Premada Oorali Movie: 3ನೇ ವಾರಕ್ಕೆ ಕಾಲಿಟ್ಟ ‘ಪ್ರೇಮದ ಊರಲಿ’; ಚಿತ್ರಮಂದಿರಗಳಲ್ಲಿ ಇನ್ನೂ ಕಡಿಮೆಯಾಗದ ಕ್ರೇಜ್! | | ACTPnews

3 ನೇ ವಾರಕ್ಕೆ ಕಾಲಿಟ್ಟ ಪ್ರೇಮದ ಊರಲಿ!(ಚಿತ್ರ ಕೃಪೆ: ನಾಯಕ ನಟ ಶ್ರೀರಾಮ್ ಇನ್​ಸ್ಟಾಗ್ರಾಮ್)


Last Updated:

ಪ್ರೇಮದ ಊರಲಿ ಸಿನಿಮಾ 3ನೇ ವಾರಕ್ಕೆ ಕಾಲಿಟ್ಟಿದೆ. ಅಷ್ಟೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶೋಗಳು ದಿನೇ ದಿನೇ ಹೌಸ್‌ಫುಲ್ ಆಗುತ್ತಿವೆ. ಬುಕ್ ಮೈ ಶೋದಲ್ಲೂ ಟಿಕೆಟ್ ಈಗಲೂ ಸೋಲ್ಡ್ ಔಟ್ ಆಗುತ್ತಿವೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

3 ನೇ ವಾರಕ್ಕೆ ಕಾಲಿಟ್ಟ ಪ್ರೇಮದ ಊರಲಿ!(ಚಿತ್ರ ಕೃಪೆ: ನಾಯಕ ನಟ ಶ್ರೀರಾಮ್ ಇನ್​ಸ್ಟಾಗ್ರಾಮ್)
3 ನೇ ವಾರಕ್ಕೆ ಕಾಲಿಟ್ಟ ಪ್ರೇಮದ ಊರಲಿ!(ಚಿತ್ರ ಕೃಪೆ: ನಾಯಕ ನಟ ಶ್ರೀರಾಮ್ ಇನ್​ಸ್ಟಾಗ್ರಾಮ್)

ಪ್ರೇಮದ ಊರಲಿ ಚಿತ್ರ (Premada Oorali Movie) ಮೂರನೇ ವಾರಕ್ಕೆ ಕಾಲಿಟ್ಟಿದೆ. ಸುಮ್ನೆ ಕಾಲಿಟ್ಟಿಲ್ಲ. ಭರ್ಜರಿ ಪ್ರದರ್ಶನ ಕಾಣುತ್ತಿವೆ. ಬುಕ್ ಮೈ ಶೋದಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗುತ್ತಿವೆ. Word of mouth ನಿಂದಲೇ ಚಿತ್ರ ದಿನವೇ ದಿನೇ ಎಲ್ಲರ ಮನೆ ಮತ್ತು ಮನವನ್ನ ತಲುಪುತ್ತಲೇ ಇದೆ. ಈ ರೀತಿ ಹಿಟ್ ಸದ್ಯದ ದಿನಗಳಲ್ಲಿ ಆಗಿರಲಿಲ್ಲ. ಕಳೆದ ವರ್ಷ ಸು ಫ್ರಮ್ ಸೋ ಚಿತ್ರ (Su from So Movie) ಕೂಡ ಇದೇ ರೀತಿನೇ ಹಿಟ್ ಆಗಿತ್ತು. ಇದೀಗ ಪ್ರೇಮದ ಊರಲಿ ಸಿನಿಮಾ (Premada Oorali Movie) ಆ ಗೆಲುವನ್ನ ಕಂಡಿದೆ. ಥಿಯೇಟರ್‌ಗಳಿಗೆ ಜೀವ ಕಳೆ ತಂದಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೂರನೇ ವಾರಕ್ಕೆ ಕಾಲಿಟ್ಟ….

ಪ್ರೇಮದ ಊರಲಿ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಸೆಪ್ಟೆಂಬರ್-25 ರಂದು ಈ ಸಿನಿಮಾ ತೆರೆ ಕಂಡಿತ್ತು. ಮೊದಲ ದಿನ ಈ ಚಿತ್ರದ ಕಲೆಕ್ಷನ್ ಅಷ್ಟೇನೂ ಆಗಿರಲಿಲ್ಲ.
Sandalwood Premada Oorali Movie Successful Run-in 3rd Week

3 ನೇ ವಾರಕ್ಕೆ ಕಾಲಿಟ್ಟ ಪ್ರೇಮದ ಊರಲಿ
(ಚಿತ್ರ ಕೃಪೆ: ಪ್ರೇಮದ ಊರಲಿ ಟೀಮ್)

ಆದರೆ, ಹೋಗ್ತಾ ಹೋಗ್ತಾ ಈ ಸಿನಿಮಾ Word of mouth ನಿಂದ ಓಡ್ತಾನೇ ಇದೆ. ಚಿತ್ರಮಂದಿರಗಳು ತುಂಬುತ್ತಲೇ ಇವೆ. ಹಳ್ಳಿಗಳ ಥಿಯೇಟರ್ ಅಲ್ಲಿ ಪೊಲೀಸರು ನಿಲ್ಲುವಷ್ಟು ಜನ ಬರ್ತಿದ್ದಾರೆ.

ಬುಕ್ ಮೈ ಶೋ…

ಸಿಂಗಲ್ ಥಿಯೇಟರ್ ಅಷ್ಟೆ ಅಲ್ಲ. ಮಲ್ಟಿಪ್ಲೆಕ್ಸ್ ಅಲ್ಲೂ ಪ್ರೇಮದ ಊರಲಿ ಸಿನಿಮಾ ಇದೆ. ಬುಕ್ ಮೈ ಶೋದಲ್ಲಿ ಈ ಚಿತ್ರದ ಟಿಕೆಟ್ ಅಷ್ಟೆ ತ್ವರಿತಗತಿಯಲ್ಲಿ ಸೋಲ್ಡ್ ಆಗುತ್ತಿವೆ.

ಆ ರೀತಿನೇ ಈ ಚಿತ್ರದ ಕ್ರೇಜ್ ಇದೆ. ರಂಗಾಯಣ ರಘು ಬಿಟ್ಟರೆ, ಈ ಚಿತ್ರದಲ್ಲಿ ಎಲ್ಲರೂ ಹೊಸಬರೇ ಇದ್ದಾರೆ. ನಾಯಕ ನಟ ಶ್ರೀರಾಮ್ ಒಂದು ಸಿನಿಮಾ ಮಾಡಿದ್ದಾರೆ.

ಆದರೆ, ಇವರು ಈ ಚಿತ್ರದ ಮೂಲಕ ಮತ್ತಷ್ಟು ಜನರನ್ನ ರೀಚ್ ಆಗಿದ್ದಾರೆ. ಅತಿ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದಲ್ಲಿ ಸಂತೋಷ ಅನ್ನುವ ರೈತನ ಮಗನಾಗಿ ಅಭಿನಯಿಸಿದ್ದಾರೆ.

Sandalwood Premada Oorali Movie Successful Run-in 3rd Week

ಮೂರನೇ ವಾರಕ್ಕೆ ಕಾಲಿಟ್ಟ….
(ಚಿತ್ರ ಕೃಪೆ: ಮನೋಜ್ ಕುಮಾರ್ ಇನ್​ಸ್ಟಾಗ್ರಾಮ್)
ಅಪ್ಪ-ಮಗನ ಕಥೆ

ಪ್ರೇಮದ ಊರಲಿ ಸಿನಿಮಾದಲ್ಲಿ ಅಪ್ಪ ಮತ್ತು ಮಗನ ಕಥೆ ಇದೆ. ಡೈರೆಕ್ಟರ್ ಮನೋಜ್ ಕುಮಾರ್ ಹಳ್ಳಿ ಕಥೆ ಹೇಳಿದ್ದಾರೆ. ಎಲ್ಲೂ ಬೋರ್ ಆಗೋದಿಲ್ಲ. ಎಷ್ಟು ಬೇಕೋ ಅಷ್ಟು ಹೇಳಿದ್ದಾರೆ.

ಯಾವುದೂ ಇಲ್ಲಿ ಹೆಚ್ಚಿಗೆ ಇಲ್ಲ. ಇನ್ಯಾವುದು ಇಲ್ಲಿ ಕಡಿಮೆನೂ ಇಲ್ಲ. ಆ ರೀತಿನೇ ಈ ಚಿತ್ರವನ್ನ ತೆಗೆದಿದ್ದಾರೆ. ಜನ ಕೂಡ ಈ ಸಿನಿಮಾವನ್ನ ಅಷ್ಟೆ ಪ್ರೀತಿಯಿಂದಲೇ ನೋಡುತ್ತಿದ್ದಾರೆ.

ಸುನಾದ್ ಗೌತಮ್

ಈ ಚಿತ್ರಕ್ಕೆ ಸುನಾದ್ ಗೌತಮ್ ಮ್ಯೂಸಿಕ್ ಮಾಡಿದ್ದಾರೆ. ಚಿತ್ರದ ಟೈಟಲ್ ಸಾಂಗ್ ಅನ್ನ ಮಕ್ಕಳಿಂದಲೇ ಹಾಡಿಸಿದ್ದಾರೆ. ಇದು ಚಿತ್ರದ ಮತ್ತೊಂದು ಹೈಲೈಟ್ ಅಂತಲೂ ಹೇಳಬಹುದು.

ಈ ಸಿನಿಮಾದಲ್ಲಿ ರಿಮಿಕಾ ಶಿವು, ತಪಸ್ವಿನಿ ಪೊಣಚ್ಚ, ರಂಗಾಯಣ ರಘು, ಶ್ರೀರಾಮ್, ಇಳಾ ವಿಟ್ಲಾ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಎಲ್ಲರೂ ಸಪೋರ್ಟ್ ಮಾಡಿದ್ದಾರೆ.

ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಚಿತಾ ರಾಮ್ ಹೀಗೆ ಎಲ್ಲರೂ ಈ ಚಿತ್ರವನ್ನ ಕೊಂಡಾಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed