Actress Ramya: ರಾಜ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿ? ಡಿಕೆಶಿ ಸಿಎಂ ಆಗ್ತಿದ್ದಂತೆ ಶುರುವಾಗುತ್ತಾ ಪದ್ಮಾವತಿ ಪಾಲಿಟಿಕ್ಸ್? | | ACTPnews

News18


Last Updated:

ನಟಿ ರಮ್ಯಾ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರ ಪದಗ್ರಹಣದ ಸಮಾರಂಭದಲ್ಲಿ ಸ್ಯಾಂಡಲ್​ವುಡ್ ನಟಿ ರಮ್ಯಾ ಮಾತಾಡಿದ್ದಾರೆ.

News18
News18

ಬೆಂಗಳೂರು (ಜೂ.03): ಲೋಕಭವನದ ಗಾಜಿನ ಮನೆಯಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಿದ್ದಾರೆ.​ ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಅನೇಕರ ಗಣ್ಯರು ಆಗಮಿಸಿದ್ರು. ಡಿಕೆ ಶಿವಕುಮಾರ್​ ಕುಟುಂಬಕ್ಕೆ ಆಪ್ತರಾಗಿರುವ ನಟಿ ರಮ್ಯಾ (Actress Ramya) ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಡಿಕೆ ಶಿವಕುಮಾರ್ ಅವರಿಗೆ ಶುಭಕೋರಿದ್ದಾರೆ. ಇದೇ ವೇಳೆ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ರಮ್ಯಾ ಮಾತಾಡಿದ್ದಾರೆ.

ಲೋಕಭವನದಲ್ಲಿ ಡಿಕೆಶಿಗೆ ರಮ್ಯಾ ವಿಶ್

ಸ್ಯಾಂಡಲ್​ವುಡ್ ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರು ಡಿಕೆ ಶಿವಕುಮಾರ್ ಕುಟುಂಬಕ್ಕೂ ಆತ್ಮೀಯರಾಗಿದ್ದಾರೆ. ಹೀಗಾಗಿ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ರಮ್ಯಾ ಅವರು, ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಿರೋದು ಖುಷಿ ತಂದಿದೆ ಎಂದಿದ್ದಾರೆ.

‘ಸಿಎಂ ಆಸೆ ಹೇಳಿಕೊಂಡಿದ್ರು ಡಿಕೆಶಿ’

ಡಿಕೆ ಶಿವಕುಮಾರ್​ ಅವರು ನಮ್ಮ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಇದೀಗ ಮುಖ್ಯಮಂತ್ರಿ ಆಗಿರೋದು ಸಂತಸದ ವಿಚಾರ ಎಂದಿದ್ರು.  ನಿಮ್ಮ ಬಳಿಯೂ ಡಿಕೆಶಿ ಸಿಎಂ ಆಗ್ಬೇಕು ಅನ್ನೋ ಬಗ್ಗೆ ಹೇಳಿಕೊಂಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಖಂಡಿತಾ ಹಲವು ಬಾರಿ ಹೇಳಿಕೊಂಡಿದ್ದರು ಎಂದಿದ್ದಾರೆ.

ಮತ್ತೆ ರಾಜಕೀಯಕ್ಕೆ ರಮ್ಯಾ?

ನಟಿ ರಮ್ಯಾ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಚರ್ಚೆ ಜೋರಾಗಿದೆ. ರಾಜ್ಯಸಭೆಗೂ ನಿಮ್ಮ ಹೆಸರು ಕೇಳಿಬರ್ತಿದೆ, ಈ ಬಗ್ಗೆ ಏನ್​​ ಹೇಳ್ತಿರಾ ಎಂಬ ಪ್ರಶ್ನೆಗೆ ನ್ಯೂಸ್​18 ಕನ್ನಡಕ್ಕೆ ಉತ್ತರ ಕೊಟ್ಟ ನಟಿ ರಮ್ಯಾ, ಇಲ್ಲ.. ಇಲ್ಲ.. ಎಲ್ಲದ್ದಕ್ಕೂ ಟೈಮ್ ಕೂಡಿ ಬರ್ಬೇಕು. ಸದ್ಯಕ್ಕಿಲ್ಲ ಎಂದಿದ್ದಾರೆ.

ರಮ್ಯಾ ರಾಜಕೀಯ ಹಾದಿ

ಖ್ಯಾತ ನಟಿ ರಮ್ಯಾ ಅವರ ರಾಜಕೀಯ ಹಾದಿಯು ಯುವ ಕಾಂಗ್ರೆಸ್‌ನಿಂದ ಸಂಸತ್‌ ಭವನದವರೆಗೆ ಸಾಗಿದ ಒಂದು ಕುತೂಹಲಕಾರಿ ಪಯಣವಾಗಿದೆ. ಅವರು 2011ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ರು.

ಲೋಕಸಭೆ ಸಂಸದೆಯಾಗಿ ಆಯ್ಕೆ (2013): ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಜಯಗಳಿಸಿದರು. ಇದರೊಂದಿಗೆ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಸಂಸದೆಯಾದ್ರು ನಟಿ ರಮ್ಯಾ.

2014ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋಲು ಕಂಡರು.

ಸದ್ಯ ರಾಜಕೀಯದಿಂದ ರಮ್ಯಾ ದೂರ!

ಸದ್ಯ ನಟಿ ರಮ್ಯಾ ಸಕ್ರಿಯ ರಾಜಕೀಯದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರೂ, ಆಗಾಗ್ಗೆ ಸರ್ಕಾರದ ಆರ್ಥಿಕತೆ ಮತ್ತು ನೀತಿಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿರುತ್ತಾರೆ.

(ವರದಿ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed