Namma Metro: ಮುಂಬೈ ಹಿಂದಿಕ್ಕಲು ಸಜ್ಜಾದ ಬೆಂಗಳೂರು, ಆಗಸ್ಟ್ 15ರಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಓಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ಪಿಂಕ್ ಲೈನ್ ಮೆಟ್ರೋ


Last Updated:

BMRCL ಪಿಂಕ್ ಲೈನ್ ಗೆ RDSO ವೇಗ ಪ್ರಮಾಣಪತ್ರ, 90 ಕಿ.ಮೀ ವೇಗಕ್ಕೆ ಅನುಮತಿ, ಆಗಸ್ಟ್ 15ರೊಳಗೆ ಕಲೇನ ಅಗ್ರಹಾರ-ತಾವರೆಕೆರೆ ಮಾರ್ಗ ಆರಂಭ, ಬೆಂಗಳೂರು ಮೆಟ್ರೋ ಉದ್ದ 103.6 ಕಿ.ಮೀ.

ಬೆಂಗಳೂರು ಪಿಂಕ್ ಲೈನ್ ಮೆಟ್ರೋ
ಬೆಂಗಳೂರು ಪಿಂಕ್ ಲೈನ್ ಮೆಟ್ರೋ

ಬೆಂಗಳೂರು: ದಶಕಗಳ ಕಾಯುವಿಕೆ ಅಂತ್ಯವಾಗಲಿದೆಯೇ? ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ? ಹೌದು, ಬೆಂಗಳೂರು  ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನೀಡಿರುವ ಇತ್ತೀಚಿನ ಅಪ್‍ಡೇಟ್ ಮೆಟ್ರೋ (Metro) ಪ್ರಯಾಣಿಕರಲ್ಲಿ (Passengers) ಹೊಸ ಭರವಸೆಯನ್ನು ಮೂಡಿಸಿದೆ. ಬಹುನಿರೀಕ್ಷಿತ ಪಿಂಕ್ ಲೈನ್ ರೈಲುಗಳಿಗೆ (Train) ಇದೀಗ ಅಧಿಕೃತ ವೇಗ ಪ್ರಮಾಣಪತ್ರ ಸಿಕ್ಕಿದೆ.

ಅಡೆತಡೆಗಳಿಲ್ಲದ ವೇಗ

ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (RDSO) ಈ ಮಹತ್ವದ ವೇಗ ಪ್ರಮಾಣಪತ್ರವನ್ನು ಜೂನ್ 4 ರಂದು ಬಿಡುಗಡೆ ಮಾಡಿದೆ. ಅಚ್ಚರಿಯ ವಿಷಯವೆಂದರೆ, ಯಾವುದೇ ವೇಗ ನಿಬರ್ಂಧಗಳಿಲ್ಲದೆ, ಗಂಟೆಗೆ 90 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲು ಅನುಮೋದನೆ ದೊರೆತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ಕಠಿಣ ಪರೀಕ್ಷೆಗಳು ಯಶಸ್ವಿಯಾಗಿದ್ದು, ಈಗ ಬಿಎಂಆರ್ ಸಿಎಲ್ ಅಧಿಕಾರಿಗಳು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಅಂತಿಮ ಒಪ್ಪಿಗೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಆಗಸ್ಟ್ 15ರ ಗಡುವು

ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಸ್ವಾತಂತ್ರ್ಯ ದಿನಾಚರಣೆಗೆ ಬನ್ನೇರುಘಟ್ಟ ರಸ್ತೆಯ ನಿವಾಸಿಗಳಿಗೆ ಮೆಟ್ರೋ ರೈಲು ಉಡುಗೊರೆಯಾಗಿ ಸಿಗಲಿದೆ. ಸುಮಾರು 7.5 ಕಿ.ಮೀ ಉದ್ದದ ಈ ಎತ್ತರದ ಮಾರ್ಗವು ಕಲೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಆರು ನಿಲ್ದಾಣಗಳನ್ನು ಒಳಗೊಂಡಿರಲಿದೆ. ವಿಶೇಷವಾಗಿ ಜಯದೇವ ಆಸ್ಪತ್ರೆಯ ಇಂಟಚೇರ್ಂಜ್ ನಿಲ್ದಾಣವು ಪ್ರಯಾಣಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.
ಮುಂಬೈಗೆ ಸೆಡ್ಡು ಹೊಡೆದ ಬೆಂಗಳೂರು

ಈ ಮಾರ್ಗವು ಕಾರ್ಯಾರಂಭ ಮಾಡುತ್ತಿದ್ದಂತೆ, ಬೆಂಗಳೂರಿನ ಮೆಟ್ರೋ ಜಾಲದ ಒಟ್ಟು ಉದ್ದವು 103.6 ಕಿ.ಮೀ ತಲುಪಲಿದೆ. ಇದರೊಂದಿಗೆ ಮುಂಬೈ ಮೆಟ್ರೋ ಜಾಲವನ್ನು (101.43 ಕಿ.ಮೀ) ಹಿಂದಿಕ್ಕಿ, ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿ ಬೆಂಗಳೂರು ಹೊರಹೊಮ್ಮಲಿದೆ.

ಸದ್ಯಕ್ಕೆ ಸಿಗ್ನಲಿಂಗ್ ವ್ಯವಸ್ಥೆಯ ಸುರಕ್ಷತಾ ಮೌಲ್ಯಮಾಪನ (ISA) ಪ್ರಕ್ರಿಯೆ ನಡೆಯುತ್ತಿದೆ. ಜೊಡೋವಾ ಟೆಕ್ನಾಲಜೀಸ್ ಸಂಸ್ಥೆ ಇದರ ಜವಾಬ್ದಾರಿ ಹೊತ್ತಿದ್ದು, ಜುಲೈ ಅಂತ್ಯದ ವೇಳೆಗೆ ಎಲ್ಲಾ ಶಾಸನಬದ್ಧ ಸುರಕ್ಷತಾ ತಪಾಸಣೆಗಳು ಮುಕ್ತಾಯವಾಗಲಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed