Ambareesh Birthday: ಅಂಬಿ ಜೀವನವೇ ಒಂದು ಸಂಭ್ರಮ, ಸಾಟಿಯಿಲ್ಲದ ಪ್ರೀತಿಯಿಂದ ತುಂಬಿತ್ತು! ಸುಮಲತಾ ಭಾವುಕ ಪೋಸ್ಟ್! | | ACTPnews

ಅಂಬಿ ಜೀವನವೇ ಒಂದು ಸಂಭ್ರಮ; ಸುಮಲತಾ ಭಾವುಕ ಪೋಸ್ಟ್!


Last Updated:

ಅಂಬರೀಶ್ ಅವರ 74 ನೇ ಜನ್ಮ ದಿನ ಇವತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಭಾನಾತ್ಮಕ ಪೋಸ್ಟ್ ಒಂದನ್ನ ಹಾಕಿದ್ದಾರೆ. ಇದರಲ್ಲಿ “ಅಂಬರೀಶ್ ಜೀವನವೇ ಒಂದು ಸಂಭ್ರಮ” ಅಂತ ಬರೆದಿದ್ದಾರೆ. ಇನ್ನು ಸಾಕಷ್ಟು ವಿಷಯ ಹೇಳಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ಅಂಬಿ ಜೀವನವೇ ಒಂದು ಸಂಭ್ರಮ; ಸುಮಲತಾ ಭಾವುಕ ಪೋಸ್ಟ್!
ಅಂಬಿ ಜೀವನವೇ ಒಂದು ಸಂಭ್ರಮ; ಸುಮಲತಾ ಭಾವುಕ ಪೋಸ್ಟ್!

ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರನ್ನ ಪತ್ನಿ ಸುಮಲತಾ (Sumalatha) ಅವರು ನೆನಪಿಸಿಕೊಂಡಿದ್ದಾರೆ. ಜನರಿಗೆ ಅವರ ಮೇಲೆ ಇರೋ ಪ್ರೀತಿಯನ್ನ ಬರೆದುಕೊಂಡಿದ್ದಾರೆ. ಅಂಬರೀಶ್ ಜೀವನ ಹೇಗಿತ್ತು ಅನ್ನೋದು ಕೆಲವು ಸಾಲುಗಳಲ್ಲಿಯೇ ಕಟ್ಟಿಕೊಟ್ಟಿದ್ದಾರೆ. ಜನರ ಮನದಲ್ಲಿ ಅಂಬರೀಶ್ ಅದೆಷ್ಟು ಜಾಗ ಮಾಡಿಕೊಂಡಿದ್ದಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಮೇ-29 ರಂದು ಅಂಬರೀಶ್ ಪ್ರತಿ ವರ್ಷ ತಮ್ಮ ಜನ್ಮ ದಿನವನ್ನ (Birthday) ಆಚರಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರ ಅಭಿಮಾನಿಗಳು ಈ ಕೆಲಸ ಮಾಡುತ್ತಾರೆ. ಮನೆಯವರು ಈ ದಿನವನ್ನ ಮರೆತ್ತಿಲ್ಲ. ಅಂಬರೀಶ್ (Ambareesh) ಅವರ ನೆನಪಿನಲ್ಲಿಯೇ ಇರೋ ಸುಮಲತಾ ಅವರು, ಈಗೊಂದು ಭಾವುಕ ಪೋಸ್ಟ್ ಹಾಕಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ ಓದಿ.

ಸದಾ ನೆನಪಿನಲ್ಲಿರೋ ಅಂಬರೀಶ್..

ಅಂಬರೀಶ್ ಜೀವನ ಒಂದು ಸಂಭ್ರಮವೇ ಆಗಿತ್ತು. ಅಲ್ಲಿ ಪ್ರೀತಿ ಇತ್ತು. ಹಾಸ್ಯ ಇರ್ತಾ ಇತ್ತು. ಉದಾರತೆನೂ ಇತ್ತು. ಸಾಟಿ ಇಲ್ಲದಷ್ಟು ಪ್ರೀತಿಯನ್ನ ಜನರಿಗೆ ತೋರಿಸುತ್ತಿದ್ದರು.
Sumalatha Ambareesh Emotional Post on Ambi Birthday

ಸದಾ ನಮ್ಮ ರೆಬೆಲ್ ಸ್ಟಾರ್

(ಚಿತ್ರ ಕೃಪೆ: ಸುಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್)

ಅಂತಹ ಅಂಬರೀಶ್ ಅವರು ಆತ್ಮೀಯರು, ಸ್ನೇಹಿತರು ಇಂದಿಗೂ ಅಂಬಿಯನ್ನ ನೆನಪಿಸಿಕೊಳ್ಳುತ್ತಾರೆ. ಆ ರೀತಿಯ ಅಂಬರೀಶ್ ಅವರ ಬಗ್ಗೆ ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ.

ಎಂದೆಂದಗೂ ಪ್ರೀತಿಸುವ ವ್ಯಕ್ತಿ

ಸುಮತಲಾ ಅಂಬರೀಶ್ ಅವರು ಅಂಬರೀಶ್ ಅವರ 74ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಈ ಪೋಸ್ಟ್ ಹಾಕಿದ್ದಾರೆ. ಅಂಬರೀಶ್ ಅವರು ಸದಾ ಪ್ರೀತಿಸುವ ವ್ಯಕ್ತಿನೇ ಆಗಿದ್ದರು.

ಎಲ್ಲರನ್ನೂ ಪ್ರೀತಿಸುತ್ತಿದ್ದರು, ಆಪ್ತರು , ಸ್ನೇಹಿತರು ಹೀಗೆ ಎಲ್ಲರ ಮನದಲ್ಲೂ ಜಾಗ ಮಾಡಿಕೊಂಡಿದ್ದಾರೆ. ಇವರ ಜೀವನವೇ ಒಂದು ಸಂಭ್ರವಾಗಿತ್ತು. ಪ್ರೀತಿ, ಹಾಸ್ಯ, ಉದಾರತೆಗೆ ಸಾಟಿನೇ ಇಲ್ಲ ಅನ್ನುವ ಅರ್ಥದಲ್ಲಿಯೇ ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ.

Sumalatha Ambareesh Emotional Post on Ambi Birthday

ಸದಾ ನೆನಪಿನಲ್ಲಿರೋ ಅಂಬರೀಶ್..
ಸದಾ ನಮ್ಮ ರೆಬೆಲ್ ಸ್ಟಾರ್

ರೆಬೆಲ್ ಸ್ಟಾರ್ ಅಂಬರೀಶ್ ಅವರು ಸದಾ ಜನರ ಮನದಲ್ಲಿಯೇ ಇದ್ದಾರೆ. ಮನೆಯವರ ಮನದಲ್ಲೂ ಇನ್ನೂ ಇದ್ದಾರೆ. ಅದಕ್ಕೇನೆ ಸುಮಲತಾ ಅವರು ಸದಾ ನಮ್ಮ ಹೃದಯದಲ್ಲಿರೋ ನಮ್ಮ ರೆಬೆಲ್ ಸ್ಟಾರ್ ಅಂತಲೇ ಇಂಗ್ಲಿಷ್ ಅಲ್ಲೂ  ಬರೆದುಕೊಂಡಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ನಟನೆ ದಾಟಿ ಬೇರೆ ಇತ್ತು. ನಾಗರಹಾವು ಚಿತ್ರದಿಂದಲೇ ಇವರು ಕನ್ನಡ ಇಂಡಸ್ಟ್ರಿಗೆ ಬಂದ್ರು ಅನ್ನೋದು ಗೊತ್ತೇ ಇದೆ. ಜಲೀಲನಾಗಿಯೇ ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದಿದ್ದರು.

Sumalatha Ambareesh Emotional Post on Ambi Birthday

ಎಂದೆಂದಗೂ ಪ್ರೀತಿಸುವ ವ್ಯಕ್ತಿ

(ಚಿತ್ರ ಕೃಪೆ: ಸುಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್)

ಮೊದಲ ಚಿತ್ರವೇ ಸೂಪರ್ ಹಿಟ್

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಒಟ್ಟಿಗೆ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಂಬರೀಶ್ ಒಂದು ಪ್ರಶ್ನೆ ಕೇಳಿದ್ದರು.

ನಾನು ಮತ್ತು ವಿಷ್ಣುವರ್ಧನ್ ಒಟ್ಟಿಗೆ ಸ್ಟಾರ್ ಆಗ್ತೀರಿ ಅಂತೀರಾ. ಅದು ಹೇಗೆ ಸಾಧ್ಯ. ನಾನು ಈ ಚಿತ್ರದಲ್ಲಿ ಒಂದು ಸಣ್ಣ ರೋಲ್ ಮಾಡಿದ್ದೇನೆ. ವಿಷ್ಣುವರ್ಧನ್ ಈ ಚಿತ್ರ ಹೀರೋ ಆಗಿದ್ದಾರೆ. ನಾನು ಹೇಗೆ ಅಂತಲೂ ಕೇಳಿದ್ದರು. ಇದಕ್ಕೆ ಅವರು ಹೇಳಿದ್ದರು. ನೋಡ್ತಾ ಇರಿ, ನೀವು ಇಬ್ಬರೂ ಶೈನ್ ಆಗ್ತೀರಾ ಅಂತಲೇ ಹೇಳಿದ್ದರು. ಅದು ಮುಂದೆ ಪುಟ್ಟಣ್ಣನವರು ಹೇಳಿದಂತೇನೆ ಆಯಿತು.

ರಂಗನಾಯಕಿ ಚಿತ್ರ ಸುಮ್ನೇನಾ

ಅಂಬರೀಶ್ ಅವರು ಕನ್ನಡದ ಅದ್ಭುತ ಚಿತ್ರಗಳಲ್ಲಿ ನಟಿಸಿದರು. ಪುಟ್ಟಣ್ಣನವರ ಸಿನಿಮಾಗಳಲ್ಲಿ ಅಭಿನಯಿಸಿದರು. ರಂಗನಾಯಕಿ ಅದ್ಭುತ ಚಿತ್ರವೇ ಆಗಿದೆ.

ಈ ಚಿತ್ರದಲ್ಲಿ ರಾಮಣ್ಣ ಅನ್ನುವ ಪಾತ್ರ ಮಾಡಿದರು. ಈ ಪಾತ್ರ ನಿಜಕ್ಕೂ ಅದ್ಭುತವಾಗಿಯೇ ಇತ್ತು. ಅಂಬರೀಶ್ ಅವರು ಈ ಸಿನಿಮಾದ ಮೂಲಕವೂ ಹೆಚ್ಚು ಜನರಿಗೆ ಇಷ್ಟ ಆಗಿದ್ದರು ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed