Bigg Boss 13: ‘ಹೀಗೆ ಮಾತನಾಡಬೇಡ ಮಗನೇ’! ಮಂಜುಗೆ ಅಮ್ಮನ ಕಿವಿಮಾತು; ತಾಯಿ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಸ್ಪರ್ಧಿ | | ACTPnews

News18


Last Updated:

ಮಂಜು ಗೆ ಬಿಗ್ ಬಾಸ್ ನೀಡಿದ ವಿಶೇಷ ಸಂದೇಶ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಕನ್ಫೆಷನ್ ರೂಮಿನಲ್ಲಿ ತಾಯಿಯ ಧ್ವನಿಯನ್ನು ಕೇಳಿದ ಮಂಜು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

News18
News18

ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ (Bigg Boss Kannada Season 13) ಈ ವಾರ ಹಲವು ಘಟನೆಗಳು ವೀಕ್ಷಕರ ಗಮನ ಸೆಳೆದಿವೆ. ಮನೆಯೊಳಗಿನ ಕೆಲವು ಸ್ಪರ್ಧಿಗಳ ಮಾತು ಮತ್ತು ವರ್ತನೆ ಚರ್ಚೆಗೆ ಕಾರಣವಾಗಿದ್ದು, ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಈ ವಿಚಾರಗಳನ್ನು ಪ್ರಸ್ತಾಪಿಸುವ ನಿರೀಕ್ಷೆ ಇದೆ. ಅದರ ನಡುವೆ ಮಂಜು ಗೆ ಬಿಗ್ ಬಾಸ್ ನೀಡಿದ ವಿಶೇಷ ಸಂದೇಶ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಕನ್ಫೆಷನ್ ರೂಮಿನಲ್ಲಿ ತಾಯಿಯ ಧ್ವನಿಯನ್ನು ಕೇಳಿದ ಮಂಜು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮಾತನಾಡುವ ರೀತಿ ಮತ್ತು ಇತರರೊಂದಿಗೆ ನಡೆದುಕೊಳ್ಳುವ ವರ್ತನೆ ಹಲವು ಬಾರಿ ವಿವಾದಕ್ಕೆ ಕಾರಣವಾಗುತ್ತದೆ. ಈ ವಾರ ಮಂಜು ಮಾತುಗಳ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ಮನೆಯ ಸದಸ್ಯರಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವರ್ತನೆ ಚರ್ಚೆಯ ವಿಷಯವಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಮಂಜುನ ಕನ್ಫೆಷನ್ ರೂಮಿಗೆ ಕರೆಸಲಾಗಿದೆ. ಅಲ್ಲಿ ಅವರಿಗೆ ತಮ್ಮದೇ ಮಾತುಗಳನ್ನು ಕೇಳಿಸಲಾಗಿದೆ. ತಮ್ಮ ವರ್ತನೆಯಿಂದ ಇತರರಿಗೆ ಆಗಬಹುದಾದ ನೋವಿನ ಬಗ್ಗೆ ಯೋಚಿಸುವಂತೆ ಮಾಡುವ ಪ್ರಯತ್ನ ಇದಾಗಿದೆ ಎಂದು ಪ್ರೋಮೊದಲ್ಲಿ ತೋರಿಸಲಾಗಿದೆ.

ಮಂಜು, ನಾನು ಕಣೋ ನಿಮ್ಮ ಅಮ್ಮ. ನೀನು ಮಾತನಾಡುತ್ತಿರುವ ರೀತಿ ಸರಿಯಿಲ್ಲ. ಎಲ್ಲಾ ಕುಟುಂಬದವರು ಕುಳಿತು ನೋಡುವ ಕಾರ್ಯಕ್ರಮವಿದು. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು. ಈ ರೀತಿ ಕೆಟ್ಟ ಪದಗಳನ್ನು ಬಳಸಬಾರದು. ನನಗೆ ಬೇಸರವಾಯಿತು. ಬೇರೆ ಅವರಿಗೂ ಅದೇ ರೀತಿ ಆಗಿರುತ್ತದೆ ಎಂದು ಹೇಳಿದ್ದಾರೆ.

ತಾಯಿಯ ಈ ಮಾತುಗಳನ್ನು ಕೇಳಿದ ಮಂಜು ಭಾವುಕರಾಗಿದ್ದಾರೆ. ಕನ್ಫೆಷನ್ ರೂಮಿನಲ್ಲಿ ಕಣ್ಣೀರು ಹಾಕಿರುವ ದೃಶ್ಯ ಪ್ರೋಮೊದಲ್ಲಿ ಗಮನ ಸೆಳೆದಿದೆ.

ಸ್ಪರ್ಧಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನಿಮಗೆ ಹೇಗೆ ಪಾಠ ಕಲಿಸಬೇಕು ಅಂತ ನಮ್ಮಪ್ಪನಾಣೆ ನನಗೆ ಗೊತ್ತಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಅವರ ಈ ಮಾತುಗಳು ಈ ವಾರದ ಪಂಚಾಯಿತಿಯ ಬಗ್ಗೆ ವೀಕ್ಷಕರ ಕುತೂಹಲವನ್ನು ಹೆಚ್ಚಿಸಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed