OG Movie: ಸಿನಿಮಾದಲ್ಲಿರುವ ಮಾಂತ್ರಿಕತೆಯೇ ಇದು! ಪವನ್ ಕಲ್ಯಾಣ್ ಸಿನಿಮಾ ನೋಡ್ತಿದ್ದಾಗಲೇ ಮಹಿಳೆಗೆ ಬ್ರೈನ್ ಸರ್ಜರಿ | surgeons perform brain surgery | | ACTPnews

ಪವನ್ ಕಲ್ಯಾಣ್


Last Updated:

OG Movie: ಮಹಿಳೆಯೊಬ್ಬರು ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾ ನೋಡುತ್ತಿದ್ದಾಗಲೇ ಅವರಿಗೆ ಬ್ರೈನ್ ಸರ್ಜರಿ ಮಾಡಿ ಟ್ಯೂಮರ್ ತೆಗೆಯಲಾಗಿದೆ. ಸಿನಿಮಾದ ಮಾಂತ್ರಿಕ ಮೋಡಿ ಬಗ್ಗೆ ಜನ ಈಗ ಚರ್ಚಿಸ್ತಿದ್ದಾರೆ.

ಪವನ್ ಕಲ್ಯಾಣ್
ಪವನ್ ಕಲ್ಯಾಣ್

ಸಿನಿಮಾ (Cinema) ಎನ್ನುವುದು ಒಂದು ರೀತಿಯ ಮ್ಯಾಜಿಕ್​ನಂತೆ. ಅದು ನೋಡುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಎಲ್ಲವನ್ನೂ ಮರೆಸುತ್ತದೆ. ಅದರಲ್ಲೇ ಮುಳುಗಿ ಹೋಗುವಷ್ಟು ನಿಮ್ಮನ್ನು ಪ್ರಭಾವಿಸುತ್ತದೆ. ಸಿನಿಮಾದ ಪ್ರಭಾವವೂ (Movie Effect) ದೊಡ್ಡದು. ಸಿನಿಮಾ ದೃಶ್ಯ ಕಾವ್ಯ, ಹಾಗಾಗಿ ಇದು ನೋಡುಗರಿಗೆ ಬೇಗ ರೀಚ್ ಆಗುತ್ತದೆ.

ಕೆಲವೊಂದಷ್ಟು ಜನರು ತಮಗೆ ಬೇಸರವಾದಾಗ ನೋಡೋಕೆ ಅಂತಲೇ ಮೂವಿಯ ಲಿಸ್ಟ್ ಇಟ್ಟುಕೊಂಡಿರ್ತಾರೆ. ಇನ್ನೂ ಕೆಲವರು ಖುಷಿ, ಬೇಸರ ಏನೇ ಆಗಲಿ ಆ ಒಂದು ಸಿನಿಮಾ ನೋಡಿದ್ರೆ ಸಾಕು ಎನ್ನುವ ಮೆಂಟಾಲಿಟಿಯವರೂ ಇದ್ದಾರೆ.

ಸಿನಿಮಾ ಎಂದರೇನೇ ಹಾಗೆ. ವಿಶೇಷ. ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯಬಲ್ಲ, ಎಲ್ಲವನ್ನೂ ಮರೆಸಬಲ್ಲ, ನಗಿಸಬಲ್ಲ, ಅಳಿಸಬಲ್ಲ ಶಕ್ತಿ ಸಿನಿಮಾಗಿದೆ. ಅದು ಸಿನಿಮಾದ ಪವರ್. ಸಿನಿಮಾ ಎಷ್ಟು ಶಕ್ತಿಶಾಲಿ ಎಂದರೆ ಮಹಿಳೆಯೊಬ್ಬರು ಸಿನಿಮಾ ನೋಡುತ್ತಲೇ ಬ್ರೈನ್ ಸರ್ಜರಿಗೆ ಒಳಗಾಗಿದ್ದಾರೆ. ಸರ್ಜರಿ ಸಕ್ಸಸ್ ಕೂಡಾ ಆಗಿದೆ.

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಒಂದು ಗಮನಾರ್ಹವಾದ ವೈದ್ಯಕೀಯ ಶಸ್ತ್ರಚಿಕಿತ್ಸೆ ನಡೆದಿದೆ. ಈ ಘಟನೆ ಸದ್ಯ ಸಿನಿಮಾ ಪ್ರೇಮಿಗಳು ಮತ್ತು ವೈದ್ಯಕೀಯ ಸಮುದಾಯದ ಗಮನ ಸೆಳೆಯಿತು. ಪ್ರಕಾಶಂ ಜಿಲ್ಲೆಯ ದರ್ಶಿಯ ಕೋಟೇಶ್ವರಮ್ಮ ಎಂಬ ಮಹಿಳೆ ನಟ ಪವನ್ ಕಲ್ಯಾಣ್ ಅವರ OG ಯ ದೃಶ್ಯಗಳನ್ನು ನೋಡುತ್ತಲೇ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿಸಿಕೊಂಡರು.

ವೈದ್ಯರು ಕೋಟೇಶ್ವರಮ್ಮ ಅವರ ಮೆದುಳಿನಲ್ಲಿ ಗೆಡ್ಡೆ ಇದೆ ಎಂದು ಪತ್ತೆ ಮಾಡಿದ್ದರು. ಗೆಡ್ಡೆ ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ಸೂಕ್ಷ್ಮ ಪ್ರದೇಶದಲ್ಲಿ ಇದ್ದ ಕಾರಣ, ವೈದ್ಯಕೀಯ ತಂಡವು ಎಚ್ಚರವಾಗಿರುವ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಲು ನಿರ್ಧರಿಸಿತು.

ಈ ರೀತಿಯ ಸರ್ಜರಿಗಳಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯು ಜಾಗೃತನಾಗಿರುತ್ತಾನೆ. ಇದು ವೈದ್ಯರು ಗೆಡ್ಡೆಯನ್ನು ತೆಗೆದುಹಾಕುವಾಗ ರೋಗಿಯ ಮಾತು, ಚಲನೆ ಮತ್ತು ಇತರ ಮೆದುಳಿನ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

ಕೋಟೇಶ್ವರಮ್ಮ ಸರ್ಜರಿ ಸಮಯದಲ್ಲಿ ಶಾಂತವಾಗಿ ಮತ್ತು ಆರಾಮವಾಗಿರುವಂತೆ ನೋಡಿಕೊಳ್ಳಲು ವೈದ್ಯರು ಅವರ ನೆಚ್ಚಿನ ನಟ ಪವನ್ ಕಲ್ಯಾಣ್ ನಟಿಸಿದ OG ಸಿನಿಮಾದ ದೃಶ್ಯಗಳನ್ನು ತೋರಿಸಿದ್ದಾರೆ. ಪವನ್ ಕಲ್ಯಾಣ್ ಅವರ ಅಭಿಮಾನಿಯಾಗಿ, ಅವರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಿನಿಮಾದ ದೃಶ್ಯಗಳನ್ನು ವೀಕ್ಷಿಸಿದರು. ಶಸ್ತ್ರಚಿಕಿತ್ಸೆಯ ಉದ್ದಕ್ಕೂ ವಿಶ್ರಾಂತಿ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed