Bihar: ಹೊಗೆಯಿಂದ ತುಂಬಿದ್ದ ಐಸಿಯುನಲ್ಲಿ ‘ಲೈಫ್‌ಸೇವರ್’ ಆದ 95ರ ವೃದ್ಧೆ, ಅಜ್ಜಿಯ ಧೈರ್ಯಕ್ಕೆ ಎಲ್ಲರ ಮೆಚ್ಚುಗೆ- | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

95 ವರ್ಷದ ರಾಧಾ ದೇವಿ


Last Updated:

ಬೆಳಗಿನ ಜಾವ 3:30 ರ ಸುಮಾರಿಗೆ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ ಹೊಗೆ ಹರಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಕೆಲವೇ ನಿಮಿಷಗಳಲ್ಲಿ, ಇಡೀ ವಾರ್ಡ್ ಹೊಗೆಯಿಂದ ತುಂಬಿತ್ತು, ರೋಗಿಗಳೆಲ್ಲಾ ಭಯಭೀತರಾಗಿದ್ದರು. ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಪ್ರತಿಕ್ರಿಯಿಸುವ ಮೊದಲೇ ಪರಿಸ್ಥಿತಿ ಹದಗೆಟ್ಟಿದ್ದು, ಈ ಘಟನೆಯಲ್ಲಿ ಐದಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ.

95 ವರ್ಷದ ರಾಧಾ ದೇವಿ
95 ವರ್ಷದ ರಾಧಾ ದೇವಿ

ಪಾಟ್ನಾ(ಜೂ.04): ಬಿಹಾರದ ಮುಜಫರ್‌ಪುರದ ಪ್ರಸಾದ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದ ಮಧ್ಯೆ ಎಲ್ಲರನ್ನೂ ಅಚ್ಚರಿಗೀಡು ಮಾಡಿದ ಒಂದು ಕಥೆ ಹೊರಬಿದ್ದಿದೆ. 95 ವರ್ಷದ ರೋಗಿ ರಾಧಾ ದೇವಿ ಪ್ರದರ್ಶಿಸಿದ ಸಮಯ ಪ್ರಜ್ಞೆ ಮತ್ತು ಧೈರ್ಯ ಅನೇಕ ರೋಗಿಗಳ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಬೆಳಗಿನ ಜಾವ 3:30 ರ ಸುಮಾರಿಗೆ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ ಹೊಗೆ ಹರಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಕೆಲವೇ ನಿಮಿಷಗಳಲ್ಲಿ, ಇಡೀ ವಾರ್ಡ್ ಹೊಗೆಯಿಂದ ತುಂಬಿತ್ತು, ರೋಗಿಗಳೆಲ್ಲಾ ಭಯಭೀತರಾಗಿದ್ದರು. ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಪ್ರತಿಕ್ರಿಯಿಸುವ ಮೊದಲೇ ಪರಿಸ್ಥಿತಿ ಹದಗೆಟ್ಟಿದ್ದು, ಈ ಘಟನೆಯಲ್ಲಿ ಐದಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ.

95 ವರ್ಷದ ರಾಧಾ ದೇವಿಯ ಧೈರ್ಯ

ಐಸಿಯುಗೆ ದಾಖಲಾಗಿರುವ 95 ವರ್ಷದ ರಾಧಾ ದೇವಿ, ಹೊಗೆಯನ್ನು ನೋಡಿದ ತಕ್ಷಣ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ. “ಕೋಣೆಯಲ್ಲಿ ಹೊಗೆ ತುಂಬಿರುವುದನ್ನು ನಾನು ನೋಡಿದೆ. ನಾನು ತಕ್ಷಣ ನನ್ನ ಆಕ್ಸಿಜನ್ ಮಾಸ್ಕ್ ತೆಗೆದು ಹೊರಬರುವಲ್ಲಿ ಯಶಸ್ವಿಯಾಗಿದ್ದೇನೆ” ಎಂದು ಅವರು ಹೇಳಿದರು. ತಪ್ಪಿಸಿಕೊಂಡ ನಂತರ, ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಗಾರ್ಡ್‌ಗಳಿಗೆ ತಿಳಿಸುವಲ್ಲಿ ಅವರು ಸಮಯ ವ್ಯರ್ಥ ಮಾಡಲಿಲ್ಲ.

ಸಮಯೋಚಿತ ಮಾಹಿತಿಯು ಅನೇಕ ಜೀವಗಳನ್ನು ಉಳಿಸಿತು

ರಾಧಾ ದೇವಿಯಿಂದ ಈ ಮಾಹಿತಿ ಬಂದ ತಕ್ಷಣ, ಆಸ್ಪತ್ರೆ ಆಡಳಿತವು ಕಾರ್ಯಪ್ರವೃತ್ತವಾಯಿತು. ಸಿಬ್ಬಂದಿ ಇತರ ರೋಗಿಗಳನ್ನು ಐಸಿಯುನಿಂದ ಸ್ಥಳಾಂತರಿಸಲು ಪ್ರಾರಂಭಿಸಿದರು. ಈ ಮಾಹಿತಿಯು ಕೆಲವು ನಿಮಿಷಗಳಷ್ಟು ವಿಳಂಬವಾಗಿದ್ದರೆ, ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತಿತ್ತು. ರಾಧಾ ದೇವಿಯ ಮನಸ್ಸಿನ ಉಪಸ್ಥಿತಿಯು ಅನೇಕ ರೋಗಿಗಳ ಜೀವಗಳನ್ನು ಉಳಿಸಿತು ಎಂಬುವುದು ಸ್ಥಳೀಯರು ಮಾತಾಗಿದೆ.

ತಾನು ಖುದ್ದು ಸ್ವತಃ ನೋವಿನಲ್ಲಿದ್ದರೂ, ಭಯಪಡದೇ ಇತರರ ಜೀವ ಕಾಪಾಡಲು ಶ್ರಮ

ಮುಖ್ಯವಾಗಿ, 95 ನೇ ವಯಸ್ಸಿನಲ್ಲಿ ಐಸಿಯುಗೆ ದಾಖಲಾಗಿದ್ದರೂ, ರಾಧಾ ದೇವಿ ಭಯಭೀತರಾಗುವ ಬದಲು ಧೈರ್ಯವನ್ನು ತೋರಿಸಿದರು ಮತ್ತು ಇತರರಿಗೆ ಸಹಾಯ ಮಾಡಿದರು. ಜನರ ಪ್ರಕಾರ, ಅಂತಹ ಸಂದರ್ಭಗಳಲ್ಲಿ ಅವರ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಅಸಾಧಾರಣವಾಗಿದೆ.

ರಾಧಾ ದೇವಿ ಬಗ್ಗೆ ವ್ಯಾಪಕವಾಗಿ ಚರ್ಚೆ

ಮುಜಫರ್ಪುರದಲ್ಲಿ ನಡೆದ ಈ ಘಟನೆ ಆಸ್ಪತ್ರೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದರೆ, 95 ವರ್ಷದ ರಾಧಾ ದೇವಿಯ ಧೈರ್ಯ ಎಲ್ಲರಿಗೂ ಮಾದರಿಯಾಗಿದೆ. ಸಾಮಾಜಿಕ ಮಾಧ್ಯಮದಿಂದ ಸ್ಥಳೀಯರವರೆಗೆ, ಎಲ್ಲರೂ ಅವರ ಸಮಯ ಪ್ರಜ್ಞೆyನ್ನು ಕೊಂಡಾಡುತ್ತಿದ್ದಾರೆ,



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed