Last Updated:
West Bengal: ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೆಟ್ಟಿರುವ ಆ ಒಂದು ದಾಳಕ್ಕೆ ತೃಣಮೂಲ ಕಾಂಗ್ರೆಸ್ ಪಾಳೆಯ ತಲ್ಲಣಗೊಂಡಿದ್ದು, ದೀದಿ ಫುಲ್ ಶಾಕ್ ಆಗಿದ್ದಾರೆ ಎನ್ನುವ ಮಾತು ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಸುವೇಂದು ಹೆಣೆದಿರುವ ಆ ಮಾಸ್ಟರ್ ಪ್ಲಾನ್ ಆದ್ರೂ ಏನು ಗೊತ್ತಾ?
ಪಶ್ಚಿಮ ಬಂಗಾಳದ (West Bengal) ರಾಜಕೀಯ ಸಮರದಲ್ಲಿ ಈಗ ಮತ್ತೊಂದು ಹೈ-ವೋಲ್ಟೇಜ್ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ನೆಟ್ಟಿರುವ ಆ ಒಂದು ದಾಳಕ್ಕೆ ತೃಣಮೂಲ ಕಾಂಗ್ರೆಸ್ ಪಾಳೆಯ ತಲ್ಲಣಗೊಂಡಿದ್ದು, ದೀದಿ (Mamata Banerjee) ಫುಲ್ ಶಾಕ್ ಆಗಿದ್ದಾರೆ ಎನ್ನುವ ಮಾತು ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಸುವೇಂದು ಹೆಣೆದಿರುವ ಆ ಮಾಸ್ಟರ್ ಪ್ಲಾನ್ (Master Plan) ಆದ್ರೂ ಏನು ಗೊತ್ತಾ?
ಏನದು ಆಘಾತ?
ಮಮತಾ ಬ್ಯಾನರ್ಜಿ ಸಿಟ್ಟಿಗೆ ಗುರಿಯಾಗಿ ಮೂಲೆಗುಂಪಾಗಿದ್ದ ಆ ಮಹಿಳಾ ಸಿಂಹಿಣಿಗೆ ಈಗ ಸಿಕ್ಕಿರುವ ಬ್ರಹ್ಮಾಸ್ತ್ರದಂತಹ ಜವಾಬ್ದಾರಿ ಯಾವುದು? ಬಂಗಾಳದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಚರ್ಚಿತ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ್ದ ಆ ಐಪಿಎಸ್ ಅಧಿಕಾರಿಯ ಎಂಟ್ರಿ, ದೀದಿ ಸಾಮ್ರಾಜ್ಯಕ್ಕೆ ಯಾವ ಹೊಸ ಆಘಾತ ತರಲಿದೆ ಎಂಬ ರೋಚಕ ವಿವರ ಇಲ್ಲಿದೆ.
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸುವ ಬೆಳವಣಿಗೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯವಾಗಿ ತೀವ್ರ ಹಿನ್ನಡೆಯಂತೆ ಕಾಣುವ ನಿರ್ಧಾರವೊಂದನ್ನು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸರ್ಕಾರ ತೆಗೆದುಕೊಂಡಿದೆ. ಒಂದು ಕಾಲದಲ್ಲಿ ಮಮತಾ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯದಿಂದ ಹಿನ್ನಡೆಯಾದ ಹಿರಿಯ ಐಪಿಎಸ್ ಅಧಿಕಾರಿ ದಮಯಂತಿ ಸೇನ್ ಅವರಿಗೆ ಈಗ ಸುವೇಂದು ಸರ್ಕಾರ ಮಹತ್ವದ ಜವಾಬ್ದಾರಿ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
2012ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಪ್ರಕರಣದ ತನಿಖೆಯಿಂದಲೇ ದಮಯಂತಿ ಸೇನ್ ರಾಷ್ಟ್ರದ ಗಮನ ಸೆಳೆದಿದ್ದರು. ಆಗ ಅವರು ಕೋಲ್ಕತ್ತಾ ಪೊಲೀಸ್ ಕ್ರೈಂ ವಿಭಾಗದ ಜಂಟಿ ಆಯುಕ್ತರಾಗಿದ್ದರು. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ರಾಜಕೀಯ ವಿವಾದಗಳು ಉಂಟಾಗಿದ್ದರೂ, ದಮಯಂತಿ ಸೇನ್ ನೇತೃತ್ವದ ತಂಡ ದೃಢವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು. ಆದರೆ, ಇದೇ ಪ್ರಕರಣದ ಬಳಿಕ ಅವರನ್ನು ಪ್ರಮುಖ ಹುದ್ದೆಯಿಂದ ದೂರ ಸರಿಸಲಾಗಿತ್ತು ಎಂಬ ಆರೋಪಗಳು ಮಮತಾ ಸರ್ಕಾರದ ಮೇಲೆ ಕೇಳಿಬಂದಿದ್ದವು.
ಇದೀಗ ಸುವೇಂದು ಅಧೀಕಾರಿಯ ನೇತೃತ್ವದ ಬಿಜೆಪಿ ಸರ್ಕಾರ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗೆ ರಚಿಸಿರುವ ವಿಶೇಷ ಆಯೋಗಕ್ಕೆ ದಮಯಂತಿ ಸೇನ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿದೆ. ವಿಶೇಷವಾಗಿ ತೃಣಮೂಲ ಕಾಂಗ್ರೆಸ್ ಆಡಳಿತದ 15 ವರ್ಷಗಳಲ್ಲಿ ನಡೆದ ಮಹಿಳಾ ದೌರ್ಜನ್ಯ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸುವ ಹೊಣೆಗಾರಿಕೆ ಈ ಆಯೋಗಕ್ಕಿದೆ. ಇದು ಕೇವಲ ಆಡಳಿತಾತ್ಮಕ ನೇಮಕಾತಿ ಅಲ್ಲ, ರಾಜಕೀಯವಾಗಿ ಮಮತಾ ಬ್ಯಾನರ್ಜಿ ವಿರುದ್ಧದ ದೊಡ್ಡ ಸಂದೇಶ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ದಮಯಂತಿ ಸೇನ್ ಅವರ ಮರುಪ್ರವೇಶ ಮಮತಾ ಬ್ಯಾನರ್ಜಿ ಅವರಿಗೆ ಅಸಹಜ ಪರಿಸ್ಥಿತಿ ಉಂಟುಮಾಡಬಹುದು. ಕಾರಣ, ಪಾರ್ಕ್ ಸ್ಟ್ರೀಟ್ ಪ್ರಕರಣದ ಸಂದರ್ಭದಲ್ಲಿನ ವಿವಾದಗಳು ಮತ್ತೆ ಚರ್ಚೆಗೆ ಬರಬಹುದು. ಇದು ಸುವೇಂದು ಅಧಿಕಾರಿ ಅವರು ದೀದಿಗೆ ಕೊಟ್ಟಿರುವ ರಾಜಕೀಯ ಟಕ್ಕರ್ ಎಂದೇ ಹೇಳಲಾಗುತ್ತಿದೆ.













