Viral Video: 2 ಲಕ್ಷ ರೂಪಾಯಿ ಹಣ ಸುರಿದ ಕೋತಿ! ಕೋರ್ಟ್‌ನಲ್ಲೇ ನಡೆಯಿತು ಮಂಕಿಯಿಂದ ರಾಬರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Viral Video: ನ್ಯಾಯಾಲಯ ಅಂದರೆ ಗಂಭೀರತೆ, ಕಾನೂನು, ವಾದ-ಪ್ರತಿವಾದದ ಜಾಗ. ಆದ್ರೆ ಉತ್ತರ ಪ್ರದೇಶದ ಬುಲಂದ್‌ಶಹರ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ನಡೆದಿದ್ದು ಬೇರೆಯೇ ಸಿನಿಮಾ. ಹೌದು, ವಕೀಲರ ಕೈಲಿದ್ದ ₹2 ಲಕ್ಷದ ಬ್ಯಾಗ್ ಕೈ ತಪ್ಪಿ ಕೋತಿಯ ಪಾಲಾಯಿತು. ಆದಾದ ನಂತರ ಆ ಕೋತಿ ಮಾಡಿದ್ದೇನು ಗೊತ್ತಾ? ಗೊತ್ತಾದ್ರೆ, ಶಾಕ್​ ಆಗೋದಂತು ಗ್ಯಾರಂಟಿ! ಹಾಗಾದ್ರೆ, ಮಂಗನ ಕುಚೇಷ್ಟೆ ಏನು?

News18
News18

ಬುಲಂದ್‌ಶಹರ್‌ (ಉತ್ತರ ಪ್ರದೇಶ): ನ್ಯಾಯಾಲಯ (Court) ಅಂದರೆ ಗಂಭೀರತೆ, ಕಾನೂನು, ವಾದ-ಪ್ರತಿವಾದದ ಜಾಗ. ಆದ್ರೆ ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್ ಕೋರ್ಟ್ (Bulandshahr Court) ಕಾಂಪ್ಲೆಕ್ಸ್‌ನಲ್ಲಿ ನಡೆದಿದ್ದು ಬೇರೆಯೇ ಸಿನಿಮಾ. ಹೌದು, ವಕೀಲರ ಕೈಲಿದ್ದ ₹2 ಲಕ್ಷದ ಬ್ಯಾಗ್ ಕೈ ತಪ್ಪಿ ಕೋತಿಯ (Monkey) ಪಾಲಾಯಿತು. ಆದಾದ ನಂತರ ಆ ಕೋತಿ ಮಾಡಿದ್ದೇನು ಗೊತ್ತಾ? ಗೊತ್ತಾದ್ರೆ, ಶಾಕ್​ ಆಗೋದಂತು ಗ್ಯಾರಂಟಿ.! ಹಾಗಾದ್ರೆ, ಮಂಗನ ಕುಚೇಷ್ಟೆ ಏನು?

ಏನಿದು ಘಟನೆ?

ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ, ಒಬ್ಬ ವಕೀಲರು ತಮ್ಮ ಕಕ್ಷಿದಾರರಿಗೆ ಸಂಬಂಧಿಸಿದ ಕೆಲಸಕ್ಕಾಗಿ ₹2 ಲಕ್ಷ ನಗದು ಹಣ ಇರುವ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಕೋರ್ಟ್ ಆವರಣದೊಳಗೆ ಬರುತ್ತಿದ್ದರು. ಇನ್ನೂ, ಕೋರ್ಟ್ ಸುತ್ತಮುತ್ತ ಕೋತಿಗಳ ಹಾವಳಿ ಸಾಮಾನ್ಯ ವಿಷಯ. ಅದರಂತೆ, ಮರ, ಕಟ್ಟಡದ ಮೇಲೆ ಕೂತು ಜನರ ಕೈಯಿಂದ ತಿಂಡಿ, ಹಣ್ಣು ಕಸಿದುಕೊಳ್ಳುವುದು ಇಲ್ಲಿ ನಿತ್ಯದ ಕೆಲಸವಾಗಿದೆ.

ಇದನ್ನೂ ಓದಿ: Siddaramaiah: ಒಂದೇ ತಿಂಗಳಲ್ಲಿ 4 ಬಲಿಷ್ಠ ಸಿಎಂಗಳ ರಾಜೀನಾಮೆ! ದೇಶದ ರಾಜಕೀಯದಲ್ಲಿ ‘ಮೇ ಕ್ರಾಂತಿ’!

ಆದರೆ ಈ ಬಾರಿ ಕೋತಿ ತಿಂಡಿ ತಗೊಂಡಿಲ್ಲ. ಬದಲಾಗಿ, ವಕೀಲರ ಕೈಯಲ್ಲಿದ್ದ ಹಣದ ಬ್ಯಾಗ್ ಅನ್ನು ಒಂದೇ ಕ್ಷಣದಲ್ಲಿ ಕಿತ್ತುಕೊಂಡು ಮರದ ಕಡೆಗೆ ಓಡಿತು. ಜನರು ಏನಾಗ್ತಿದೆ ಅಂತ ಅರ್ಥ ಮಾಡಿಕೊಳ್ಳುವ ಮೊದಲೇ ಕೋತಿ ಮರದ ಎತ್ತರದ ಕೊಂಬೆ ಮೇಲೆ ಹತ್ತಿತು. ಇದಾದ ನಂತರ ಅಲ್ಲೇ ಕುಳಿತು ಬ್ಯಾಗನ್ನು ಹರಿದು ಒಳಗಿದ್ದ ₹500 ಮುಖಬೆಲೆಯ ನೋಟುಗಳನ್ನು ಒಂದೊಂದಾಗಿ ಹೊರತೆಗೆದು ಗಾಳಿಗೆ ಎಸೆಯಲು ಶುರು ಮಾಡಿತು.

ಕೆಲವೇ ಸೆಕೆಂಡುಗಳಲ್ಲಿ ಬದಲಾಗಿ ಪರಿಸ್ಥಿತಿ!

ಕೋತಿ ಎಸೆದ ನೋಟುಗಳು ಗಾಳಿಯಲ್ಲಿ ಹಾರಾಡುತ್ತಾ ನೆಲಕ್ಕೆ ಬೀಳಲು ಶುರುವಾದವು. ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಇದ್ದ ವಕೀಲರು, ಕಕ್ಷಿದಾರರು, ಕೋರ್ಟ್ ಸಿಬ್ಬಂದಿ, ಸಾಮಾನ್ಯ ಜನರು ಈ ದೃಶ್ಯ ನೋಡಿ ಮೊದಲು ದಿಗ್ಭ್ರಮೆಗೊಂಡರು. ನಂತರ ಎಲ್ಲರೂ ನೋಟುಗಳನ್ನು ಎತ್ತಿಕೊಳ್ಳಲು ನೆಲದ ಮೇಲೆ ಬಿದ್ದರು. ಯಾರು ಯಾರದ್ದು ಅಂತ ನೋಡದೆ ಕೈಗೆ ಸಿಕ್ಕಷ್ಟು ನೋಟು ಎತ್ತಿಕೊಳ್ಳುವ ಸ್ಪರ್ಧೆ ಶುರುವಾಯಿತು. ಕೋತಿ ಮಾತ್ರ ಮರದ ಮೇಲಿಂದ ಈ ನೋಡುತ್ತಾ ತನ್ನ ಪಾಡಿಗೆ ತಾನು ನೋಟು ಎಸೆಯುವುದನ್ನು ಮುಂದುವರಿಸಿತು.

ಈ ಸಂಪೂರ್ಣ ಘಟನೆಯನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ವಿಡಿಯೋದಲ್ಲಿ ಕೋತಿ ಮರದ ಮೇಲೆ ಕುಳಿತು ನೋಟು ಹಾರಿಸುವ ದೃಶ್ಯ ಮತ್ತು ಕೆಳಗೆ ಜನರು ನೋಟು ಎತ್ತುವ ಗೊಂದಲ ಸ್ಪಷ್ಟವಾಗಿ ಕಾಣಿಸುತ್ತದೆ. ಅದರಂತೆ, ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗುದ್ದು, ನೆಟ್ಟಿಗರು ಇದಕ್ಕೆ “ಮಂಕಿ ಬ್ಯಾಂಕ್ ರಾಬರಿ”, “ಕೋತಿಯ ಹಣದ ಮಳೆ” ಎಂದು ಕಾಮೆಂಟ್ ಮಾಡಿ ಮೀಮ್ಸ್ ಮಾಡಲು ಶುರು ಮಾಡಿದ್ದಾರೆ.

ಏತನ್ಮಧ್ಯೆ, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಅದರಂತೆ, ಹೆಚ್ಚಿನ ಹಣವನ್ನು ವಕೀಲರಿಗೆ ಹಿಂತಿರುಗಿಸಲಾಗಿದೆ ಎಂದು ವರದಿಯಾಗಿದೆ, ಆದರೂ ₹2,000 ರಿಂದ ₹5,000 ವರೆಗಿನ ಮೊತ್ತ ಇನ್ನೂ ಕಾಣೆಯಾಗಿದೆ ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed