Rasikh Salam: ದಿಗ್ಗಜರ ನಡುವೆ ಎಲೆಮರೆಯ ಕಾಯಿಯಾದ ಯುವ ವೇಗಿ! ಸೈಲೆಂಟ್ ಆಗಿಯೇ ಆರ್​​ಸಿಬಿ ಗೆಲುವಿನ ಹೀರೋ ಆದ್ರೂ ಕಣಿವೆ ನಾಡಿನ ಕಣ್ಮಣಿ | ಕ್ರೀಡಾ ಸುದ್ದಿ | ACTPnews

ರಸಿಕ್ ಸಲಾಮ್ ದಾರ್


Last Updated:

ಆರ್‌ಸಿಬಿಯು ಚಾಂಪಿಯನ್‌ ಆಗಲು ಶಿಸ್ತು ಬದ್ಧವಾದ ಬೌಲಿಂಗ್‌ ಕಾರಣ. ಸೀನಿಯರ್‌ ಪ್ರೋಸ್‌ಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಜೋಶ್ ಹೇಜರ್‌ಹುಡ್‌ ಬೌಲಿಂಗ್‌ ಚಾರ್ಜ್‌ ತೆಗೆದುಕೊಂಡಿದ್ದರೂ ಕೂಡ ನಿಶಬ್ಧವಾಗಿ ಬೌಲಿಂಗ್‌ ಮಾಡಿದ ಕೃನಾಲ್‌ ಪಾಂಡ್ಯ ಮತ್ತು ರಸಿಕ್‌ ಸಲಾಂ ಧರ್‌ ಇವರಿಬ್ಬರು ಆರ್‌ಸಿಬಿಯೂ 2ನೇ ಕಪ್‌ ಗೆಲ್ಲುವ ಅಭಿಯಾನದಲ್ಲಿ ನಿರ್ಣಾಯಕ ಕೊಡುಗೆಯನ್ನು ನೀಡಿದ್ದಾರೆ.

ರಸಿಕ್ ಸಲಾಮ್ ದಾರ್
ರಸಿಕ್ ಸಲಾಮ್ ದಾರ್

ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಎಷ್ಟು ಮುಖ್ಯವೋ ಅದೇ ರೀತಿ ಬೌಲರ್‌ಗಳು ಅಷ್ಟೇ ಮುಖ್ಯ. ಒಂದುವೇಳೆ 2026 ರ ಐಪಿಎಲ್‌ನಲ್ಲಿ ಬೌಲರ್ಸ್‌ಗಳು ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡದೇ ಇದ್ದಿದ್ದರೆ ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಸತತ 2ನೇ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸುತ್ತಿರಲಿಲ್ಲ. ಆರ್‌ಸಿಬಿಯು ಚಾಂಪಿಯನ್‌ ಆಗಲು ಶಿಸ್ತುಬದ್ಧವಾದ ಬೌಲಿಂಗ್‌ ಕಾರಣ. ಸೀನಿಯರ್‌ ಪ್ರೋಸ್‌ಗಳಾದ ಭುವನೇಶ್ವರ್‌ ಕುಮಾರ್‌ (Bhuvneshwar Kumar) ಮತ್ತು ಜೋಶ್ ಹೇಜಲ್​​ವುಡ್‌ ಬೌಲಿಂಗ್‌ ಚಾರ್ಜ್‌ ತೆಗೆದುಕೊಂಡಿದ್ದರೂ ಕೂಡ ನಿಶಬ್ಧವಾಗಿ ಬೌಲಿಂಗ್‌ ಮಾಡಿದ ಕೃನಾಲ್‌ ಪಾಂಡ್ಯ ಮತ್ತು ರಸಿಕ್‌ ಸಲಾಂ ಧರ್‌ ಇವರಿಬ್ಬರು ಆರ್‌ಸಿಬಿಯೂ 2ನೇ ಕಪ್‌ ಗೆಲ್ಲುವ ಅಭಿಯಾನದಲ್ಲಿ ನಿರ್ಣಾಯಕ ಕೊಡುಗೆಯನ್ನು ನೀಡಿದ್ದಾರೆ.

ಆರ್‌ಸಿಬಿ ಬೌಲಿಂಗ್‌ ಪಡೆಯಲ್ಲಿ ರಸಿಕ್‌ ಕಡಿಮೆ ಅನುಭವವನ್ನು ಹೊಂದಿದ್ದರೂ ಕೂಡ, ಇವರು 2019 ರಿಂದ ಆಡಿರುವ ಸೀಸನ್‌ಗಳಲ್ಲಿ ಇದು ಅತ್ಯುತ್ತಮ ಸೀಸನ್‌ ಆಗಿ ಮೂಡಿಬಂದಿದೆ. ಈ ಸೀಸನ್‌ನಲ್ಲಿ 19 ವಿಕೆಟ್‌ ಕಬಳಿಸಿ 9.45 ಎಕಾನಮಿ ರೇಟ್‌ ಮೂಲಕ ಹೇಜ಼ರ್‌ಹುಡ್‌ ಅವರನ್ನು ಹಿಂದಿಕ್ಕಿ ಆರ್‌ಸಿಬಿ ಪರ ಈ ಸೀಸನ್‌ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಆಟಗಾರರಾಗಿದ್ದಾರೆ. ರಸಿಕ್‌ ಮೇಲೆ ನಾಯಕ ರಜತ್‌ ಪಾಟಿದಾರ್‌ ಇಟ್ಟಿದ್ದ ನಂಬಿಕೆ ಹಾಗೂ ಇವರಿಗೆ ನೀಡಿರುವ ಸ್ಪಷ್ಟತೆ ಮತ್ತು ಜವಾಬ್ದಾರಿಯೂ ರಸಿಕ್‌ಗೆ ಈ ಮಟ್ಟಿಗೆ ಬೆಳೆಯಲು ಮುಖ್ಯಕಾರಣವಾಗಿದೆ.

ಯಶ್‌ ದಯಾಳ್‌ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ರಸಿಕ್‌

ಕಳೆದ ಬಾರಿ ಆರ್‌ಸಿಬಿ ಚಾಂಪಿಯನ್‌ ಆಗಲು ಮುಖ್ಯ ಪಾತ್ರವಹಿಸಿದ ಯಶ್‌ ದಯಾಳ್‌ರವರು ತಮ್ಮ ವೈಯಕ್ತಿಕ ಕಾರಣಗಳಿಂದ ಈ ಆವೃತ್ತಿಯನ್ನು ಮಿಸ್‌ ಮಾಡಿಕೊಂಡಿದ್ದರ ಪರಿಣಾಮವಾಗಿ, ಇವರ ಬದಲಿ ಆಟಗಾರನಾಗಿ ಮೊದಲೆರಡು ಪಂದ್ಯದಲ್ಲಿ ಅಭಿನಂದನ್‌ ಸಿಂಗ್‌ರವರನ್ನು ತಂಡದಲ್ಲಿ ಆಡಿಸಲಾಯಿತು. ಇವರು 3 ಪಂದ್ಯಗಳಲ್ಲಿ ಹೆಚ್ಚು ಪರಿಣಾಮವನ್ನು ಬೀರದಿದ್ದರಿಂದ ರಸಿಕ್‌ ಸಲಾಂಗೆ ತಂಡದ ಪ್ಲೇಯಿಂಗ್‌ 11ರ ಬಳಗದಲ್ಲಿ ಸ್ಥಾನ ನೀಡಲಾಯಿತು.

ಭಾನುವಾರ ನಡೆದ ಗುಜರಾತ್‌ ಟೈಟನ್ಸ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ರಸಿಕ್‌ ದಾರ್‌ ಗುಜರಾತ್‌ನ ಬ್ಯಾಟರ್‌ಗಳಿಗೆ ಕಂಟಕವಾಗಿ ಪರಿಣಮಿಸಿದರು. ಈ ನಿರ್ಣಾಯಕ ಪಂದ್ಯದಲ್ಲಿ ರಸಿಕ್‌ ಸಲಾಂ ನಿಶಾಂತ್‌ ಸಿಂಧು, ರಾಹುಲ್‌ ತೆವಾಟಿಯ ಮತ್ತು ರಶೀದ್‌ ಖಾನ್‌ರವರ ವಿಕೆಟ್‌ ಕಿತ್ತರು. ಇದರಿಂದ ಫೈನಲ್‌ನಲ್ಲಿ 3 ವಿಕೆಟ್‌ ಪಡೆದುಕೊಳ್ಳುವುದರ ಮೂಲಕ ಈ ಆವೃತ್ತಿಯಲ್ಲಿ 19 ವಿಕೆಟ್‌ ಪಡೆದು ಮಿಂಚಿದರು.

ಉತ್ತಮ ಸ್ಲೋವರ್ ಮತ್ತು ಯಾರ್ಕರ್‌ ಕಲೆಗೆ ಬೆಲೆ

“ಈ ಬಾರಿಯ ಲೀಗ್‌ ಹಂತದಲ್ಲಿ ನಾವು ಮೊದಲಿಗೆ ಅಭಿನಂದನ್‌ ಸಿಂಗ್‌ಗೆ ಅವಕಾಶವನ್ನು ನೀಡಿದ್ದೆವು, ಅವರು ಕೂಡ ಸಾಧ್ಯವಾದಷ್ಟು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ನಂತರ ರಸಿಕ್‌ ಅವರ ಕಡೆ ನೋಡಿದಾಗ ಅವರಲ್ಲಿ ಉತ್ತಮವಾದ ಸ್ಲೋವರ್‌ವನ್‌, ಬ್ಯಾಕ್‌ ಆಫ್‌ ದಿ ಹ್ಯಾಂಡ್‌ ಮತ್ತು ಮುಖ್ಯವಾಗಿ ಯಾರ್ಕರ್‌ ಹಾಕುವ ಕ್ಷಮತೆಯನ್ನು ಕಂಡು ಭುವಿ ಮತ್ತು ಹೇಜಲ್​​ವುಡ್​​‌ಗೆ ಹೆಚ್ಚು ಸಹಾಯವಾಗಬಹುದೆಂದು ತಿಳಿದು ತಂಡದಲ್ಲಿ ಸ್ಥಾನ ನೀಡಿದೆವು” ಎಂದು ನಾಯಕ ರಜತ್‌ ಪಾಟಿದಾರ್‌ ಹೇಳಿದ್ದಾರೆ.

2 ವರ್ಷದ ನಿರ್ಬಂಧ ನಂತರ ಉತ್ತಮ ಕಮ್‌ಬ್ಯಾಕ್‌

7 ವರ್ಷದ ಹಿಂದೆ ಅಂದರೆ 2019ರಲ್ಲಿ ಬಿಸಿಸಿಐಗೆ ನಕಲಿ ಜನ್ಮ ಪ್ರಮಾಣ ಪತ್ರವನ್ನು ನೀಡಿದಕ್ಕಾಗಿ 2 ವರ್ಷ ರಸಿಕ್‌ ಅವರನ್ನು ಬ್ಯಾನ್‌ ಮಾಡಲಾಗಿತ್ತು. ಇದರಿಂದಾಗಿ ಅಂಡರ್‌- 19 ವಿಶ್ವಕಪ್‌ನಿಂದ ಹೊರ ಉಳಿಯಬೇಕಾಗಿ ಬಂತು. ನಿರ್ಬಂಧ ಮುಗಿದ ನಂತರ ಮುಂಬೈಗೆ ತೆರಳಿ ಅಲ್ಲಿಂದ ಕಮ್‌ಬ್ಯಾಕ್‌ ಮಾಡಲು ಸಿದ್ಧರಾದರು. ನಂತರ 2025ರ ಐಪಿಎಲ್‌ ಮೆಗಾ ಆಕ್ಷನ್‌ನಲ್ಲಿ ಆರ್‌ಸಿಬಿ ತಂಡವು 6 ಕೋಟಿ ಕೊಟ್ಟು ಖರೀದಿಸಿತ್ತು. ಈ ಖರೀದಿಯೇ ಇವರ ಜೀವನಕ್ಕೆ ಮುಖ್ಯ ತಿರುವನ್ನು ನೀಡಿತು.

3 ಮಾದರಿಯ ದೇಶಿಯ ಕ್ರಿಕೆಟ್‌ನಲ್ಲಿ ಸ್ಥಾನ

2025ರ ಐಪಿಎಲ್‌ ಆವೃತ್ತಿ ಮುಗಿದ ನಂತರ ಬರೋಡ ಸೀನಿಯರ್‌ ತಂಡಕ್ಕೆ ಫಾಸ್ಟ್‌ ಬೌಲರ್‌ನ ಅಗತ್ಯವಿದ್ದರಿಂದ ತಂಡದ ನಾಯಕ ಕೃನಾಲ್‌ ಪಾಂಡ್ಯಾ ರಸಿಕ್‌ರ ಹೆಸರನ್ನು ಸೂಚಿಸಿದ್ದರಿಂದ ಅವರಿಗೆ ತಂಡದಲ್ಲಿ ಸ್ಥಾನವನ್ನು ನೀಡಲಾಯಿತು. ಅವರ ಕ್ಷಮತೆ ಮತ್ತು ಬೌಲಿಂಗ್‌ ಉತ್ತಮವಾಗಿದ್ದರಿಂದ ಅವರಿಗೆ 3 ಮಾದರಿಯ ದೇಶಿಯ ಕ್ರಿಕೆಟ್‌ನಲ್ಲಿ ಸ್ಥಾನ ನೀಡಲಾಯಿತು ಎಂದು ಬರೋಡಾ ತಂಡದ ಹೆಡ್‌ಕೋಚ್‌ ಮುಕುಂದ್‌ ಪಾರ್ಮರ್‌ ನ್ಯೂಸ್‌ 18 ಕ್ರಿಕೆಟ್‌ನೆಕ್ಸ್ಟ್‌ ಕಾರ್ಯಕ್ರಮದಲ್ಲಿ ಫೋನ್‌ ಕರೆಯಲ್ಲಿ ಹೇಳಿದ್ದಾರೆ.

ಪಾರ್ಮರ್‌ ಅವರ ಪ್ರಕಾರ ರಸಿಕ್‌ ಧಾರ್​​ ಭಾರತದ ಫ್ಲಾಟ್ ಪಿಚ್‌ಗೆ ಹೊಂದಿಕೊಂಡು ಬೌಲಿಂಗ್‌ ಮಾಡುತ್ತಾರೆ. ಈ ಬಾರಿ ಇವರು ರೆಡ್‌ ಬಾಲ್‌ ಕ್ರಿಕೆಟ್‌ ಆಡಿರುವುದರಿಂದ ಸ್ಟಂಪ್‌ ಟು ಸ್ಟಂಪ್‌, ಟಾರ್ಗೆಟ್‌ ಬೌಲಿಂಗ್‌, ಯಾರ್ಕರ್‌ ಮತ್ತು ಉತ್ತಮ ಏರಿಯಾದಲ್ಲಿ ಬೌಲಿಂಗ್‌ ಮಾಡಲು ಬಹಳ ಸಹಾಯ ಮಾಡಿದೆ ಎಂದಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Rasikh Salam: ದಿಗ್ಗಜರ ನಡುವೆ ಎಲೆಮರೆಯ ಕಾಯಿಯಾದ ಯುವ ವೇಗಿ! ಸೈಲೆಂಟ್ ಆಗಿಯೇ ಆರ್​​ಸಿಬಿ ಗೆಲುವಿನ ಹೀರೋ ಆದ್ರೂ ಕಣಿವೆ ನಾಡಿನ ಕಣ್ಮಣಿ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports