ! ಸುದೀಪ್ ಇಂದು ಕೋರ್ಟ್​ಗೆ ಹಾಜರು | Fraud case against Kichcha Sudeep actor to appear before court today | | ACTPnews

ಕಿಚ್ಚ ಸುದೀಪ್ ಬಿಗ್ ನ್ಯೂಸ್ ಔಟ್; 4 ಸಿನಿಮಾ ಈ ವರ್ಷ ಅನೌನ್ಸ್‌!


Last Updated:

Kichcha Sudeep: ನಟ ಕಿಚ್ಚ ಸುದೀಪ್ ಅವರು ಇಂದು ಕೋರ್ಟ್​ಗೆ ಹಾಜರಾಗಲಿದ್ದಾರೆ. 9 ಕೋಟಿ ವಂಚನೆ ಆರೋಪ, ಮಾನನಷ್ಟ ಕೇಸ್ ಸಂಬಂಧ ಇಂದು ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ.

ಕಿಚ್ಚ ಸುದೀಪ್
ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ಇಂದು ಕೋರ್ಟ್ (Court) ಮುಂದೆ ಹಾಜರಾಗಲಿದ್ದಾರೆ. ನಿರ್ಮಾಪಕ ಕುಮಾರ್, ಸುರೇಶ್ ವಿರುದ್ಧ ಕೇಸ್ ಹಾಕಿದ್ದು (Case) ಇಂದು ಕಿಚ್ಚ ಸುದೀಪ್ ಕಟಕಟೆಯಲ್ಲಿ ನಿಲ್ಲಲಿದ್ದಾರೆ. ಕಿಚ್ಚ ಸುದೀಪ್ ಎಸಿಜೆಎಂ ಕೋರ್ಟ್‌ಗೆ ಇಂದು ಹಾಜರಾಗಲಿದ್ದಾರೆ.

ಸುದೀಪ್ ವಿರುದ್ಧ ₹9 ಕೋಟಿ ವಂಚನೆಯ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ನಟ ಮಾನನಷ್ಟ ಕೇಸ್ ಹಾಕಿದ್ದರು. ಈ ಸಂಬಂಧ ಇಂದು ಸುದೀಪ್ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ.

2023 ರಲ್ಲಿ ಸುದೀಪ್ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ನಿರ್ಮಾಪಕರ ಪರ ವಕೀಲರು ಕಿಚ್ಚನ ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ. ಇಂದು 11 ಗಂಟೆ ವೇಳೆಗೆ ನಟ ಸುದೀಪ್ ಅವರು ಕೋರ್ಟ್‌ಗೆ ಆಗಮಿಸುವ ನಿರೀಕ್ಷೆ ಇದ್ದು, ಕಿಚ್ಚನ ವಿಚಾರಣೆ ನಡೆಯಲಿದೆ.

ಸುದೀಪ್ ಅವರು ಎಂ ಎನ್‌ ಕುಮಾರ್‌ & ಎನ್‌ ಎಂ ಸುರೇಶ್‌ ವಿರುದ್ಧ ಮಾನನಷ್ಟ ಕೇಸ್ ಹಾಕಿದ್ದರು.

ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹಲವಾರು ವರ್ಷಗಳ ಕಠಿಣ ಪರಿಶ್ರಮದಿಂದ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಸೂಪರ್​ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ 2023ರಲ್ಲಿ ಅವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು.

ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ನಟ ಗಂಭೀರವಾದ ವಂಚನೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ನಟ ಸುಮಾರು 9 ಕೋಟಿ ರೂಪಾಯಿ ಸಂಭಾವನೆ ಪಡೆದು ನಿರ್ಮಾಪಕರನ್ನು ವಂಚಿಸಿದ್ದಾರೆ ಎನ್ನಲಾಗಿತ್ತು.

ಕಿಚ್ಚ ಸುದೀಪ್ ಅವರು ಅಗ್ರಿಮೆಂಟ್ ಸೈನ್ ಮಾಡಿ ಸುಮಾರು 9 ಕೋಟಿಯನ್ನು ಪಡೆದಿದ್ದಾರೆ. ಈ ಅಗ್ರಿಮೆಂಟ್ ಸುಮಾರು 8 ವರ್ಷ ಹಿಂದಿನದ್ದು. ಒಪ್ಪಂದಕ್ಕೆ ಸಹಿ ಮಾಡಿದ್ದರೂ ಕಿಚ್ಚ ಇದುವರೆಗೂ ನಿರ್ಮಾಪಕರಿಗೆ ಡೇಟ್ಸ್ ಕೊಟ್ಟಿರಲಿಲ್ಲ ಎಂದು ಆರೋಪಿಸಿದ್ದರು.

ವರದಿ: ಗಂಗಾಧರ ವಾಗಟ, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed