Actress: ಸೋಶಿಯಲ್ ಮೀಡಿಯಾ ತೊರೆದ ಖ್ಯಾತ ನಟಿ; ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ | | ACTPnews

News18

[ad_1]

Last Updated:

ತಂತ್ರಜ್ಞಾನದ ಸಹಾಯದಿಂದ ಖಾಸಗಿ ಫೋಟೋಗಳನ್ನು ತಿರುಚಿ, ಅಸಭ್ಯ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಜನಪ್ರಿಯ ನಟಿ ಐಶ್ವರ್ಯ ಲಕ್ಷ್ಮಿ (Actress Aishwarya Lekshmi) ಇನ್‌ಸ್ಟಾಗ್ರಾಮ್‌ನಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.

News18
News18

ಸಾಮಾಜಿಕ ಜಾಲತಾಣಗಳು (Social Media) ಇಂದು ಸಿನಿಮಾ ತಾರೆಯರಿಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಪ್ರಮುಖ ವೇದಿಕೆಯಾಗಿವೆ. ಆದರೆ ತಂತ್ರಜ್ಞಾನದ ಸಹಾಯದಿಂದ ಖಾಸಗಿ ಫೋಟೋಗಳನ್ನು ತಿರುಚಿ, ಅಸಭ್ಯ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಜನಪ್ರಿಯ ನಟಿ ಐಶ್ವರ್ಯ ಲಕ್ಷ್ಮಿ (Actress Aishwarya Lekshmi) ಇನ್‌ಸ್ಟಾಗ್ರಾಮ್‌ನಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಚಿತ್ರಗಳನ್ನು ಅನುಮತಿಯಿಲ್ಲದೆ ಎಐ ಮೂಲಕ ಬದಲಾಯಿಸಿ ಬಳಸುತ್ತಿರುವುದನ್ನು ಸಹಿಸಲಾಗದೆ ಅವರು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ನಟಿ ಐಶ್ವರ್ಯ ಲಕ್ಷ್ಮಿ ಫೋಟೋಗಳನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯ ಮೂಲಕ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಅವರಿಗೆ ತೀವ್ರ ಬೇಸರ ಮೂಡಿಸಿದೆ. ತಮ್ಮ ಚಿತ್ರಗಳನ್ನು ಈ ರೀತಿಯಲ್ಲಿ ಬದಲಾಯಿಸಿ ಪ್ರದರ್ಶಿಸುವುದನ್ನು ತಾವು ಎಂದಿಗೂ ಇಷ್ಟಪಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ ಅಸಭ್ಯ ಚಿತ್ರಗಳನ್ನು ಸ್ವತಃ ನೋಡಲು ಕೂಡ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಈ ಸಮಸ್ಯೆ ಸಮಾಜದಲ್ಲಿ ಇನ್ನೂ ಮುಂದುವರಿದಿರಬಹುದು. ಆದರೆ, ಅದರಿಂದ ದೂರ ಉಳಿಯುವ ಮೂಲಕ ತಾವು ಮಾನಸಿಕ ನೆಮ್ಮದಿ ಕಂಡುಕೊಂಡಿದ್ದೇನೆ ಎಂಬುದು ಐಶ್ವರ್ಯ ಲಕ್ಷ್ಮಿ ಅವರ ಅಭಿಪ್ರಾಯ. ತಂತ್ರಜ್ಞಾನ ಬೆಳೆಯುತ್ತಿರುವಂತೆ ಅದರ ಬಳಕೆಯಲ್ಲಿಯೂ ಜವಾಬ್ದಾರಿ ಇರಬೇಕು. ಒಬ್ಬರ ಅನುಮತಿಯಿಲ್ಲದೆ ಅವರ ಚಿತ್ರಗಳನ್ನು ತಿರುಚಿ ಬಳಸುವುದು ವೈಯಕ್ತಿಕ ಗೌರವ ಮತ್ತು ಖಾಸಗಿತನಕ್ಕೆ ಧಕ್ಕೆ ತರುವ ಸಂಗತಿಯಾಗಿದೆ.

ಇದನ್ನೂ ಓದಿ: JP Tuminad: ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಸು ಫ್ರಂ ಸೋ ನಟ! ಲೇಡಿ ಸೂಪರ್ ಸ್ಟಾರ್ ಜೊತೆ ಜೆಪಿ ತುಮಿನಾಡ್!

ಐಶ್ವರ್ಯ ಲಕ್ಷ್ಮಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿಲ್ಲ. ಅವರನ್ನು ಮತ್ತೆ ಸಾಮಾಜಿಕ ಜಾಲತಾಣಕ್ಕೆ ಕರೆತರಲು ಅವರ ನಿರ್ವಹಣಾ ತಂಡ ಪ್ರಯತ್ನಿಸಿದ್ದರೂ, ನಟಿ ತಮ್ಮ ನಿರ್ಧಾರವನ್ನು ಬದಲಾಯಿಸಿಲ್ಲ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳಬೇಕು ಎಂಬ ಒತ್ತಡಕ್ಕಿಂತ ತಮ್ಮ ನೆಮ್ಮದಿಗೆ ಆದ್ಯತೆ ನೀಡುವುದು ಮುಖ್ಯ ಎಂದು ಭಾವಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದರಿಂದ ಕೆಲವು ಬ್ರ್ಯಾಂಡ್ ಒಪ್ಪಂದಗಳು ಕೈತಪ್ಪುವ ಸಾಧ್ಯತೆ ಇದೆ. ಇಂದಿನ ಚಿತ್ರರಂಗದಲ್ಲಿ ನಟ-ನಟಿಯರ ಸಾಮಾಜಿಕ ಜಾಲತಾಣದ ಜನಪ್ರಿಯತೆ ಜಾಹೀರಾತು ಮತ್ತು ಪ್ರಚಾರದ ಅವಕಾಶಗಳ ಮೇಲೂ ಪ್ರಭಾವ ಬೀರುತ್ತದೆ. ಆದರೂ, ಇಂತಹ ಅವಕಾಶಗಳಿಗಾಗಿ ತಮ್ಮ ವೈಯಕ್ತಿಕ ನೆಮ್ಮದಿಯನ್ನು ಬಲಿಕೊಡಲು ತಾವು ಸಿದ್ಧರಿಲ್ಲ ಎಂಬ ಸಂದೇಶವನ್ನು ನಟಿ ನೀಡಿದ್ದಾರೆ.

ಇತರರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿ ತಾವೂ ಅದೇ ರೀತಿ ವರ್ತಿಸುವ ಅಗತ್ಯವಿಲ್ಲ. ತಮ್ಮ ನೈಜ ಬದುಕಿಗೆ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಟಿಸಲು ಇಷ್ಟವಿಲ್ಲ ಎಂದು ಐಶ್ವರ್ಯ ಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed