Last Updated:
ಸಿಜೆಪಿ ಪ್ರತಿಭಟನೆಯ ಭಾಗವಾಗಿ ಉದ್ಯಾನವನವೊಂದರಲ್ಲಿ ಕುಳಿತಿದ್ದ ಬಿಜೆಪಿ ನಾಯಕನ ಪುತ್ರಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಂದ್ರ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತೊಮ್ಮೆ ಹೋರಾಟಕ್ಕೆ ಕಾಕ್ರೋಚ್ ಜನತಾ ಪಕ್ಷದ ನಾಯಕರು ಕರೆ ಕೊಟ್ಟಿದ್ರು. ದೇಶದ ಮೂಲೆ ಮೂಲೆಗಳಿಂದಲೂ ಹೋರಾಟಗಾರರು ದೆಹಲಿಯ ಬಾಗಿಲು ತಟ್ಟಿದ್ರು. ಆದ್ರೆ, ಮತ್ತೊಮ್ಮೆ ಜುಲೈ 20ರಂದು ನಡೆದಂತಹ ಘಟನೆ ಮರುಕಳಿಸಬಾರದು ಅನ್ನೋ ನಿಟ್ಟಿನಲ್ಲಿ ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ರು. ಹೋರಾಟಕ್ಕೂ ಮುನ್ನವೇ ಪ್ರತಿಭಟನೆಗೆ ಬ್ರೇಕ್ ಹಾಕಿದ್ರು. ಆದ್ರೆ, ದೆಹಲಿ ಪೊಲೀಸರು ಬಿಜೆಪಿ ನಾಯಕನ ಪುತ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮತ್ತೊಂದೆಡೆ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದ್ರು. ಜೊತೆಗೆ ಟಿಎಂಸಿ ಸಂಸದರಾದ ಡೆರೆಕ್ ಒಬ್ರೇನ್, ಪ್ರತಿಮಾ ಮಂಡಲ್ ಹಾಗೂ ಡೋಲಾ ಸೇನ್ ಅವರನ್ನು ಕೂಡ ಎಳೆದೊಯ್ದ್ರು. ಸಿಜೆಪಿ ಪ್ರತಿಭಟನೆ ಬೆಂಬಲಿಸಿ ಅರವಿಂದ್ ಕೇಜ್ರಿವಾಲ್ ಕೂಡ ತೆರಳಿದ್ದರು. ಈ ವೇಳೆ ಪೊಲೀಸರು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ವಶಕ್ಕೆ ಪಡೆದುಕೊಂಡ್ರು. ಹಾಗೆಯೇ ಜಂತರ್ ಮಂತರ್ ಬಳಿ ನಿರಶನಕ್ಕೆ ಮುಂದಾಗಿದ್ದ ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವ್ರನ್ನೂ ವಶಕ್ಕೆ ಪಡೆದು ಕರೆದೋಯ್ದ್ರು.
ಕಾಕ್ರೋಚ್‌ಗಳ ಪ್ರತಿಭಟನೆ ತಡೆದಿದ್ದಕ್ಕೆ ದಿಲ್ಲಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಭಾರೀ ಆಕ್ರೋಶ ಹೊರಹಾಕಿವೆ. ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದು, ನೀವು ಏನೇ ಮಾಡಿದ್ರೂ ನಮ್ಮ ಹೋರಾಟ ನಿಲ್ಲಲ್ಲ ಅಂತ ಗುಡುಗಿದ್ದಾರೆ. ದೇಶವನ್ನ ಅಸ್ಥಿರಗೊಳಿಸಲು ವಿಪಕ್ಷಗಳು ಮುಂದಾಗಿವೆ. ಅಲ್ಲದೆ ರಾಷ್ಟ್ರಪತಿಯವರನ್ನ ಹೋರಾಟದ ಮಧ್ಯೆ ಎಳೆದು ತರಲು ಮುಂದಾಗಿದ್ದಾರೆ ಅಂತ ಬಿಜೆಪಿ ನಾಯಕರು ಗುಡುಗಿದ್ದಾರೆ.












