Priya Sudeepa: ಕಿಚ್ಚನ ಮಡದಿ ಪ್ರಿಯಾ ಸುದೀಪ್ ಬಗ್ಗೆ ನಿಮಗೆ ತಿಳಿದಿರದ ವಿಷಯಗಳಿವು! | | ACTPnews

Sudeepa Wife Priya Sudeep Journey Unknown Facts


ಸ್ಟಾರ್ ಸವಿ ರುಚಿ ಕಾರ್ಯಕ್ರಮ….

ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಅಂದ್ರೆ ಏನು ಗೊತ್ತಾ? ಸುಪ್ರಿಯಾ ಮತ್ತು ಸಾನ್ವಿ ಹಾಗೂ ಸುದೀಪ್ ಅನ್ನೋದು ಇದರ ಮೀನಿಂಗ್ ಆಗಿದೆ. ಮೂವರ ಹೆಸರೂ ಇರೋ ಒಂದು ನಿರ್ಮಾಣ ಸಂಸ್ಥೆಯಿಂದ ಮೊದಲು ದೊಡ್ಡ ಸಿನಿಮಾಗಳೇನು ನಿರ್ಮಾಣ ಆಗಿಲ್ಲ. ಅತಿ ದೊಡ್ಡ ಸೀರಿಯಲ್ ಕೂಡ ಆರಂಭಗೊಂಡಿಲ್ಲ.

19 ವರ್ಷಕ್ಕೇನೆ ಕೆಲಸ

(ಚಿತ್ರ ಕೃಪೆ: ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಇನ್‌ಸ್ಟಾಗ್ರಾಮ್)

ಬದಲಾಗಿ ಅಡುಗೆ ಕಾರ್ಯಕ್ರಮ ಸ್ಟಾರ್ ಸವಿ ರುಚಿನೇ ಶುರು ಆಗಿದೆ. ಈ ಶೋ ಆದ್ಮೇಲೆ ನಿಧಾನಕ್ಕೆ ಪ್ರಿಯಾ ಸುದೀಪ್ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಮ್ಯಾಂಗೋ ಪಚ್ಚ ಈ ಸಂಸ್ಥೆಯ ಚಿತ್ರವೇ ಆಗಿದೆ.
ಮ್ಯಾಂಗೋ ಪಚ್ಚ ಫಸ್ಟ್ ಸಿನಿಮಾ

ಮ್ಯಾಂಗೋ ಪಚ್ಚ ಈ ಸಂಸ್ಥೆಯ ಮೊದಲ ಚಿತ್ರವೇ ಆಗಿದೆ. ಆದರೆ, ಈ ಒಂದು ಸಂಸ್ಥೆ ಜೊತೆಗೆ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ಅವರ ಕೆಆರ್‌ಜಿ ಸಂಸ್ಥೆ ಕೂಡ ಸಾಥ್ ಕೊಟ್ಟಿದೆ.

ಇವರ ಈ ಮ್ಯಾಂಗೋ ಪಚ್ಚ ಈ ವಾರವೇ ರಿಲೀಸ್ ಆಗುತ್ತಿದೆ. ಜೂನ್-5 ರಂದು ಇದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ನಡೆದ ಕನ್ನಡ ಪಿಕ್ಚರ್ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿಯೇ ಪ್ರಿಯಾ ಸುದೀಪ್ ತಮ್ಮ ಈ ಜರ್ನಿ ಬಗ್ಗೆನೂ ಹೇಳಿಕೊಂಡಿದ್ದಾರೆ.

19 ವರ್ಷಕ್ಕೇನೆ ಕೆಲಸ ಶುರು

ಪ್ರಿಯಾ ಸುದೀಪ್ ಬ್ಯಾಂಕ್ ಅಲ್ಲೂ ಕೆಲಸ ಮಾಡಿದ್ದಾರೆ. ಏರ್ ಹೋಸ್ಟೆಸ್ ಆಗಿಯೂ ದುಡಿದಿದ್ದಾರೆ. ಆದರೆ, ಸುದೀಪ್ ಅವರೊಟ್ಟಿಗೆ ಮದುವೆ ಆದ್ಮೇಲೆ ಇಬ್ಬರು ಬ್ಯುಸಿ ಆದರೆ ಹೇಗೆ? ಈ ಒಂದು ಯೋಚನೆ ಬಂದ್ಮೇಲೇನೆ ಪ್ರಿಯಾ ಸುದೀಪ್ ಕೆಲಸ ಬಿಟ್ಟಿದ್ದಾರೆ.

Sudeepa Wife Priya Sudeep Journey Unknown Facts

ಸ್ಟಾರ್ ಸವಿ ರುಚಿ ಕಾರ್ಯಕ್ರಮ….

(ಚಿತ್ರ ಕೃಪೆ: ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಇನ್‌ಸ್ಟಾಗ್ರಾಮ್)

ಆದರೆ, ಪ್ರಿಯಾ ಸುದೀಪ್ ಮದುವೆ ಮೊದಲು ಆರ್ಥಿಕವಾಗಿ ಸ್ವಾವಲಂಬನೆ ಆಗಿದ್ದರು. ತಮ್ಮ 19 ವರ್ಷದಿಂದಲೇ ಕೆಲಸ ಮಾಡೋಕೆ ಶುರು ಮಾಡಿದ್ದರು.

ಆದರೆ, ಮದುವೆ ಆದ್ಮೇಲೆ ಒಂದು ನಿರ್ಧಾರ ಮಾಡಿ ಮನೆ, ಮಗಳು ಅಂತ ಉಳಿದು ಬಿಟ್ಟರು. ಮಗಳು ಒಬ್ಬಳೇ ಇರ್ತಾಳೆ ಅಂದ್ಮೇಲೆ ಸುಪ್ರಿಯಾನ್ವಿ ಸಂಸ್ಥೆ ಶುರು ಮಾಡಿದೆ ಅಂತ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.

ಮ್ಯಾಂಗೋ ಪಚ್ಚ

ಈಗಾಗಲೇ ಹೇಳಿದಂತೆ ಸುಪ್ರಿಯಾನ್ವಿ ಸಂಸ್ಥೆ ಮೂಲಕವೇ ಮ್ಯಾಂಗೋ ಪಚ್ಚ ಚಿತ್ರ ಬರ್ತಿದೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಈ ಚಿತ್ರದಿಂದಲೇ ಕನ್ನಡ ಇಂಡಸ್ಟ್ರಿಗೆ ಹೀರೋ ಆಗಿ ಕಾಲಿಡುತ್ತಿದ್ದಾರೆ.

ಈ ಚಿತ್ರದಲ್ಲಿ ತುಂಬಾನೆ ಚೆನ್ನಾಗಿ ಕೆಲಸ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ರಿಷಬ್ ಶೆಟ್ರು ಕೂಡ ಈ ಚಿತ್ರದ ಟ್ರೈಲರ್ ಮೆಚ್ಚಿದ್ದಾರೆ. ಸಂಚಿತ್ ಸಂಜೀವ್ ಅಭಿನಯ ಹಾಗೂ ಸ್ಕ್ರೀನ್ ಪ್ರೆಸೆನ್‌ ಕೂಡ ಕೊಂಡಾಡಿದ್ದಾರೆ.

ಮೇ-5 ರಂದು ರಿಲೀಸ್

ಮ್ಯಾಂಗೋ ಪಚ್ಚ ಚಿತ್ರ ಮೇ-5 ರಂದು ರಿಲೀಸ್ ಆಗುತ್ತಿದೆ. ನವ ನಿರ್ದೇಶಕ ವಿವೇಕ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರಿಗೆ ಮೊದಲ ಚಿತ್ರವೇ ಆಗಿದೆ.

ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಹಾಗೂ ಸ್ವಾಮಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಮ್ಯಾಕ್ಸ್ ಮಂಜು , ಮಯೂರ್ ಪಟೇಲ್, ಭಾವನಾ ರಾಮಣ್ಣ, ವಿಜಯ್ ರಾಘವೇಂದರ ಅಳಿಯ ಜೈ, ನಟಿ ಹರಿಣಿ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿದ್ದಾರೆ. ಇವರ ಈ ಚಿತ್ರದ ಬಗ್ಗೆನೂ ಒಂದು ನಿರೀಕ್ಷೆ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports