Last Updated:
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಮುಲ್ಲನ್‌ಪುರದಲ್ಲಿ ನಡೆಯಲಿದೆ. ಈ ಟೆಸ್ಟ್‌ಗೆ ದೇಶೀಯ ಕ್ರಿಕೆಟ್ಬಲ್ಲಿ ಸಂಚಲನ ಮೂಡಿಸಿದ ಬೌಲರ್ ಅನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಐಪಿಎಲ್ (IPL) 2026 ರ ಹೈವೋಲ್ಟೇಜ್ (High voltage) ಟೂರ್ನಿ (Tournament) ಮುಕ್ತಾಯವಾಗಿದೆ. ಸತತ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ (Champion) ಆಗಿದೆ. ಈಗ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಸರಣಿ (Series) ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯ ಆರಂಭಕ್ಕೂ ಮುನ್ನ, ಬಿಸಿಸಿಐ (BCCI) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಜೂನ್ (June) 6 ರಿಂದ ಮುಲ್ಲನ್‌ಪುರ (Mullanpur) ದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ (Test) ಪಂದ್ಯಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರ (Jammu and Kashmir) ದ ವೇಗದ ಬೌಲರ್ ಆಕಿಬ್ ನಬಿ (Aqib Nabi) ಭಾರತ ತಂಡವನ್ನು ಸೇರಿಕೊಂಡಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಘೋಷಿಸಿದಾಗ, ಅಕಿಬ್ ನಬಿ ಅವರನ್ನು ತಂಡದಲ್ಲಿ ಸೇರಿಸಿರಲಿಲ್ಲ. ಆದರೆ, ಈಗ ನಬಿ ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಲಾಗಿದೆ. 29 ವರ್ಷದ ಮಧ್ಯಮ ವೇಗಿ ಅಕಿಬ್ ನಬಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಬ್ಯಾಕಪ್ ಆಟಗಾರನನ್ನಾಗಿ ಸೇರಿಸಲಾಗಿದೆ.
2025-26 ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಆಕಿಬ್ ನಬಿ ತಮ್ಮ ಬೌಲಿಂಗ್‌ನಲ್ಲಿ ಮಿಂಚಿದ್ದರು. ಕಳೆದ ರಣಜಿ ಟ್ರೋಫಿ ಆವೃತ್ತಿಯಲ್ಲಿ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆಕಿಬ್ ನಬಿ 10 ಪಂದ್ಯಗಳಲ್ಲಿ 2.65 ರ ಎಕಾನಮಿ ದರದಲ್ಲಿ60 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಸಂದರ್ಭಗಳಲ್ಲಿ ನಬಿ 7 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂಲಕ ನಬಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮೊದಲ ಬಾರಿಗೆ ರಣಜಿ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಜಮ್ಮು ಮತ್ತು ಕಾಶ್ಮೀರ ಸೋಲಿಸಿ ಟ್ರೋಫಿ ಗೆದ್ದಿತ್ತು.
ರಣಜಿ ಟ್ರೋಫಿಯಲ್ಲಿನ ಅದ್ಭುತ ಪ್ರದರ್ಶನದಿಂದಾಗಿ, ಆಕಿಬ್ ನಬಿ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಗಣನೀಯ ಮೊತ್ತವನ್ನು ಗಳಿಸಿದರು. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 8.40 ಕೋಟಿ ರೂ. ಗೆ ಖರೀದಿಸಿತು. ಆದರೆ, ನಬಿಯ ಚೊಚ್ಚಲ ಐಪಿಎಲ್ ಸೀಸನ್ ವಿಶೇಷವಾಗಿರಲಿಲ್ಲ.
ಆಕಿಬ್ ನಬಿ ಅವರು ಐಪಿಎಲ್ 2026 ರಲ್ಲಿ ಐದು ಪಂದ್ಯಗಳನ್ನು ಆಡಿದರು. 11.46 ರ ಎಕಾನಮಿ ದರದಲ್ಲಿ ರನ್ಗಳನ್ನು ಬಿಟ್ಟುಕೊಟ್ಟು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಆದಾಗ್ಯೂ, ನಬಿ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ರೆಡ್ ಬಾಲ್ನೊಂದಿಗೆ ಮನ್ನಣೆ ಗಳಿಸಿದ್ದಾರೆ. ಅವರು ಶೀಘ್ರದಲ್ಲೇ ಭಾರತಕ್ಕಾಗಿ ತಮ್ಮ ಟೆಸ್ಟ್ ಚೊಚ್ಚಲ ಪ್ರವೇಶ ಮಾಡಬಹುದು.
ಭಾರತದ ಟೆಸ್ಟ್ ತಂಡವು ಪ್ರಸ್ತುತ ಶುಭಮನ್ ಗಿಲ್ ನಾಯಕತ್ವದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ತಂಡದಲ್ಲಿ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ್ ದುಬೆ ಮತ್ತು ಧ್ರುವ ಜುರೆಲ್ ಅವರಂತಹ ಆಟಗಾರರು ಇದ್ದಾರೆ.













