Last Updated:
ಭಾರತದ ವೇಗಿ ಮೊಹಮ್ಮದ್ ಶಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪತ್ನಿ ಹಸಿನ್ ಜಹಾನ್ ಮಾಡಿದ ಆರೋಪಗಳಿಂದ ಶಮಿ ಅವರನ್ನು ಅಲಿಪೋರ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಭಾರತ (India) ತಂಡದ ಸ್ಟಾರ್ ವೇಗದ ಬೌಲರ್ (Bowler) ಮೊಹಮ್ಮದ್ ಶಮಿ (Mohammed Shami) ಅವರಿಗೆ ಅತ್ಯಂತ ವಿವಾದಾತ್ಮಕ (Controversial) ಪ್ರಕರಣವೊಂದರಿಂದ ಬಿಗ್ ರಿಲೀಫ್ (Relief) ಸಿಕ್ಕಿದೆ. ಹೆಂಡತಿ ಹಸಿನ್ ಜಹಾನ್ (Hasin Jahan) ಮಾಡಿದ ಆರೋಪದಿಂದ ಮೊಹಮ್ಮದ್ ಶಮಿ ಮುಕ್ತನಾಗಿದ್ದಾರೆ. ಹೌದು, 2018 ರ ಚೆಕ್ ವಂಚನೆ (Check fraud) ಶಮಿ ಅವರಿಗೆ ಪ್ರಮುಖ ರಿಲೀಫ್ ಸಿಕ್ಕಿದೆ. ಹಸಿನ್ ಜಹಾನ್ ಮಾಡಿದ ಆರೋಪಗಳಿಂದ ಶಮಿ ಅವರನ್ನು ಅಲಿಪೋರ್ ಕೋರ್ಟ್ (Alipore Court) ಖುಲಾಸೆಗೊಳಿಸಿದೆ. ಆದಾರೆ, ಇಬ್ಬರ ನಡುವಿನ ಜೀವನಾಂಶ ವಿವಾದ ಇನ್ನೂ ಸುಪ್ರೀಂ ಕೋರ್ಟ್ (Supreme Court) ನಲ್ಲಿ ನಡೆಯುತ್ತಿದೆ.
ಮೊಹಮ್ಮದ್ ಶಮಿ ವಿರುದ್ಧ ಹಸಿನ್ ಜಹಾನ್ 1 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣದ ವಿಚಾರಣೆಯ ನಂತರ, ಅಲಿಪೋರ್ ನ್ಯಾಯಾಲಯವು ಬುಧವಾರ ತನ್ನ ತೀರ್ಪು ನೀಡಿತು. ಪ್ರಕರಣದಲ್ಲಿನ ಎಲ್ಲಾ ಆರೋಪಗಳಿಂದ ಶಮಿಯನ್ನು ಖುಲಾಸೆಗೊಳಿಸಿತು.
ವಿಚಾರಣೆಯ ಸಮಯದಲ್ಲಿ ಮೊಹಮ್ಮದ್ ಶಮಿ ನ್ಯಾಯಾಲಯದಲ್ಲಿ ಹಾಜರಿದ್ದರು. ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಯಾವುದೇ ತಪ್ಪು ಮಾಡಿಲ್ಲದ ಕಾರಣ ತೀರ್ಪು ತಮ್ಮ ಪರವಾಗಿ ಬರುತ್ತದೆ ಎಂಬ ವಿಶ್ವಾಸವಿತ್ತು. ನಾನು ನನ್ನ ಎಲ್ಲಾ ಬಾಕಿಗಳನ್ನು ಪಾವತಿಸಿದ್ದೇನೆ. ಎಲ್ಲವೂ ಇತ್ಯರ್ಥವಾಗಿದೆ ಎಂದು ಹೇಳಿದರು.
ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ನಡುವೆ ಬಹಳ ಹಿಂದಿನಿಂದಲೂ ವಿವಾದವಿದೆ. ಕಳೆದ ವರ್ಷ ಜುಲೈನಲ್ಲಿ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರು ಶಮಿ ತಮ್ಮ ಪತ್ನಿ ಮತ್ತು ಮಗಳಿಗೆ ತಿಂಗಳಿಗೆ 4 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಆದೇಶ ಹೊರಡಿಸಿದರು.
ಇದಾದ ನಂತರ, ಹಸಿನ್ ಜಹಾನ್ ಈ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಈಗ ಕೋಲ್ಕತ್ತಾ ಹೈಕೋರ್ಟ್ ಆದೇಶದ ಪ್ರಕಾರ, ಶಮಿ ತನ್ನ ಮಗಳಿಗೆ ತಿಂಗಳಿಗೆ 2.5 ಲಕ್ಷ ಮತ್ತು ಜಹಾನ್‌ಗೆ 1.5 ಲಕ್ಷ ರೂ.ಗಳನ್ನು ಜೀವನಾಂಶವಾಗಿ ನೀಡುತ್ತಿದ್ದಾರೆ.
ಹಸಿನ್ ಜಹಾನ್ 2018 ರಲ್ಲಿ ಶಮಿ ಮತ್ತು ಅವರ ಕುಟುಂಬದ ವಿರುದ್ಧ ಹಲವಾರು ಗಂಭೀರ ಆರೋಪಗಳ ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಿದರು. ಅವುಗಳಲ್ಲಿ ಕೆಲವು ಜಾಮೀನು ರಹಿತ ಆರೋಪಗಳಾಗಿವೆ. ಚೆಕ್ ಬೌನ್ಸ್ ಪ್ರಕರಣವು ದೀರ್ಘಕಾಲದವರೆಗೆ ಸುದ್ದಿಯಲ್ಲಿತ್ತು.
ಹಸಿನ್ ಜಹಾನ್ ಪ್ರಸ್ತುತ ಕೋಲ್ಕತ್ತಾದಲ್ಲಿರುವ ಶಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಮಗಳ ಶಿಕ್ಷಣದ ಕಾರಣದಿಂದಾಗಿ ಆಗಾಗ್ಗೆ ದೆಹಲಿ ಮತ್ತು ಕೋಲ್ಕತ್ತಾ ನಡುವೆ ಪ್ರಯಾಣಿಸುತ್ತಾರೆ. ಮತ್ತೊಂದೆಡೆ, ಶಮಿ ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿಲ್ಲದಿದ್ದಾಗ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಾಸಿಸುತ್ತಾರೆ. ಅವರು ಪ್ರಸ್ತುತ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದಾರೆ. ಆದರೂ ಅವರು ಮಂಗಳವಾರದ ಪಂದ್ಯದಲ್ಲಿ ಭಾಗವಹಿಸರಲಿಲ್ಲ.













