ಈ ಹಿಂದೆ ವಿಶೇಷ ರೈಲು ಸಂಖ್ಯೆ 09057/09058 ಆಗಿ ಓಡಾಡುತ್ತಿದ್ದ ಈ ಜನಪ್ರಿಯ ರೈಲು ಸೇವೆ, ಇನ್ಮುಂದೆ ಕಾಯಂ ಆಗಿ ಹೊಸ ನಂಬರ್ನೊಂದಿಗೆ ಹಳಿ ಮೇಲೆ ಓಡಲಿದೆ. ಇನ್ಮುಂದೆ ಈ ಸೇವೆಯು ರೈಲು ಸಂಖ್ಯೆ 19057/19058 ಸೂರತ್ – ಮಂಗಳೂರು ಜಂಕ್ಷನ್ – ಸೂರತ್ (ದ್ವಿ-ವಾರ) ಎಕ್ಸ್ಪ್ರೆಸ್ ಆಗಿ ಬದಲಾಗಲಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂರತ್ನಿಂದ: ಜೂನ್ 3, 2026 ರಿಂದ ಕಾಯಂ ಸೇವೆ ಆರಂಭವಾಗಲಿದೆ.
ಮಂಗಳೂರು ಜಂಕ್ಷನ್ನಿಂದ: ಜೂನ್ 4, 2026 ರಿಂದ ನೂತನ ಕಾಯಂ ಸೇವೆ ಚಾಲನೆಗೊಳ್ಳಲಿದೆ.
ರೈಲು ಸಂಖ್ಯೆ 19057 (ಸೂರತ್ ಟು ಮಂಗಳೂರು): ಜೂನ್ 3 ರಿಂದ ಅನ್ವಯವಾಗುವಂತೆ ಪ್ರತಿ ಬುಧವಾರ ಮತ್ತು ಭಾನುವಾರ ರಾತ್ರಿ 19:35 ಗಂಟೆಗೆ ಸೂರತ್ನಿಂದ ಹೊರಟು, ಮರುದಿನ ರಾತ್ರಿ 19:45 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 19058 (ಮಂಗಳೂರು ಟು ಸೂರತ್): ಜೂನ್ 4 ರಿಂದ ಅನ್ವಯವಾಗುವಂತೆ ಪ್ರತಿ ಗುರುವಾರ ಮತ್ತು ಸೋಮವಾರ ರಾತ್ರಿ 22:30 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊರಟು, ಮರುದಿನ ರಾತ್ರಿ 23:45 ಗಂಟೆಗೆ ಸೂರತ್ ತಲುಪಲಿದೆ.
ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ವರದಾನವಾಗಲಿರುವ ಈ ಎಕ್ಸ್ಪ್ರೆಸ್ ರೈಲು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ:
* ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ
* ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು
* ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್
* ಮಡಗಾಂವ್ ಜಂಕ್ಷನ್, ಥಿವಿಂ, ರತ್ನಗಿರಿ, ಪನ್ವೇಲ್, ವಸಾಯಿ ರೋಡ್ ಹಾಗೂ ವಲ್ಸಾದ್.
* 2 ಟೈರ್ ಎಸಿ (2 Tier AC): 1 ಬೋಗಿ
* 3 ಟೈರ್ ಎಸಿ (3 Tier AC): 7 ಬೋಗಿ
* ಸ್ಲೀಪರ್ ಕ್ಲಾಸ್ (Sleeper): 6 ಬೋಗಿ
* ಸಾಮಾನ್ಯ ಬೋಗಿಗಳು (General): 4 ಬೋಗಿ
* ಎಸ್ಎಲ್ಆರ್/ಡಿ (SLR/D): 2 ಬೋಗಿ
ಎಲ್ಲಿ ರೈಲು ಬುಕ್ ಮಾಡಬಹುದು?












