Mango Pachcha: ಅಂದು ಹುಚ್ಚ, ಇಂದು ಕಿಚ್ಚ! ಮ್ಯಾಂಗೋ ಪಚ್ಚ ನೋಡಿ ಜನ ಏನಂದ್ರು? | | ACTPnews

ಅಂದು ಹುಚ್ಚ, ಇಂದು ಕಿಚ್ಚ; ಜನರ ಸಖತ್ ರೆಸ್ಪಾನ್ಸ್.!


Last Updated:

ಮ್ಯಾಂಗೋ ಪಚ್ಚ ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಬಂದಿದೆ. ಅಂದು ಹುಚ್ಚು,ಇಂದು ಪಚ್ಚ ಅಂತಲೂ ಹೇಳಿದ್ದಾರೆ. ಮೊದಲ ಚಿತ್ರ ಅನಿಸೋದೇ ಇಲ್ಲ. ಆ ರೀತಿ ಸಂಚಿತ್ ನಟಿಸಿದ್ದಾರೆ ಅಂತಲೂ ಸಿನಿಮಾ ನೋಡಿದವರು ಹೇಳಿದ್ದಾರೆ. ಸುದೀಪ್ ಫ್ಯಾಮಿಲಿ ಕೂಡ ಈ ಚಿತ್ರ ನೋಡಿದ್ದಾರೆ. ಇವರೆಲ್ಲರ ರಿಯಾಕ್ಷನ್‌ನ ಒಂದು ಸ್ಟೋರಿ ಇಲ್ಲಿದೆ ಓದಿ.

ಅಂದು ಹುಚ್ಚ, ಇಂದು ಕಿಚ್ಚ; ಜನರ ಸಖತ್ ರೆಸ್ಪಾನ್ಸ್.!
ಅಂದು ಹುಚ್ಚ, ಇಂದು ಕಿಚ್ಚ; ಜನರ ಸಖತ್ ರೆಸ್ಪಾನ್ಸ್.!

ಮ್ಯಾಂಗೋ ಪಚ್ಚ (Mango Pachcha) ದೊಡ್ಡ ಸಿನಿಮಾ ಏನೂ ಅಲ್ಲ. 1.25 ನಿಮಿಷದ ಚಿತ್ರ ಇದು. ಇದನ್ನ ಮೊದಲ ದಿನ ಅನೇಕರು ನೋಡಿದ್ದಾರೆ. ಕಿಚ್ಚನ ಮಗ ಅಂತ ಸುದೀಪ್ ಫ್ಯಾನ್ಸ್ (Sudeepa Fans) ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ ಸಂತೋಷ್ ಥಿಯೇಟರ್ (Santhosh Theater) ಅಲ್ಲಿ ದೊಡ್ಡ ಹಬ್ಬದ ವಾತಾವರಣ ಇದೆ ಬಿಡಿ. ಕಿಚ್ಚನ ಫ್ಯಾಮಿಲಿಯವರು ಬಂದು ಚಿತ್ರ ವೀಕ್ಷಿಸಿದ್ದಾರೆ. ಸುದೀಪ್-ಪ್ರಿಯಾ (Sudeep-Priya) ಅಕ್ಕ-ಪಕ್ಕ ಕುಳಿತು ಚಿತ್ರ ವೀಕ್ಷಿಸಿದ್ದಾರೆ. ಈ ಚಿತ್ರ ನೋಡಿದ ಮನೆಯವರು ಮತ್ತು ಫ್ಯಾನ್ಸ್ ಏನೆಲ್ಲ ಹೇಳಿದ್ರು ಅನ್ನುವ ಒಂದು ರಿವ್ಯೂ ಇಲ್ಲಿದೆ ಓದಿ.

ಅಂದು ಹುಚ್ಚ ಇಂದು ಪಚ್ಚ

ಕಿಚ್ಚ ಸುದೀಪ್ ಅಭಿನಯದ ಹುಚ್ಚ ಚಿತ್ರ 2001 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ಸೂಪರ್ ಹಿಟ್ ಕೂಡ ಆಯಿತು. ಸುದೀಪ್ ಅವರಿಗೆ ಒಳ್ಳೆ ಹೆಸರು ತಂದುಕೊಡ್ತು.

sanchith sanjeev mango pachch movie first day public review

ಸಂಚಿತ್ ಫಸ್ಟ್ ಸಿನಿಮಾ ಅನಿಸಲ್ಲ

ಇದೀಗ 2026 ರಲ್ಲಿ ಪಚ್ಚ ಬಂದಿದೆ. ಅಂದು ಹುಚ್ಚ ಇಂದು ಪಚ್ಚ ಅಂತಲೂ ಚಿತ್ರ ನೋಡಿದವ್ರು ಹೇಳಿದ್ದಾರೆ. ಚಿತ್ರದ ಪ್ರತಿಯೊಂದು ವಿಷಯವು ಫ್ಯಾನ್ಸ್‌ಗೆ ಇಷ್ಟ ಆಗಿದೆ. ಇದನ್ನ ನೋಡಿ ಖುಷಿ ಪಟ್ಟಿದ್ದಾರೆ.

ಜೂನಿಯರ್ ಕಿಚ್ಚ ಸುದೀಪ್

ಮ್ಯಾಂಗೋ ಪಚ್ಚ ಚಿತ್ರ ನೋಡಿದವರು ಒಳ್ಳೆ ಮಾತುಗಳನ್ನೆ ಆಡಿದ್ದಾರೆ. ಚಿತ್ರದ ಸುಮಾರು ಕಡೆಗೆ ಸಂಚಿತ್ ಸಂಜೀವ್ ಪಕ್ಕಾ ಸುದೀಪ್ ತರವೇ ಕಾಣಿಸುತ್ತಾರೆ.

ಇನ್ನು ಇಡೀ ಚಿತ್ರದ ಕತೆ, ಚಿತ್ರಕತೆ ಕೂಡ ಚೆನ್ನಾಗಿದೆ. ಒಂದು ವಿಷಯ ಇಟ್ಟುಕೊಂಡು ಒಳ್ಳೆ ಸಿನಿಮಾ ಮಾಡಿದ್ದಾರೆ ಅನ್ನುವ ಅಭಿಪ್ರಾಯ ಕೂಡ ಬಂದಿವೆ.

ಸಂಚಿತ್ ಫಸ್ಟ್ ಸಿನಿಮಾ ಅನಿಸಲ್ಲ

ಸಂಚಿತ್ ಸಂಜೀವ್ ಮೊದಲ ಸಿನಿಮಾ ಅನಿಸೋದಿಲ್ಲ. ಅಷ್ಟು ಅದ್ಭುತವಾಗಿಯೇ ನಟಿಸಿದ್ದಾರೆ. ಇವರಿಗೆ ಅತ್ಯುತ್ತಮ ಡೆಬ್ಯೂ ಅವಾರ್ಡ್ ಬರ್ತದೆ ಅನ್ನುವ ಅಭಿಪ್ರಾಯವನ್ನು ಚಿತ್ರ ನೋಡಿದವರೊಬ್ಬರು ಹೇಳಿ ಹೋಗಿದ್ದಾರೆ.

ಮ್ಯಾಂಗೋ ಪಚ್ಚ ಚಿತ್ರವನ್ನ ಮನೆಯವರು ನೋಡಿದ್ದಾರೆ. ಸುದೀಪ್ ಅವರ ಅಕ್ಕ ಸಂಚಿತ್ ತಾಯಿ ಈ ಸಿನಿಮಾ ನೋಡಿದ್ದಾರೆ. ಪ್ರಿಯಾ ಸುದೀಪ್ ಹಾಗೂ ಕಿಚ್ಚ ಸುದೀಪ್ ಸಹ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.

sanchith sanjeev mango pachch movie first day public review

ನಾನು ಹೆತ್ತಿರಬಹುದು…
ಸಂಚಿತ್ ಅಕ್ಕ ಏನಂದರು

ಸಂಚಿತ್ ಸಂಜೀವ್ ಅವರ ಅಕ್ಕ ಕೂಡ ಈ ಚಿತ್ರ ನೋಡಿದ್ದಾರೆ. ನೋಡಿ ತುಂಬಾನೆ ಖುಷಿಪಟ್ಟಿದ್ದಾರೆ. ಸಾನ್ವಿ ಸುದೀಪ್ ಹಾಡಿರೋ ಅರಗಿಣಿ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರದ ಕೊನೆಯ ದೃಶ್ಯಗಳಲ್ಲಿ ಬರುವ ಸಂಚಿತ್ ಸಂಜೀವ್ ಅಭಿನಯ ಇವರಿಗೆ ತುಂಬಾನೆ ಇಷ್ಟ ಆಗಿದೆ.

ಸಂಚಿತ್ ಸಂಜೀವ್ ಅವರನ್ನ ನನ್ನ ಮಗ ಅಂತ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ. ಚಿತ್ರ ಪ್ರಚಾರದ ಸಮಯದಲ್ಲಿ ಬಂದ ್ಪಪ್ರಶ್ನೆಗಳಿಗೂ ಇದೇ ಆನ್ಸರ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಂಚಿತ್ ತಾಯಿ ಏನಂದ್ರು ಗೊತ್ತಾ? ಮುಂದೆ ಇದೆ ಓದಿ.

ನಾನು ಹೆತ್ತಿರಬಹುದು…

ಸಂಚಿತ್ ಸಂಜೀವ್ ಅವರ ಮೊದಲ ಚಿತ್ರವನ್ನ ಪ್ರಿಯಾ ಸುದೀಪ್ ಸ್ವಂತ ಮಗನ ಚಿತ್ರದ ರೀತಿನೇ ಪ್ರಚಾರ ಮಾಡಿದ್ದಾರೆ. ಎಲ್ಲೆಡೆ ಇವರು ಸಂಚಿತ್ ತಮ್ಮ ಮಗ ಅಂತಲೂ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪತ್ರಕರ್ತರು ಸಂಚಿತ್ ತಾಯಿಗೆ ಪ್ರಶ್ನೆ ಕೂಡ ಕೇಳಿದರು. ಸಂಚಿತ್ ಸಂಜೀವ್ ನನ್ನ ನಾನು ಹೆತ್ತಿರಬಹುದು. ಆದರೆ, ಸಂಚಿತ್ ಅವರನ್ನ ಮಗನ ರೀತಿನೇ ಸುದೀಪ್ ಮತ್ತು ಪ್ರಿಯಾ ಬೆಳೆಸಿದ್ದಾರೆ. ಹಾಗೆ ಸಂಚಿತ್ ನಮ್ಮೆಲ್ಲರ ಮಗ ಅಂತಲೂ ಸಂಚಿತ್ ತಾಯಿ ಹೇಳಿದ್ದಾರೆ.

ಒಟ್ಟಾರೆ, ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ಚಿತ್ರ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಪಡೆದಿದೆ. ಸುದೀಪ್ ಫ್ಯಾನ್ಸ್, ಸಿನಿ ಪ್ರೇಮಿಗಳು ಮತ್ತು ಮನೆಯ ಮಂದಿ ಈ ಚಿತ್ರವನ್ನ ಕಂಡು ಕೊಂಡಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports