Indian Railway: 20 ಬೋಗಿಗಳ ಹೊಸ ಎಕ್ಸ್‌ಪ್ರೆಸ್ ರೈಲು ಜೂನ್‌ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ! | ಉತ್ತರ ಕನ್ನಡ ನ್ಯೂಸ್ (Uttara Kannada News) | ACTPnews

Indian Railway: 20 ಬೋಗಿಗಳ ಹೊಸ ಎಕ್ಸ್‌ಪ್ರೆಸ್ ರೈಲು ಜೂನ್‌ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ! | ಉತ್ತರ ಕನ್ನಡ ನ್ಯೂಸ್ (Uttara Kannada News)


ಬದಲಾಯಿತು ರೈಲು ನಂಬರ್; ಇಲ್ಲಿದೆ ಹೊಸ ಅಪ್ಡೇಟ್!

ಈ ಹಿಂದೆ ವಿಶೇಷ ರೈಲು ಸಂಖ್ಯೆ 09057/09058 ಆಗಿ ಓಡಾಡುತ್ತಿದ್ದ ಈ ಜನಪ್ರಿಯ ರೈಲು ಸೇವೆ, ಇನ್ಮುಂದೆ ಕಾಯಂ ಆಗಿ ಹೊಸ ನಂಬರ್‌ನೊಂದಿಗೆ ಹಳಿ ಮೇಲೆ ಓಡಲಿದೆ. ಇನ್ಮುಂದೆ ಈ ಸೇವೆಯು ರೈಲು ಸಂಖ್ಯೆ 19057/19058 ಸೂರತ್ – ಮಂಗಳೂರು ಜಂಕ್ಷನ್ – ಸೂರತ್ (ದ್ವಿ-ವಾರ) ಎಕ್ಸ್‌ಪ್ರೆಸ್ ಆಗಿ ಬದಲಾಗಲಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವಾಗಲಿಂದ ಆರಂಭ? ಇಲ್ಲಿದೆ ಪಕ್ಕಾ ಡೇಟ್ಸ್!

ಸೂರತ್‌ನಿಂದ: ಜೂನ್ 3, 2026 ರಿಂದ ಕಾಯಂ ಸೇವೆ ಆರಂಭವಾಗಲಿದೆ.

ಮಂಗಳೂರು ಜಂಕ್ಷನ್‌ನಿಂದ: ಜೂನ್ 4, 2026 ರಿಂದ ನೂತನ ಕಾಯಂ ಸೇವೆ ಚಾಲನೆಗೊಳ್ಳಲಿದೆ.

ಹೊಸ ಟೈಮಿಂಗ್ಸ್ ಏನು? ಕಂಪ್ಲೀಟ್ ಡಿಟೇಲ್ಸ್

ರೈಲು ಸಂಖ್ಯೆ 19057 (ಸೂರತ್ ಟು ಮಂಗಳೂರು): ಜೂನ್ 3 ರಿಂದ ಅನ್ವಯವಾಗುವಂತೆ ಪ್ರತಿ ಬುಧವಾರ ಮತ್ತು ಭಾನುವಾರ ರಾತ್ರಿ 19:35 ಗಂಟೆಗೆ ಸೂರತ್‌ನಿಂದ ಹೊರಟು, ಮರುದಿನ ರಾತ್ರಿ 19:45 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.

ರೈಲು ಸಂಖ್ಯೆ 19058 (ಮಂಗಳೂರು ಟು ಸೂರತ್): ಜೂನ್ 4 ರಿಂದ ಅನ್ವಯವಾಗುವಂತೆ ಪ್ರತಿ ಗುರುವಾರ ಮತ್ತು ಸೋಮವಾರ ರಾತ್ರಿ 22:30 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಮರುದಿನ ರಾತ್ರಿ 23:45 ಗಂಟೆಗೆ ಸೂರತ್ ತಲುಪಲಿದೆ.

ನಿಮ್ಮ ಊರಲ್ಲೂ ನಿಲ್ಲುತ್ತಾ? ಸ್ಟಾಪೇಜ್‌ಗಳ ಲಿಸ್ಟ್ ಇಲ್ಲಿದೆ!

ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ವರದಾನವಾಗಲಿರುವ ಈ ಎಕ್ಸ್‌ಪ್ರೆಸ್ ರೈಲು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ:

* ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ

* ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು

* ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್

* ಮಡಗಾಂವ್ ಜಂಕ್ಷನ್, ಥಿವಿಂ, ರತ್ನಗಿರಿ, ಪನ್ವೇಲ್, ವಸಾಯಿ ರೋಡ್ ಹಾಗೂ ವಲ್ಸಾದ್.

ಬೋಗಿಗಳ ವಿವರ; ಯಾವ ಕ್ಲಾಸ್‌ನಲ್ಲಿ ಎಷ್ಟಿವೆ ಸೀಟುಗಳು?

ಈ ಎಕ್ಸ್‌ಪ್ರೆಸ್ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದ್ದು, ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ

* 2 ಟೈರ್ ಎಸಿ (2 Tier AC): 1 ಬೋಗಿ

* 3 ಟೈರ್ ಎಸಿ (3 Tier AC): 7 ಬೋಗಿ

* ಸ್ಲೀಪರ್ ಕ್ಲಾಸ್ (Sleeper): 6 ಬೋಗಿ

* ಸಾಮಾನ್ಯ ಬೋಗಿಗಳು (General): 4 ಬೋಗಿ

* ಎಸ್‌ಎಲ್‌ಆರ್/ಡಿ (SLR/D): 2 ಬೋಗಿ

ಎಲ್ಲಿ ರೈಲು ಬುಕ್‌ ಮಾಡಬಹುದು?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed