The End of Oak Street Movie: ಡೈನೋಸಾರ್‌ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ! ಟ್ರೈಲರ್ ರಣ ರೋಚಕ | | ACTPnews

ಡೈನೋಸಾರ್‌ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ; ಟ್ರೈಲರ್ ರಣ ರೋಚಕ!


Last Updated:

ದಿ ಎಂಡ್ ಆಫ್ ಓಕ್ ಸ್ಟ್ರೀಟ್ ಸಿನಿಮಾದ ಟ್ರೈಲರ್ ರೋಚಕವಾಗಿದೆ. ನೋಡ್ತಾ ಹೋದಂತೆ ಶಾಕ್ ಮೇಲೆ ಶಾಕ್ ಸಿಗುತ್ತದೆ. ಆದರೆ, ಇದು ದೆವ್ವದ ಸಿನಿಮಾ ಅಲ್ಲ. ಇಲ್ಲಿ ಡೈನೋಸಾರ್‌ಗಳಿವೆ. ಇವುಗಳ ಅಟ್ಟಹಾಸದ ಕತೆ ಇಲ್ಲಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಡೈನೋಸಾರ್‌ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ; ಟ್ರೈಲರ್ ರಣ ರೋಚಕ!
ಡೈನೋಸಾರ್‌ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ; ಟ್ರೈಲರ್ ರಣ ರೋಚಕ!

ಇಡೀ ಓಕ್ ಸ್ಟ್ರೀಟೇ (Oak Street) ಮಂಗಮಾಯ ಆಗಿದೆ. ಕಾಸ್ಮಿಕ್ ಘಟನೆಯಿಂದ (Cosmic Event) ಮನೆಗಳು ಅದೆಲ್ಲೋ ಶಿಫ್ಟ್ ಆಗಿವೆ. ಆದರೆ, ಮನೆಯಲ್ಲಿ ಇರುವ ಮಂದಿಗೆ, ಮಕ್ಕಳಿಗೆ ಶಾಕ್ ಮೇಲೆ ಶಾಕ್ ಆಗುತ್ತದೆ. ಅಷ್ಟರಲ್ಲಿಯೇ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಸಾಕು ನಾಯಿ ಬೊಗಳುತ್ತದೆ. ವಿಚಿತ್ರ ಸದ್ದುಗಳು ಕೇಳುತ್ತಿವೆ. ಆದರೆ, ಸತ್ಯ ಗೊತ್ತಾದಾಗ ಎಲ್ಲರೂ ಬೆಚ್ಚಿ ಬೀಳ್ತಾರೆ. ಮಂಗಗಳ ಹಾವಳಿಯಂತೆ ಇಲ್ಲಿ ಡೈನೋಸಾರ್‌ಗಳು (Dinosaurs) ಹಾವಳಿ ಮಾಡುತ್ತವೆ. ಮುಂದೇನಾಯಗುತ್ತದೆ. ಈ ವಿಷಯ ಇನ್ನು ಗೊತ್ತಾಲ್ಲ. ಇದನ್ನ ತಿಳಿಯೋಕೆ ಚಿತ್ರವನ್ನ ನೋಡ್ಬೇಕು. ಆದರೆ, “ದಿ ಎಂಡ್ ಆಫ್ ಓಕ್ ಸ್ಟ್ರೀಟ್” ಟ್ರೈಲರ್ (The End of Oak Street Trailer) ಇಷ್ಟು ಮಾತ್ರ ಸತ್ಯವನ್ನ ಈಗ ಹೇಳಿದೆ. ಇದರ ಸುತ್ತದ ಇನ್ನಷ್ಟು ವಿಷಯ ಮುಂದೆ ಇದೆ ಓದಿ…

ಇಡೀ ಓಕ್ ಸ್ಟ್ರೀಟೇ ಮಾಯಾ

“ದಿ ಎಂಡ್ ಆಫ್ ಓಕ್ ಸ್ಟ್ರೀಟ್” ಚಿತ್ರದ ಟ್ರೈರಲ್ ಈ ಎಲ್ಲ ಅನುಭವ ಕೊಡುತ್ತದೆ. ಓಣಿಗೆ ಓಣಿನೇ ಮಾಯವಾಗಿರುತ್ತದೆ. ಕಾಸ್ಮಿಕ್ ಘಟನೆಯೊಂದರಿಂದಲೇ ಇದೆಲ್ಲ ಆಗಿರುತ್ತವೆ.

Hollywood The End of Oak Street Movie Trailer Release

ರೋಚಕ ಟ್ರೈಲರ್ ರಿಲೀಸ್
ಆದರೆ, ಇಡೀ ಸ್ಟ್ರೀಟ್ ಡೈನೋಸಾರ್ ವಾಸಿಸುವ ಜಾಗದಲ್ಲಿಯೇ ಶಿಫ್ಟ್ ಆಗಿರುತ್ತವೆ. ಇದರಿಂದ ಓಕ್ ಸ್ಟ್ರೀಟ್ ಅಲ್ಲಿ ಡೈನೋಸರ್ ಹಾವಳಿ ಹೆಚ್ಚಾಗುತ್ತದೆ. ಇದರಿಂದ ಜನ ಶಾಕ್ ಮೇಲೆ ಶಾಕ್ ಆಗುತ್ತಾರೆ.
1980ರ ಕಾಲಘಟ್ಟದ ಕಥೆ

ಈ ಚಿತ್ರದ ಕತೆ 1980 ರ ಕಾಲಘಟ್ಟದಲ್ಲಿ ನಡೆಯುತ್ತದೆ. ಕಾಸ್ಮಿಕ್ ಘಟನೆಯೊಂದರಿಂದ ಏನೇನೋ ಆಗುತ್ತದೆ. ಡೈನೋಸಾರ್‌ಗಳಿಂದ ಓಕ್ ಸ್ಟ್ರೀಟ್ ಜನ ತತ್ತರಿಸಿ ಹೋಗುತ್ತಾರೆ.

ಆದರೆ, ಒಂದು ಫ್ಯಾಮಿಲಿ ಈ ಸಮಸ್ಯೆಯಿಂದ ಹೊರಗೆ ಬರೋಕೆ ಹೋರಾಡುತ್ತದೆ. ಡೈನೋಸಾರ್‌ಗಳನ್ನ ಎದುರಿಸುತ್ತದೆ. ಮನೆಯ ಹೆಣ್ಣುಮಗಳು ಬಂದೂಕು ಹಿಡಿದು ಮನೆಯಿಂದ ಹೊರಗೆ ಬರ್ತಾಳೆ. ಹೀಗೆ ಇವರ ಹೋರಾಟ ಮುಂದೆ ಸಾಗುತ್ತದೆ. ಆದರೆ,ಇವರು ಬದುಕುಳಿಯುತ್ತಾರಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

ಆಗಸ್ಟ್ ಅಲ್ಲಿ ರಿಲೀಸ್

ದಿ ಎಂಡ್ ಆಫ್ ಓಕ್ ಸ್ಟ್ರೀಟ್ ಚಿತ್ರ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಭಾರತದಲ್ಲಿ ಈ ಚಿತ್ರ  ಆಗಸ್ಟ್ ಅಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಭಾರತದ ಇತರ ಭಾಷೆಯಲ್ಲೂ ಡಬ್ ಆಗುತ್ತಿದೆ.

Hollywood The End of Oak Street Movie Trailer Release

ಆಗಸ್ಟ್ ಅಲ್ಲಿ ರಿಲೀಸ್

ಕನ್ನಡ, ತೆಲುಗು, ತಮಿಳು ಹೀಗೆ ದಕ್ಷಿಣದ ಹಲವು ಭಾಷೆಯಲ್ಲಿ ಇದು ತೆರೆ ಕಾಣುತ್ತಿದೆ. ಈ ಚಿತ್ರವನ್ನ ಡೇವಿಡ್ ರಾಬರ್ಟ್ ಮಿಚೆಲ್ ಡೈರೆಕ್ಷನ್ ಮಾಡಿದ್ದಾರೆ.

ಇವರ ಈ ಹಿಂದಿನ ಸಿನಿಮಾ

ಡೇವಿಡ್ ರಾಬರ್ಟ್ ಮಿಚೆಲ್ ಈ ಮೊದಲು ಇಟ್ ಫಾಲೋಸ್ ಅನ್ನುವ ಹಾರರ್ ಚಿತ್ರ ಮಾಡಿದ್ದರು. ಇದೀಗ ದಿ ಎಂಡ್ ಆಫ್ ಓಕ್ ಸ್ಟ್ರೀಟ್ ಸಿನಿಮಾ ಮಾಡಿದ್ದಾರೆ.

ರೋಚಕ ಟ್ರೈಲರ್ ರಿಲೀಸ್

ಈ ಚಿತ್ರದ ಟ್ರೈಲರ್ ರೋಚಕವಾಗಿದೆ. ಆರಂಭದಲ್ಲಿ ಎಲ್ಲ ಇಂಗ್ಲಿಷ್ ಸಿನಿಮಾಗಳ ತರವೇ ಶುರು ಆಗುತ್ತದೆ. ಆದರೆ, ಯಾವಾಗ ಡೈನೋಸಾರ್ ಬರ್ತವೋ ಆಗಲೇ ಇದರ ಅಸಲಿ ರೋಚಕತೆ ಶುರು ಆಗುತ್ತದೆ.

ಆದರೆ, ಇದು ಡೈನೋಸಾರ್ ಸಿನಿಮಾ ಅಲ್ಲ. ಇಲ್ಲಿ ಓಕ್ ಸ್ಟ್ರೀಟ್ ಇದೆ. ಕಾಸ್ಮಿಕ್ ಘಟನೆಯಿಂದಲೇ ಇದು ಮಾಯವಾಗಿರುತ್ತದೆ. ಹಾಗೆ ಮಾಯವಾದ್ಮೇಲೆ ಏನೆಲ್ಲ ಆಗುತ್ತದೆ ಅನ್ನೋದರ ಚಿತ್ರಣ ಈ ಟ್ರೈಲರ್ ಅಲ್ಲಿದೆ. ಅಷ್ಟೆ ರೋಚಕವಾಗಿಯೂ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed