Maa Inti Bangaaram Movie: ಸಮಂತಾ ಜಬರ್‌ದಸ್ತ್ ಆ್ಯಕ್ಷನ್; ‘ಮಾ ಇಂಟಿ ಬಂಗಾರಂ’ ಟ್ರೈಲರ್ ಔಟ್ | | ACTPnews

Samantha Maa Inti Bangaaram Movie Official Trailer Release


ಮಾ ಇಂಟಿ ಬಂಗಾರಂ…

ಸಮಂತಾ ರುತ್ ಪ್ರಭು ಇಲ್ಲಿ ಭೂಗತ ಲೋಕದ ಲೇಡಿ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಇದೆಲ್ಲ ಹಳೆ ಕತೆ ಬಿಡಿ. ಹೊಸ ಕತೆ ಏನೂ ಅಂದರೆ, ಈ ಸಿನಿಮಾದಲ್ಲಿ ಸಮಂತಾ ಒಬ್ಬ ಸಾಮಾನ್ಯ ಮಹಿಳೆನೇ ಆಗಿದ್ದಾರೆ.
ಚಿತ್ರದ ರಿಲೀಸ್ ಮುಂದಕ್ಕೆ

(ಚಿತ್ರ ಕೃಪೆ: ಸಮಂತಾ ರುತ್ ಪ್ರಭು ಇನ್‌ಸ್ಟಾಗ್ರಾಮ್)

ದೂದ್ ಪೇಡ ದಿಗಂತ್ ಅವರನ್ನ ಮದುವೆ ಆಗಿರುತ್ತಾರೆ. ಮದುವೆ ಆಗಿಯೇ ಸಂಪ್ರದಾಯಸ್ತರ ದೊಡ್ಡ ಕುಟುಂಬಕ್ಕು ಕಾಲಿಡುತ್ತಾರೆ. ಆದರೆ, ಇವರಿಗೆ ಏನಂದ್ರೆ ಏನೂ ಗೊತ್ತಿರೋದಿಲ್ಲ. ಮಹಿಳೆಯರು ಮಾಡುವ ದೈನಂದಿನ ಕೆಲಸವೂ ತಿಳಿದಿರೋದಿಲ್ಲ.

ಬಂದೂಕು ಲೇಡಿ

ಆದರೆ, ಸಮಂತಾ ರುತ್ ಪ್ರಭು ಬಂದೂಕು ಹಿಡಿದರೆ ಆಯಿತು. ಪಕ್ಕಾ ಟಾರ್ಗೆಟ್‌ಗೇನೆ ಹೊಡೀತಾರೆ. ಆ್ಯಕ್ಷನ್‌ಗೆ ನಿಂತರೂ ಆಯಿತು. ಎದುರಾಳಿ ಪಕ್ಕಾ ಮಟಾಷ್ ಬಿಡಿ.

ಆ ರೀತಿಯ ಪಾತ್ರದಲ್ಲಿಯೇ ಸಮಂತಾ ರುತ್ ಪ್ರಭು ಇಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಅವರ ಪತಿಯ ಪಾತ್ರದಲ್ಲಿ ಕನ್ನಡದ ದೂದ್ ಪೇಡ ದಿಂಗತ್ ನಟಿಸಿದ್ದಾರೆ.

ಇವರಿಗೆ ಇಲ್ಲಿ ಆ್ಯಕ್ಷನ್ ಏನೂ ಇದ್ದಂತೆ ಕಾಣೋದಿಲ್ಲ. ಏನೇ ಇದ್ದರೂ ಅದು ಸಮಂತಾ ರುತ್ ಪ್ರಭು ಅವರಿಗೇನೆ ಅನ್ನೋದನ್ನ ಟ್ರೈಲರ್ ಹೇಳುತ್ತದೆ.

ಚಿತ್ರದ ರಿಲೀಸ್ ಮುಂದಕ್ಕೆ

ಈ ಚಿತ್ರದ ರಿಲೀಸ್ ಮುಂದೆ ಹೋಗಿದೆ. ಈ ಮೇ ತಿಂಗಳ 15 ರಂದು ಇದು ರಿಲೀಸ್ ಆಗುವುದಿತ್ತು. ಆದರೆ, ಇದು ಮುಂದೆ ಹೋಗಿದೆ. ಈ ಡೇಟ್‌ಗೆ ಈ ಚಿತ್ರ ರಿಲೀಸ್ ಆಗುತ್ತಿಲ್ಲ.

Samantha Maa Inti Bangaaram Movie Official Trailer Release

ಚಿತ್ರದ ಡೈರೆಕ್ಟರ್ ಯಾರು

(ಚಿತ್ರ ಕೃಪೆ: ಸಮಂತಾ ರುತ್ ಪ್ರಭು ಇನ್‌ಸ್ಟಾಗ್ರಾಮ್)

ಬದಲಾಗಿ ಈ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಅಂದ್ರೆ ಜೂನ್-19 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಒಂದು ಹೊಸ ಡೇಟ್ ಚಿತ್ರದ ಟ್ರೈಲರ್ ಕೊನೆಯಲ್ಲೂ ಇದೆ.

ಚಿತ್ರದ ಡೈರೆಕ್ಟರ್ ಯಾರು

ಮಾ ಇಂಟಿ ಬಂಗಾರಂ ಚಿತ್ರವನ್ನ ಬಿ.ವಿ.ನಂದನಿ ರೆಡ್ಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

ಆದರೆ, ತನ್ನ ಈ ಒಂದು ಪಾಸ್ಟ್‌ನಿಂದಲೇ ಈಕೆಯ ಮನೆಯ ಮೇಲೂ ದಾಳಿ ಆಗುತ್ತದೆ. ಆಗ ಸಮಂತಾ ಹೇಗೆ ತನ್ನ ಫ್ಯಾಮಿಲಿಯನ್ನ ರಕ್ಷಿಸುತ್ತಾಳೆ ಅನ್ನುವುದು ಒಟ್ಟು ಚಿತ್ರದ ತಿರುಳೇ ಆಗಿದೆ.

ಸಮಂತಾ ನಿರ್ಮಾಣದ ಚಿತ್ರ

ಮಾ ಇಂಟಿ ಬಂಗಾರಂ ಚಿತ್ರವನ್ನ ನಟಿ ಸಮಂತಾ ಅವರೇ ನಿರ್ಮಾಣ ಮಾಡಿದ್ದಾರೆ. ತಮ್ಮ Tralala Moving Pictures ಅಡಿಯಲ್ಲಿಯೇ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ಸಮಂತಾ ತಮ್ಮ ಅಭಿಮಾನಿಗಳನ್ನ ವಿಭಿನ್ನವಾಗಿಯೇ ರಂಜಿಸಲಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed