Last Updated:
ಬಿಎಲ್ಆರ್ ಏರ್ಪೋರ್ಟ್ ಟ್ರಂಪೆಟ್ ರಸ್ತೆ ಬಳಿ ಜೂನ್ 7ರವರೆಗೆ ಟ್ರಾಫಿಕ್ ಡೈವರ್ಷನ್, ಇಂದು ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಹೆಚ್ಜಿವಿ ಸಂಚಾರ ನಿಷೇಧ
ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದ (Traffic Problem) ಹೈರಾಣಾಗಿರುವ ಸಿಲಿಕಾನ್ ಸಿಟಿ ಜನತೆಗೆ ಮತ್ತೊಂದು ಶಾಕ್! ನೀವು ವಿಮಾನ ನಿಲ್ದಾಣಕ್ಕೆ ಹೋಗುವ ಪ್ಲಾನ್ (Plan) ಮಾಡುತ್ತಿದ್ದೀರಾ? ಅಥವಾ ಇಂದು ರಾತ್ರಿ ಮಾರತ್ತಹಳ್ಳಿ ಕಡೆ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಾದರೆ ಟ್ರಾಫಿಕ್ ಪೊಲೀಸರು (Police) ಮತ್ತು ಅಧಿಕಾರಿಗಳು ಹೊರಡಿಸಿರುವ ಈ ಹೊಸ ಮಾರ್ಗಸೂಚಿಗಳನ್ನು ತಿಳಿಯದಿದ್ದರೆ ರಸ್ತೆಯಲ್ಲೇ (Road) ಸಿಲುಕಿಕೊಳ್ಳುವುದು ಖಚಿತ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BLR Airport) ಹೋಗುವವರು ಮತ್ತು ಬರುವವರು ಗಮನಿಸಲೇಬೇಕಾದ ಮಾಹಿತಿ ಇದು.
ಇಂದಿನಿಂದ (ಮೇ 30) ಜೂನ್ 7, 2026 ರವರೆಗೆ ಟ್ರಂಪೆಟ್ ರಸ್ತೆ (Trumpet Road) ಮೇಲ್ಸೇತುವೆಗಳ ಬಳಿ ತಾತ್ಕಾಲಿಕ ಸಂಚಾರ ಬದಲಾವಣೆ (Traffic diversions) ಮಾಡಲಾಗಿದೆ. ನಿಗದಿತ ನಿರ್ವಹಣಾ ಕಾಮಗಾರಿಯ (scheduled maintenance work) ಕಾರಣದಿಂದಾಗಿ ಈ ಹಠಾತ್ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ದಾರಿ ತಪ್ಪದಿರಲು, ವಿಮಾನ ನಿಲ್ದಾಣಕ್ಕೆ ಹೋಗುವಾಗ ಮತ್ತು ಬರುವಾಗ ಸೂಚನಾ ಫಲಕಗಳನ್ನು (signages) ಕಡ್ಡಾಯವಾಗಿ ಗಮನಿಸಿಕೊಂಡು ಹೋಗುವಂತೆ ವಿನಂತಿಸಲಾಗಿದೆ.
ಎಚ್.ಎ.ಎಲ್ ನಿಂದ ವರ್ತೂರು/ವೈಟ್ಫೀಲ್ಡ್ ಕಡೆಗೆ ಹೋಗುವ ವಾಹನಗಳಿಗೆ
ಭಾರಿ ಸರಕು ವಾಹನಗಳು ವರ್ತೂರು ಮುಖ್ಯ ರಸ್ತೆ ಮುಖಾಂತರ ಸಾಗಬೇಕು. ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್ ಬಳಿ ಎಡ ತಿರುವು ಪಡೆಯಬೇಕು. ಅಶ್ವತ್ಥನಗರ ಸರ್ವೀಸ್ ರಸ್ತೆ ಮೂಲಕ ಹೊರ ವರ್ತುಲ ರಸ್ತೆ (Outer Ring Road) ತಲುಪಬೇಕು. ಕಾರ್ತಿಕ್ ನಗರ ಜಂಕ್ಷನ್ ಬಳಿ ಯು-ಟರ್ನ್ (U-turn) ಪಡೆದು ಮುಂದುವರೆಯಬೇಕು. ಕಲಾ ಮಂದಿರ ಜಂಕ್ಷನ್ ತಲುಪಿ, ಮುಂದುವರೆದು ಸರ್ವೀಸ್ ರಸ್ತೆ ಮೂಲಕ ವರ್ತೂರು ಮುಖ್ಯ ರಸ್ತೆ ಸೇರಬೇಕು. ಅಲ್ಲಿಂದ ಎಡ ತಿರುವು ಪಡೆದು ವೈಟ್ಫೀಲ್ಡ್ ಮತ್ತು ವರ್ತೂರು ಕಡೆಗೆ ಸಂಚರಿಸಬಹುದು.
ವರ್ತೂರು/ವೈಟ್ಫೀಲ್ಡ್ ನಿಂದ ಎಚ್.ಎ.ಎಲ್ ಕಡೆಗೆ ಹೋಗುವ ವಾಹನಗಳಿಗೆ
Bangalore [Bangalore],Bangalore,Karnataka













