ದಿ ರೈಸ್ ಆಫಸ್ ಅಶೋಕ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದ ಕಳೆದ ಫೆಬ್ರವರಿ ತಿಂಗಳ 27 ರಂದು ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿಯೇ ಇದು ತೆರೆ ಕಂಡಿತ್ತು.
ದಿ ರೈಸ್ ಆಫ್ ಅಶೋಕ
ದಿ ರೈಸ್ ಆಫ್ ಅಶೋಕ ಚಿತ್ರವನ್ನ ವಿನೋದ್ ವಿ. ಧೋಂಡಾಲೆ ಡೈರೆಕ್ಷನ್ ಮಾಡಿದ್ದಾರೆ. ಆದರೆ ಈ ಚಿತ್ರದ ಅರ್ಧ ಕೆಲಸ ಆಗಿತ್ತು. ಆಗಲೇ ಇವರು ನಿಧನರಾದರು.
ಕನ್ನಡದ ದಿ ರೈಸ್ ಆಫ್ ಅಶೋಕ ಚಿತ್ರ ಕನ್ನಡದಲ್ಲೂ ಸ್ಟ್ರೀಮಿಂಗ್ ಆಗುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲು ಇದು ಪ್ರಸಾರ ಆಗುತ್ತಿದೆ.
ಮುಂಬರುವ ಜೂನ್-5 ರಂದು ಇದು ಸ್ಟ್ರೀಮಿಂಗ್ ಆಗುತ್ತಿದೆ. ಈ ವಿಷಯವನ್ನ ಸನ್ನೆಕ್ಸ್ಟ್ ತನ್ನ ಇನ್ಸ್ಟಾಗ್ರಾಮ್ನ ಪೇಜ್ ಅಲ್ಲಿಯೇ ಹಂಚಿಕೊಂಡಿದೆ. ಹಾಗೆ ಈ ಸಿನಿಮಾ ಒಟಿಟಿಯಲ್ಲಿ ಯಾವ ರೀತಿ ಕಮಾಲ್ ಮಾಡುತ್ತದೆ ಅನ್ನುವ ಕುತೂಹಲವೂ ಹೆಚ್ಚಾಗಿದೆ.
ಸನ್ನೆಕ್ಸ್ಟ್ ಅಲ್ಲಿ ಸ್ಟ್ರೀಮಿಂಗ್
(ಚಿತ್ರ ಕೃಪೆ: ಸನ್ನೆಕ್ಸ್ಟ್ ಇನ್ಸ್ಟಾಗ್ರಾಮ್)
ದಿ ರೈಸ್ ಆಫ್ ಅಶೋಕ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ. ಸತೀಶ್ ನೀನಾಸಂ ಈ ಚಿತ್ರದಲ್ಲಿ ಅಶೋಕ ಅನ್ನುವ ಪಾತ್ರ ಮಾಡಿದ್ದಾರೆ.
ಸಪ್ತಮಿ ಗೌಡ ಇಲ್ಲಿ ಅಂಬಿಕಾ ಅನ್ನುವ ಪಾತ್ರ ಮಾಡಿದ್ದಾರೆ. ಸತೀಶ್ ನೀನಾಸಂ ಅವರಿಗೆ ಜೋಡಿ ಆಗಿದ್ದಾರೆ. ಚಿತ್ರದಲ್ಲಿ ಬಿ.ಸುರೇಶ್ ನಟಿಸಿದ್ದಾರೆ. ರವಿಶಂಕರ್ ಅಭಿನಯಿಸಿದ್ದಾರೆ. ಸಂಪತ್ ಮೈತ್ರೇಯ, ಗೋಪಾಲಕೃಷ್ಣ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
ಸತೀಶ್ ನೀನಾಸಂ ಚಿತ್ರಗಳಲ್ಲಿ ದಿ ರೈಸ್ ಆಫ್ ಅಶೋಕ ಬಂದು ಹೋಗಿದೆ. ಇದಾದ್ಮೇಲೆ ಇನ್ನು ಬರಬೇಕಿರೋ ಚಿತ್ರದಲ್ಲಿ ಅಯೋಗ್ಯ-2 ಚಿತ್ರ ಇನ್ನಷ್ಟೆ ರಿಲೀಸ್ ಆಗಬೇಕಿದೆ.
ಅಯೋಗ್ಯ-2 ಸಿನಿಮಾದ ಚಿತ್ರೀಕರಣ ಪೂರ್ಣ ಆಗಿದೆ. ಚಿತ್ರೀಕರಣದ ನಂತರ ಕೆಲಸ ನಡಿಯುತ್ತಿದೆ. ಇದೇ ವರ್ಷ ಮಳೆಗಾಲಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಡೈರೆಕ್ಟರ್ ಮಹೇಶ್ ಕುಮಾರ್ ಈ ವಿಷಯವನ್ನ ಹೇಳಿಕೊಂಡಿದ್ದಾರೆ. ನಾಯಕಿ ರಚಿತಾ ರಾಮ್ ಅವರು ಈ ಚಿತ್ರದಲ್ಲು ನಾಯಕ ನಟ ಸತೀಶ್ ನೀನಾಸಂ ಅವರಿಗೆ ಜೋಡಿ ಆಗಿದ್ದಾರೆ. ಇವರ ಈ ಜೋಡಿ ಇಲ್ಲೂ ಮೋಡಿ ಮಾಡುವ ಸಾಧ್ಯತೆ ಇದೆ ಅಂತಲೂ ಹೇಳಬಹುದು.












